|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಓದಿನ ಜೊತೆಗೆ ಇತರೆ ಅನುಭವಗಳನ್ನೂ ನಮ್ಮದಾಗಿಸಿಕೊಳ್ಳಬೇಕು. ಅದಕ್ಕಾಗಿ ಊರು - ಕೇರಿ - ಜಾತ್ರೆ ಸುತ್ತಬೇಕು. ಸುತ್ತಿಬಂದ ಅನುಭವವನ್ನು ನಾಲ್ಕು ಜನರ ಜೊತೆಗೆ ಹಂಚಿಕೊಳ್ಳಬೇಕು. ಮಿತ್ರರಾದ ಸಂತೋಷ್ ಆ ಕೆಲಸವನ್ನು ಸಮರ್ಥವಾಗಿ ಈ ಕೃತಿಯ ಮೂಲಕ ಮಾಡಿದ್ದಾರೆ. ಅಲ್ಲಲ್ಲಿ ನನಗೆ ನನ್ನ ಮೆಚ್ಚಿನ ಕನ್ನಡದ ಎರಡು ಪ್ರವಾಸ ಕಥನಗಳಾದ ಎ. ಎನ್. ಮೂರ್ತಿರಾಯರ "ಅಪರ ವಯಸ್ಕನ ಅಮೆರಿಕ ಯಾತ್ರೆ" ಮತ್ತು "ಅಮೆರಿಕದಲ್ಲಿ ಗೊರೂರು" ಕೂಡ ಹಾದು ಹೋದವು. ಇದರ ಇನ್ನೊಂದು ವಿಶೇಷವೆಂದರೆ ಇದನ್ನು ಆರಂಭದಿಂದಲೇ ಓದಬೇಕೆಂಬ ನಿಯಮವಿಲ್ಲ. ಸುಮ್ಮನೆ ಪುಟ ತಿರುಗಿಸಿ ಯಾವುದೇ ಅಧ್ಯಾಯ ಓದಬಹುದು. ಹಾಗಾಗಿಯೂ ಅದು ನಮ್ಮ ಓದಿನ ಅನುಭವವನ್ನು ಮುಕ್ಕಾಗಿಸುವುದಿಲ್ಲ.
- ಪಿ. ಶೇಷಾದಿ
|
ಕನ್ನಡಕ್ಕೂ ಕರ್ನಾಟಕಕ್ಕೂ ಬೇಕಿದ್ದೂ ಬೇಡವಾದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರದಲ್ಲಿ ಹುಟ್ಟಿ ಬೆಳೆದು, ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕೇರಳದಲ್ಲಿ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಸಾಹಿತ್ಯ, ಸಂಗೀತ, ಯಕ್ಷಗಾನ, ರಂಗಭೂಮಿಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಕತೆ-ಲೇಖನ-ಕವನ-ಪ್ರವಾಸಿ ಲೇಖನಗಳು ಪ್ರಕಟಗೊಂಡಿವೆ. "ಜಿಡ್ಡು ಕೃಷ್ಣಮೂರ್ತಿ"ಯವರ ಕುರಿತಾದ ಪುಸ್ತಕ ಮತ್ತು ಅವರ ಇಂಗ್ಲಿಷ್ ಬರಹಗಳ ಕನ್ನಡ ತರ್ಜುಮೆ. ಪ್ರತಿಷ್ಠಿತ ವಿದ್ಯಾಸಂಸ್ಥೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರದ್ದು. ಪ್ರಸ್ತುತ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
|
|
| |
|
|
|
|
|
|
|
|
|