|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬ್ರಿಟಿಷ್ ಮೂಲದ ಭಾರತೀಯ ಲೇಖಕ ರಸ್ಕಿನ್ ಬಾಂಡ್, ಭಾರತದಲ್ಲಿ ನೆಲೆನಿಂತು ಭಾರತೀಯತೆಯ ಕುರಿತು ಬರೆದ ಇಂಗ್ಲಿಷಿನ ಮಹತ್ವದ ಲೇಖಕರಲ್ಲಿ ಪ್ರಮುಖರು. ಹಿಮಾಚಲ ಪ್ರದೇಶದ ಕಸೌಲಿಯಲ್ಲಿ 1934ರ ಮೇ 19ರಂದು ಜನಿಸಿದ ರಸ್ಕಿನ್ ಬಾಂಡ್ ನೂರಾರು ಕತೆಗಳು, ಪ್ರಬಂಧಗಳು, ಕಾದಂಬರಿಗಳು ಹಾಗೂ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಭಾರತದ ಮಸ್ಸೂರಿಯ ಲ್ಯಾಂಡೋರ್ನ್ನಲ್ಲಿ ಅವರು ತಾವು ದತ್ತು ಪಡೆದ ಕುಟುಂಬದೊಂದಿಗೆ ವಾಸಿಸುತ್ತಾರೆ. ಭಾರತದಲ್ಲಿ ಮಕ್ಕಳ ಶಿಕ್ಷಣಕ್ಕೆ ರಸ್ಕಿನ್ ಬಾಂಡ್ ಅವರು ನೀಡಿರುವ ಸಾಹಿತ್ಯಕ ಕೊಡುಗೆಯನ್ನು ಪರಿಗಣಿಸಿ ಭಾರತದ ಕೇಂದ್ರ ಸಾಹಿತ್ಯ ಅಕಾಡೆಮಿಯು ಅವರನ್ನು 1992ರಲ್ಲಿ ಗೌರವಿಸಿದೆ. 1999ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2014ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ.
ರಸ್ಕಿನ್ ಬಾಂಡ್ ಅವರ ಕತೆಗಳು ಬಹು ಬಣ್ಣಗಳು ತುಂಬಿದ ಪ್ರಕೃತಿ - ಪರಿಸರದ ಶಬ್ದಚಿತ್ರಗಳಾಗಿ ಕಣ್ಣಿಗೆ ಬಿಂಬವಾಗುತ್ತವೆ. ಮನಸ್ಸಿಗೆ ಚಲನಚಿತ್ರಗಳಾಗಿ ತೋರುತ್ತವೆ. ಇದಕ್ಕೆ ಅನುರೂಪವಾಗಿ ಅವರು ಭಾಷೆಯನ್ನು ನುಡಿಸುತ್ತಾರೆ. ಇದರಿಂದಾಗಿ ಕತೆಗಳಿಗೆ ಸರಾಗ ಚಲನೆ ದೊರೆತು ನೇರವಾಗಿ ಮನಸ್ಸನ್ನು ಹೊಕ್ಕು ಅರ್ಥಗಳು ಬಿಚ್ಚಿಕೊಳ್ಳುತ್ತವೆ. ಇದಕ್ಕೆ ಇನ್ನೊಂದು ಕಾರಣ ನವಿರಾದ ನಿರೂಪಣೆ.
|
| | |
|
|
|
|
|
|
|
|