|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನಸ್ಸು ಎನ್ನುವುದನ್ನು ತಿಳಿದವರು ಯಾರು? ಸಿಗ್ಮಂಡ್ ಫ್ರಾಯ್ಡ್ ಮನಸ್ಸಿನ ರಚನೆಯ ಬಗ್ಗೆ ತನ್ನ ಸಿದ್ಧಾಂತವನ್ನು ರೂಪಿಸಿದ್ದಾನೆ. ಮನಸ್ಸಿನಲ್ಲಿ ಮೂರು ಭಾಗಗಳಿವೆ. ಮೊದಲನೆಯದು ‘ಇದ್‘. ಜನ್ಮದತ್ತವಾಗಿ ನಮ್ಮೊಡನೆ ಬರುವ ಹಸಿವು, ನೀರಡಿಕೆ, ಮೈಥುನಗಳಾದಿಗಳನ್ನು ಶತಾಯ ಗತಾಯ ಪಡೆಯಬೇಕೆನ್ನುತ್ತದೆ. ನಾಗರಿಕ ಹಾಗೂ ನೈತಿಕ ನಿಯಮಗಳನ್ನು ಲೆಕ್ಕಿಸುವುದಿಲ್ಲ. ‘ಈಗೋ‘ ಮನಸ್ಸಿನ ಎರಡನೆಯ ಭಾಗ. ‘ಇದ್‘ ಭಾಗವನ್ನು ನಿಯಂತ್ರಿಸುವುದು ಇದರ ಮುಖ್ಯ ಕೆಲಸ. ನಾಗರಿಕ ಪ್ರಪಂಚದ ರೀತಿ ನೀತಿಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಹೊಂದಿಕೊಂಡು ಬದುಕಲೆತ್ನಿಸುತ್ತದೆ. ‘ಸೂಪರ್ ಈಗೋ‘ ಮೂರನೆಯ ಭಾಗ. ಇದೂ ಸಹ ನಾಗರಿಕ ಹಾಗೂ ಕೌಟುಂಬಿಕ ಜಗತ್ತಿನ ‘ನೈತಿಕ ಸೆನ್ಸಾರ್‘ ವ್ಯವಸ್ಥೆ. ನಮ್ಮ ಸಮಾಜದ ಬಹುಪಾಲು ಜನರಲ್ಲಿ - ರಾಜಕಾರಣಿ, ಸರ್ಕಾರೀ ಅಧಿಕಾರಿಗಳು, ಪೊಲೀಸ್ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ವೈದ್ಯರು, ವ್ಯಾಪಾರಿಗಳು ಇತ್ಯಾದಿ - ‘ಇದ್‘ ಪ್ರಧಾನವಾಗಿದೆ. ಹೇಗಾದರೂ ಮಾಡಿ ಹಣ ಮಾಡಬೇಕು ಎನ್ನುವ ಪ್ರವೃತ್ತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಫ್ರಾಯ್ಡ್ ಸಿದ್ಧಾಂತಗಳು ಇಂದಿಗೆ ಹೆಚ್ಚು ಪ್ರಸ್ತುತವಾಗಿವೆ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|