|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
234 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789384486242 |
ಕೋಡ್ |
: |
189322 |
ವಿಶ್ವಕವಿಗಳ ವಿರಳ ಪಂಕ್ತಿಯಲ್ಲಿ ವಿಶಿಷ್ಟ ತೇಜಸ್ಸಿನಿಂದ ಬೆಳಗುವ ಕವಿ, ನಾಟಕಕಾರ ಇಂಗ್ಲೆಂಡಿನ ವಿಲಿಯಂ ಷೇಕ್ಸ್ಪಿಯರ್ (1564-1616). ವಿಶ್ವವಿದ್ಯಾನಿಲಯಕ್ಕೆ ಕಾಲಿಡದ ಈತ ತನ್ನ ಪ್ರತಿಭೆಯಿಂದ ಇಂದೂ ಜಗತ್ತು ಬೆರಗಾಗುವಂತೆ ಮಾನವ ಸ್ವಭಾವದ ಅನಾವರಣ ಮಾಡಿದ. ಮಾನವನ ಬದುಕನ್ನು ವಿಶಿಷ್ಟ ಒಳನೋಟಗಳಿಂದ ಪುನರ್ಸೃಷ್ಟಿ ಮಾಡಿದ. ಸಮನಿಲ್ಲದ ಇಂತಹ ಮೇರು ಪ್ರತಿಭೆಯ ಕವಿ, ನಾಟಕಕಾರನ ಆಯ್ದ 20 ನಾಟಕಗಳ ಕಥೆಯನ್ನು ಚಾರ್ಲ್ಸ್ ಮತ್ತು ಮೇರಿ ಲ್ಯಾಂಬ್ ಸರಳವಾಗಿ ಆದರೆ ಅತ್ಯಂತ ರೋಚಕವಾಗಿ ತಮ್ಮ ‘ಟೇಲ್ಸ್ ಫ್ರಂ ಷೇಕ್ಸ್ಪಿಯರ್’ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. 1807ರಲ್ಲಿ ಪ್ರಕಟಗೊಂಡ ಈ ಕಥಾನಕಗಳು ಎರಡು ಶತಮಾನಗಳ ಕಾಲದುದ್ದಕ್ಕೂ ಎಲ್ಲ ವಯೋಮಾನದವರನ್ನೂ ಸಮಾನವಾಗಿ ಆಕರ್ಷಿಸಿದೆಯಲ್ಲದೆ ಇಂದಿಗೂ ಷೇಕ್ಸ್ಪಿಯರ್ ನಾಟಕಗಳಿಗೆ ಉತ್ತಮ ಪ್ರವೇಶಿಕೆಯೆಂಬ ಪ್ರಶಂಸೆಗೆ ಪಾತ್ರವಾಗಿದೆ.
40 ವರ್ಷಗಳ ಕಾಲ ಷೇಕ್ಸ್ಪಿಯರ್ ನಾಟಕಗಳ ಅಧ್ಯಯನ, ಅಧ್ಯಾಪನಗಳಲ್ಲಿ ನಿರತರಾಗಿದ್ದ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರ ಈ ಭಾವಾನುವಾದದಲ್ಲಿ ಷೇಕ್ಸ್ಪಿಯರ್ ನಾಟಕ ಕಥಾನಕಗಳು ಚಾರ್ಲ್ಸ್ ಮತ್ತು ಮೇರಿ ಲ್ಯಾಂಬ್ರ ಮೂಲದ ಸ್ವರೂಪ, ಸರಳತೆ ಹಾಗೂ ರೋಚಕತೆಯನ್ನು ಉಳಿಸಿಕೊಂಡು ಅಚ್ಚ ಕನ್ನಡ ಭಾಷಾ ಶೈಲಿಯ ಸೊಗಸು ಮತ್ತು ಸೊಗಡುಗಳಿಂದಾಗಿ ಕನ್ನಡದಲ್ಲಿಯೇ ಹುಟ್ಟಿಬಂದವೇನೋ ಎಂಬಷ್ಟು ಸಹಜವಾಗಿ ಮೂಡಿಬಂದಿವೆ.
|
| | |
|
|
|
|
|
|
|