|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮೋಕ್ಷಗುಂಡಂ ವಿಶ್ವೇಶ್ವರಯ್ಯ (1860-1962) ನಮ್ಮ ದೇಶದ ಅಗ್ರಗಣ್ಯ ಇಂಜಿನಿಯರ್. ಮಹಾನ್ ವಿದ್ವಾಂಸ. ಅತ್ಯುತ್ತಮ ಆಡಳಿತಗಾರ. ತಮ್ಮ ನಂಬಿಕೆಗಳೊಡನೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳದ ಶಿಸ್ತಿನ ಮನುಷ್ಯ! ಕನ್ನಡಿಗರಾದ ನಮಗೆ ವಿಶ್ವೇಶ್ವರಯ್ಯ ಎಂದರೆ ಅವರು ಕಾವೇರಿ ನದಿಗೆ ಮಂಡ್ಯದಲ್ಲಿ ನಿರ್ಮಿಸಿದ ‘ಕೃಷ್ಣರಾಜಸಾಗರ‘ ನೆನಪಿಗೆ ಬರುತ್ತದೆ. ವಾಸ್ತವದಲ್ಲಿ ವಿಶ್ವೇಶ್ವರಯ್ಯನವರು ಭಾರತಾದ್ಯಂತ ತಮ್ಮ ಸೇವೆಯನ್ನು ಸಲ್ಲಿಸಿರುವರು.
ವಿಶ್ವೇಶ್ವರಯ್ಯನವರು ಕೋಲಾರದ ಮುದ್ದೇನಹಳ್ಳಿಯವರು. ಮೈಸೂರು ಅರಸರ ಆಹ್ವಾನವನ್ನು ಮನ್ನಿಸಿ, ಮೈಸೂರು ಸಂಸ್ಥಾನದ ದಿವಾನ್ ಆಗಿ ಕಬ್ಬಿಣ ಕಾರ್ಖಾಣೆ, ಕಾಗದದ ಕಾರ್ಖಾನೆ, ಶ್ರೀಗಂಧ ತೈಲ ಕಾರ್ಖಾನೆ, ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಕೃಷಿ ವಿಶ್ವವಿದ್ಯಾನಿಲಯ, ಪಾಲಿಟೆಕ್ನಿಕ್, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ ಮುಂತಾದವನ್ನು ನಿರ್ಮಿಸಿ ಪ್ರಾತಃಸ್ಮರಣೀಯರಾಗಿದ್ದಾರೆ.
|
ಡಾ|| ಇಂದಿರಾ ಹೆಗ್ಗಡೆ ತುಳುನಾಡಿನವರು. ಕಥಾಸಾಹಿತ್ಯ,ಕಾವ್ಯ, ಕಾದಂಬರಿ ಇತ್ಯಾದಿಗಳನ್ನು ರಚಿಸಿರುವ ಇವರು ಸಂಶೋಧನ ಕ್ಷೇತ್ರದಲ್ಲಿ ಮಾಡಿದ ಹೆಚ್ಚಿನ ಪರಿಶ್ರಮದಿಂದಾಗಿ ಸಂಶೋಧನಾ ವಲಯದಲ್ಲಿಯೂ ಗಟ್ಟಿ ಹೆಜ್ಜೆ ಊರಿದವರು. ಇವರ ಬಂಟರು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ ಎಂಬ ಬೃಹತ್ ಸಂಶೋಧನಾ ಗ್ರಂಥ ಅಮೂಲ್ಯ ಆಕರಗ್ರಂಥವೆಂದು ಪರಿಗಣಿಸಲಾಗಿದೆ. ಶಂಬಾ ವಿಚಾರ ವೇದಿಕೆಯ ಸ್ಥಾಪಕ ಅಧ್ಯಕ್ಷೆಯಾಗಿ, ಇನ್ನಿತರ ಹಲವು ಸಂಘ - ಸಂಸ್ಥೆಗಳಲ್ಲಿ ಕಾರ್ಯದರ್ಶಿ, ಸದಸ್ಯೆ, ಸಂಚಾಲಕಿಯಾಗಿದ್ದು ಅವೆಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇತಿಹಾಸ ಅಕಾದೆಮಿ ಏರ್ಪಡಿಸುವ ಸಮ್ಮೇಳನಗಳಲ್ಲಿ ತಮ್ಮ ಕ್ಷೇತ್ರ ಕಾರ್ಯಾಧಾರಿತ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪ್ರವಾಸಪ್ರಿಯೆ ಇಂದಿರಾ ಹೆಗ್ಗಡೆ ಈಶಾನ್ಯ ಭಾರತದ ಏಳೂ ರಾಜ್ಯಗಳನ್ನೊಳಗೊಂಡಂತೆ ಭಾರತದ ಎಲ್ಲ ರಾಜ್ಯಗಳಲ್ಲೂ ತಮ್ಮ ಪತಿಯೊಂದಿಗೆ ಪ್ರವಾಸ ಮಾಡಿಬಂದಿದ್ದಾರೆ. ಇವರ ಬದಿ ಕಾದಂಬರಿ ನವಕರ್ನಾಟಕದಿಂದ ಪ್ರಕಟವಾಗಿದೆ. ಇವರಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಕೃತಿಯು ತುಳುವರ ಮೂಲತಾನ ಆದಿ ಆಲಡೆಗಳ ಬಗ್ಗೆ ಕ್ಷೇತ್ರ ಕಾರ್ಯಾಧಾರಿತವಾದ ಒಂದು ಸಂಸ್ಕೃತಿ ಆಚರಣೆಯ ಅಧ್ಯಯನ.
|
|
| |
|
|
|
|
|
|
|
|
|