|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದು ಒಂದು ಆತ್ಮಕಥೆ ಅಲ್ಲ. ಮೂಲತಃ ಒಂದು ಕಾರ್ಮಿಕ ಸಂಘವೆನ್ನಬಹುದಾದ ಬ್ಯಾಂಕು ಅಧಿಕಾರಿಗಳ ಸಂಘಟನೆಯನ್ನು ದೀರ್ಘಕಾಲ ಮುನ್ನಡೆಸುವಾಗ ಗಳಿಸಿದ ಅನುಭವದ ಕುರಿತಾದ ಪುಸ್ತಕ ಇದು. ಮೇಲ್ನೋಟಕ್ಕೆ ಸೀಮಿತವಾದ ವಸ್ತುವನ್ನು ಒಳಗೊಂಡಿದೆ ಅನ್ನಿಸಿದರೂ, ಅದಕ್ಕೆ ಸಂಬಂಧಿಸಿದ ವಿಷಯಗಳ ‘ಕ್ಯಾನ್ವಾಸ್’ ವಿಸ್ತೃತವಾದುದು.
ಸಮಾಜದಲ್ಲಿಂದು ಉದ್ದಿಮೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಅದರ ವ್ಯವಸ್ಥಾಪನ ವರ್ಗದಷ್ಟೇ ಕೊಡುಗೆಯನ್ನು ಕಾರ್ಮಿಕವರ್ಗ ನೀಡಬಲ್ಲದು. ಆದರೆ ನಮ್ಮ ವ್ಯವಸ್ಥೆಯ ವಿಪರ್ಯಾಸವೆಂದರೆ ಅತ್ಯಂತ ಯಶಸ್ವಿಯಾದ ಕಂಪೆನಿಯ ಅಧ್ಯಕ್ಷರಿಗೆ ಅಥವಾ ನಿರ್ದೇಶಕರಿಗೆ ಪ್ರಶಸ್ತಿ ನೀಡಿ ಹೊಗಳುತ್ತೇವೆ. ಕಾರ್ಮಿಕರ ಮತ್ತು ಅವರ ನಾಯಕರ ಕೊಡುಗೆಯನ್ನು ನಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಯಶಸ್ಸಾದರೆ ಅದು ತಮ್ಮಿಂದ ಎಂದು ಹೇಳಿಕೊಳ್ಳೂವ ವ್ಯವಸ್ಥಾಪನ ವರ್ಗದವರೇ ಸಂಸ್ಥೆ ನಷ್ಟ ಅನುಭವಿಸಿದಾಗ ಕಾರ್ಮಿಕರ ಮೇಲೆ ಗೂಬೆ ಕೂರಿಸುವ ಸಂದರ್ಭಗಳು ಅನೇಕವಿವೆ.
ಸಾಮೂಹಿಕ ಚಳವಳಿಯನ್ನು ಮುನ್ನಡೆಸುವಾಗ ಬಂದ ಸವಾಲುಗಳು, ಏಳುವ ಪ್ರಶ್ನೆಗಳು, ಸಂಸ್ಥೆ ಮತ್ತು ಉದ್ಯೋಗಿಗಳ ಸಂಬಂಧ, ಸಾಮಾಜಿಕ ಜವಾಬ್ದಾರಿ, ರಾಜಕೀಯ ಧೋರಣೆ ಮುಂತಾದ ವಿಭಿನ್ನ ಆದರೆ ಮುಖ್ಯವಸ್ತುವಿಗೆ ಪೂರಕವಾದ ಈ ಸಂಪುಟ ಕನ್ನಡ ಸಾಹಿತ್ಯಲೋಕಕ್ಕೆ ನವೀನತಮ ಸೇರ್ಪಡೆಯಾಗಿ ಅರ್ಪಣೆಗೊಳ್ಳುತ್ತಿದೆ.
|
| |
|
|
|
|
|
|
|
|