Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Demy Size
ISBN : 9789381503508
ಕೋಡ್ : 189623

ಇತಿಹಾಸದಿಂದ ಕಾಣೆಯಾಗಿರುವ ಹೆಣ್ಣಿನ ದನಿಯ ಪಲುಕುಗಳನ್ನು ವಿವಿಧ ನೆಲೆಗಳಿಂದ ಶೋಧಿಸುವ ಕಾರ್ಯ ಈಗ ನಡೆಯುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಜ್ಞೆ ಹರಳುಗಟ್ಟುವುದರ ಜೊತೆಜೊತೆಗೆ ಮಹಿಳಾ ದೃಷ್ಟಿಕೋನವನ್ನು ಪರಿಗಣಿಸಲೇಬೇಕಾದ ಅನಿವಾರ್ಯತೆಗೂ ಮಾನವ ಸಮಾಜ ಬಂದು ನಿಂತಿದೆ. ಭಾರತೀಯ ಮಹಿಳಾ ಹೋರಾಟದ ಚರಿತ್ರೆ, ಮಹಿಳಾ ಸಾಹಿತ್ಯ ಚರಿತ್ರೆಗಳು ಕೂಲಂಕಶ ಅಧ್ಯಯನಕ್ಕೊಳಗಾಗುವ ಸ್ತ್ಯುತ್ಯರ್ಹ ಕೆಲಸವಾಗುತ್ತಿರುವ ಹೊತ್ತಿನಲ್ಲಿ ವರ್ತಮಾನದ ಮಹಿಳಾ ಹೋರಾಟದ ವಿವಿಧ ಮಗ್ಗುಲುಗಳನ್ನೂ, ಪ್ರಯತ್ನಗಳನ್ನೂ ದಾಖಲಿಸುವ ಅಗತ್ಯವಿದೆ.

ಪ್ರಸ್ತುತ ಕೃತಿಯಲ್ಲಿ ವಿಚಾರ ಸಂಕಿರಣ ಹಾಗೂ ಸಮಾವೇಶ ಸಂದರ್ಭದ ನುಡಿಗಳನ್ನು ಬರಹರೂಪದಲ್ಲಿ ಸಂಕಲಿಸಿ ದಾಖಲಿಸಲಾಗಿದೆ. ಗತ ಹಾಗೂ ಭವಿಷ್ಯದ ಮಧ್ಯೆ ನಿಂತ ನಮ್ಮ ಹೋರಾಟದ ಅನುಭವಗಳು ಕಾಲದ ಕಠೋರ ಸತ್ಯಕ್ಕೆ ಒಳಗಾಗಿ ಲಯವಾಗಿ ಹೋಗದಿರಲೆಂಬ ಕಾಳಜಿಯಿಂದ ಅವುಗಳನ್ನು ದಾಖಲಿಸುವುದೇ ಈ ಕೃತಿ ಪ್ರಕಟನೆಯ ಒತ್ತಾಸೆಯಾಗಿದೆ. ದಿನದಿನಕ್ಕೂ ಮಹಿಳೆಯರ ಸಮಸ್ಯೆಗಳು ಹೊಸ ಹೊಸ ರೂಪ ತಾಳುತ್ತಿರುವ ಸಂದರ್ಭದಲ್ಲಿ ಮಹಿಳಾ ಹೋರಾಟಕ್ಕೆ ಹೊಸ ಬಿಕ್ಕಟ್ಟು ಸವಾಲುಗಳು ಎದುರಾಗುತ್ತಿವೆ. ಇವುಗಳನ್ನು ಎದುರಿಸಲು, ಚರಿತ್ರೆಯಾಗಿ ದಾಖಲಾದ ಮಹಿಳಾ ಹೋರಾಟಗಳ ನೆನಪುಗಳು ಅತ್ಯಮೂಲ್ಯ ಆಕರ ಸಾಮಗ್ರಿ ಸಾಧನಗಳಾಗುತ್ತವೆ.

ಹೀಗೆ, ಮಂಗಳೂರಿನಲ್ಲಿ ನಡೆದ ಒಕ್ಕೂಟದ ಮಹಿಳಾ ದಿನಾಚರಣೆಯ ಸ್ಮೃತಿ ಸಂಚಯ ‘ಇನ್ನು ಸಾಕು’ ಕೃತಿಯ ಹೆಜ್ಜೆ ಗುರುತಿನ ಹಾದಿಯನ್ನೇ ಅನುಸರಿಸಿ ಈ ಕೃತಿ ಸಂಪಾದಿತವಾಗಿದೆ. ಹೋರಾಟದ ಪಥದಲ್ಲಿನ ತಪ್ಪು-ಉಪ್ಪು, ಸಾಧಕ-ಬಾಧಕಗಳ ವಿಮರ್ಶೆ, ವಿಶ್ಲೇಷಣೆಗೆ ಬೇಕಾದ ಮಹಿಳಾ ಹೋರಾಟದ ಚರಿತ್ರೆಯ ನಿರ್ಮಿತಿಗೆ ‘ಸಾಕಾರದತ್ತ ಸಮಾನತೆಯ ಕನಸು’ ಕೃತಿಯು ಕಾಣಿಕೆ ಸಲ್ಲಿಸೀತೆಂಬ ಸದಾಶಯ ನಮ್ಮದು.

ಲೇಖಕರ ಇತರ ಕೃತಿಗಳು
10%
ಶಾಂತಿನಾಥ ದೇಸಾಯಿ (ಜೀವನ ....
ಪ್ರೀತಿ ಶುಭಚಂದ್ರ, Preeti Shubachandra
Rs. 60    Rs. 54
Best Sellers
ಟೀಕೆ-ಟಿಪ್ಪಣಿ (ಸಂಪುಟ - 1)
ಲಂಕೇಶ್ ಪಿ, Lankesh P
Rs. 180/-   Rs. 200
ಬೋಧಿಸತ್ವ : ನಾಟಕ
ಧರ್ಮಾನಂದ ಕೊಸಾಂಬಿ, Dharmanand Kosambi
Rs. 45/-   Rs. 50
ಕುಮಾರವ್ಯಾಸಭಾರತ - ತಾರ್ತ್ಪಯಸಹಿತ
ಸೇತುರಾಮ ರಾವ್ ಅ ರಾ, Sethurama Rao A R
Rs. 2500/-
ಸಿದ್ಧಾರ್ಥ್ ಆ ಮುಖ
ರವಿ ಬೆಳಗೆರೆ, Ravi Belagere
Rs. 90/-   Rs. 100

Latest Books
ಭಗತ್ ಸಿಂಗ್ ವೀರ್ ಸಾವರ್ಕರ್ : ಕ್ರಾಂತಿಯ ಕಹಳೆಯೂ ಶರಣಾಗತಿಯ ಸ್ವರವೂ
ದಿವಾಕರ ನಾ, Diwakar N
Rs. 54/-   Rs. 60
ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಕೈಪಿಡಿ
ಶಿವಕುಮಾರ್ ಮಾವಲಿ, Shivakumar Mavali
Rs. 152/-   Rs. 160
ಶ್ರೀ ರಾಮಕೃಷ್ಣ ಪರಮಹಂಸ- ಭ್ರಮೆಗ್ಳು ತೂಗುಯ್ಯಾಲೆ
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 495/-   Rs. 550
ಶ್ರೀ ಶಂಕರ ದಿಗ್ವಿಜಯ
ಕೌಂಡಿಣ್ಯ, Koundinya
Rs. 76/-   Rs. 80


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.