Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 375    
5%
Rs. 356/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಿನಯ್ ಪ್ರಕಾಶನ, Vinay Prakashana
ಈಗಿನ ಮುದ್ರಣದ ಸಂಖ್ಯೆ : 16
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 336
ಪುಸ್ತಕದ ಗಾತ್ರ : 1/8 Demy Size
ISBN : 9788192955223
ಕೋಡ್ : 187748

ಹೊಯಿಸಳೇಶ್ವರ ಶ್ರೀ ವಿಷ್ಣುವರ್ಧನನ ಕಾಂತೆ, ಹಿರಿಯರಸಿ, ಪಟ್ಟಮಹಾದೇವಿ. ಬೇಲೂರಿನಲ್ಲಿ ವಿಜಯನಾರಾಯಣದೇವರನ್ನು ಶ್ರೀ ವಿಷ್ಣು ಪ್ರತಿಷ್ಠೆ ಮಾಡಿಸಿದ ಹತ್ತಿರದಲ್ಲಿಯೆ ಶಾಂತಲಾದೇವಿ ಚೆನ್ನಕೇಶವ ದೇವರನ್ನು ಪ್ರತಿಷ್ಠೆ ಮಾಡಿಸಿದ್ದಾಳೆ. ವಿಜಯನಾರಾಯಣನ ದೇವಾಲಯದ ಪೂರ್ವದ್ವಾರದ ಬಲಗಡೆ ಶಾಂತಲಾದೇವಿ, ಶ್ರೀ ವಿಷ್ಣುವಿನ ಸಭೆಯಲ್ಲಿ ಪತಿಯ ವಾಮಭಾಗದಲ್ಲಿ ಮಂಡಿಸಿರುವ ಹಾಗೆ ಶಿಲೆಯಲ್ಲಿ ಕೆತ್ತನೆಯ ಕೆಲಸವಿದೆ. ಅದೇ ದೇವಾಲಯದ ನವರಂಗದಲ್ಲಿ, ನೈಋತ್ಯದ ಕಂಬದ ತುದಿಯ ‘ನೃತ್ಯ ಸರಸ್ವತಿ’ ಎಂಬ ಮದನಿಕಾ ವಿಗ್ರಹವು ಶಾಂತಲಾದೇವಿಯ ಪ್ರತಿಬಿಂಬವೆಂದು ಪ್ರತೀತಿ.

ಶಾಂತಲಾದೇವಿ ತನ್ನ ಧರ್ಮಗುರುಗಳ ಹೆಸರಿನಲ್ಲಿ ತನ್ನ ಇಷ್ಟದೈವವಾದ ಶಾಂತಿಜಿನನ ಪ್ರತಿಬಿಂಬವನ್ನು ಶ್ರವಣಬೆಳ್ಗೊಳದ ಚಂದ್ರಗಿರಿಯ ಮೇಲೆ ಪ್ರತಿಷ್ಠೆ ಮಾಡಿಸಿದ್ದಾಳೆ. ಹಳೆಯಬೀಡಿನ ಹೊಯಿಸಳೇಶ್ವರ-ಶಾಂತಳೇಶ್ವರ ಬೃಹತ್ ದೇವಾಲಯವು ಈ ರಾಜದಂಪತಿಗಳ ಅನ್ಯೋನ್ಯತೆಯ ನೆನಪಿಗಾಗಿ ಕೇತಮಲ್ಲನಾಯಕನು ಕಟ್ಟಿಸಿದ್ದು. ಸಕಲಮಂಗಳ ಲಕ್ಷನೆವಂತೆಯಾದ ಶಾಂತಲಾದೇವಿಯ ಗುಣಾವಳಿಗಳನ್ನು ಹಾಸನ, ಬೇಲೂರು, ಶ್ರವಣಬೆಳ್ಗೊಳಗಳ ಶಾಸನಗಳು ಮುಕ್ತಕಂಠದಿಂದ ಕೊಂಡಾಡುತ್ತವೆ.

ಕರ್ಣಾಟಕದ ಶಿಲ್ಪದಲ್ಲೂ ಶಾಸನಗಳಲ್ಲೂ ಹೀಗೆ ನೆನಪಾಗಿಸುವ ಶಾಂತಲಾದೇವಿಯ ಶಾಶ್ವತವಾದ ಹೆಸರು ಈ ಕೃತಿಯಲ್ಲಿ ಹೂವಾಗಿ ಪರಿಮಳಿಸಿ, ಹಣ್ಣಾಗಿ ರಸತುಂಬಿ, ಶಾಂತಲೆಯ ಭಗವಂತನ ಪಾದಗಳಲ್ಲಿ ಭಕ್ತಿಯಿಂದ ಸಮರ್ಪಿತವಾಗಿದೆ. ಹೊಯಿಸಳೇಶ್ವರನ ಸಾಮ್ರಾಜ್ಯ ಸಂಸಾರದ ಏರು-ತಗ್ಗುಗಳ ಕಾಂಡಪಟದ ಮೇಲೆ ರಾಜಮಾತೆಯ, ರಾಜಪತ್ನಿಯ ಗೃಹಜೀವನದ ಸಂಕಟ-ಸಮ್ಯಗಳೂ ಸುಖ-ದುಃಖಗಳೂ ಆಶೆ-ನಿರಾಶೆಗಳೂ ಇಲ್ಲಿ ಬಣ್ಣ ಬಣ್ಣವಾಗಿ ಚಿತ್ರಿತವಾಗಿದೆ. ತಾಯಿ-ಮಕ್ಕಳ, ಅರಸು-ಮಂತ್ರಿಗಳ, ರಾಜ-ಮಂತ್ರಿಗಳ, ಪತಿ-ಪತ್ನಿಯರ, ಪತ್ನಿ-ಸಪತ್ನಿಯರ, ಸಹೋದರರಲ್ಲದಿದ್ದರೂ ಸೋದರಿಕೆಯನ್ನು ಆದರ್ಶವಾಗಿ ಸಾಧಿಸಿದವರ, ಸ್ವರ್ಗ-ಮರ್ತ್ಯಗಳ ಸಂಬಂಧದ ಸೊಗಸನ್ನು ಈ ‘ಶಾಂತಲಾ’ ಅಚ್ಚುಕಟ್ಟಾಗಿ ತನ್ನಲ್ಲಿ ಅಡಕಮಾಡಿಕೊಂಡಿದೆ.

ತಂದೆಯಾದ ಮಾರಸಿಂಗಮಯ್ಯ ತಮ್ಮ ಮುದ್ದುಮಗಳಾದ ಶಾಂತಲೆಯ ನೆನಪಿಗೆ ಅಕ್ಷರರೂಪದ ಒಂದು ಮಸ್ತಿಕಲ್ಲನ್ನು ಸ್ಥಾಪಿಸಿದ್ದುದಾದರೆ, ಅದು ಈ ‘ಶಾಂತಲಾ’ ರೂಪದಲ್ಲಿ ಇದ್ದಿರಬಹುದು ಎನ್ನಿಸುತ್ತದೆ.

ಲೇಖಕರ ಇತರ ಕೃತಿಗಳು
Rs. 185    Rs. 167
Best Sellers
Contemporary English Grammar - J D Murthy
Murthy J D
Rs. 325/-
ಭಾರತದ ಇತಿಹಾಸ (6000 ಬಹುಆಯ್ಕೆ ಪ್ರಶ್ನೊತ್ತರಗಳು)
ಸದಾಶಿವ ಕೆ, Sadashiva K
Rs. 380/-   Rs. 400
ಉಕ್ಕಿದ ನೊರೆ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140
ವಡ್ಡಾರಾಧನೆ (ಸಮಗ್ರ ಅಧ್ಯಯನ)
ಹಂಪ ನಾಗರಾಜಯ್ಯ, Hampa Nagarajaiah
Rs. 360/-   Rs. 400

Latest Books
ಚಿತ್ರದುರ್ಗ ಜಿಲ್ಲಾ ದರ್ಶನ (Hard Cover)
ಮಂಜುನಾಥ್ ನಾಯಕ್, Manjunath Naik
Rs. 360/-   Rs. 400
ನಾಗಸಂದ್ರ ಭೂ ಆಕ್ರಮಣ ಚಳುವಳಿ
ಗಂಗಾಧರ ಮೂರ್ತಿ ಬಿ , Gangadhara Murthy B
Rs. 90/-   Rs. 100
ಪ್ರೀತಿಯ ನಲವತ್ತು ನಿಯಮಗಳು
ಎಲಿಫ್ ಶಫಾಕ್ , Elif Shafak
Rs. 360/-   Rs. 400
ದನೀನ ಆಸ್ಪತ್ರೆ : ಪಶುವೈದ್ಯ ಲೋಕದಲ್ಲೊಂದು ಇಣುಕು ನೋಟ
ರಮಾನಂದ ಟಿ ಎಸ್, Ramanand T S
Rs. 126/-   Rs. 140


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.