|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾವನೆ ಬಾವಿಯಲ್ಲಿನ ನೀರಿನಂತೆ. ಭಾಷೆ ಅದನ್ನು ಹೊರತರುವ ಸಾಧನದಂತೆ. ಮನುಷ್ಯನು ತನ್ನ ಭಾವನೆ ಮತ್ತು ವಿಚಾರಗಳನ್ನು ವ್ಯಕ್ತಪಡಿಸಲು ಉಪಯೋಗಿಸುವ ಸಾರ್ಥಕ ಧ್ವನಿಗೆ ಭಾಷೆ ಎನ್ನುವರು. ಭಾಷೆಯ ಧ್ವನಿ, ಅಕ್ಷರ, ಪದ ಮತ್ತು ವಾಕ್ಯ ಇವುಗಳ ಪರಸ್ಪರ ಸಂಬಂಧವನ್ನು ತಿಳಿಸುವ ಶಾಸ್ತ್ರವೇ ವ್ಯಾಕರಣಶಾಸ್ತ್ರ. ಭಾಷೆಯನ್ನು ಬಳಸುವಾಗ ಅನುಕರಿಸಬೇಕಾದ ನಿಯಮವನ್ನು ವ್ಯಾಕರಣಶಾಸ್ತ್ರ ತಿಳಿಸುತ್ತದೆ. ಪ್ರಸ್ತುತ ಈ ವ್ಯಾಕರಣ ಪುಸ್ತಕದಲ್ಲಿ ಐದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗಿನ ನಿಯತ ಪಠ್ಯ ವಿಷಯಕ್ಕೆ ಪೂರಕವಾಗುವಂತೆ ವ್ಯಾಕರಣ ವಿಷಯವನ್ನು ಸರಳವಾಗಿ ವಿವರಿಸಲಾಗಿದೆ. ಅಲಂಕಾರ, ಛಂದಸ್ಸು, ಪತ್ರಲೇಖನ ಮತ್ತು ಪ್ರಬಂಧಗಳಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ದೊರೆಯುವುದು. ಸಾಮಾನ್ಯ ಜ್ಞಾನವೃದ್ಧಿಗೆ ನೆರವಾಗಲು ತತ್ಸಮ-ತದ್ಭವ, ಗಾದೆಗಳು, ನಾಣ್ಣುಡಿಗಳು, ಶುದ್ಧಾಶುಧ ಪದಗಳು, ವಿರುದ್ಧಾರ್ಥಕ ಪದಗಳು, ಸಮಾನಾರ್ಥಕ ಪದಗಳು ಇತ್ಯಾದಿಗಳೂ ಇವೆ. ಈ ಪುಸ್ತಕದಲ್ಲಿ ಕನ್ನಡ ವ್ಯಾಕರಣದೊಂದಿಗೆ ಇಂಗ್ಲಿಷ್ ವ್ಯಾಕರಣವನ್ನು ಸೇರಿಸಿ ಎರಡೂ ಭಾಷೆಗಳಲ್ಲಿನ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಸೂಚಿಸಿ ಪರಿಚಯಿಸಲಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಬಹುದೆಂದು ನಂಬಲಾಗಿದೆ. ಹೊಸದಾಗಿ ಕಲಿಯುವವರಿಗೂ ಈ ಪುಸ್ತಕ ಅತ್ಯಂತ ಉಪಯುಕ್ತವಾಗಲಿದೆ. ವಿದ್ಯಾರ್ಥಿಗಳು ತಮ್ಮ ವ್ಯಾಕರಣ ಜ್ಞಾನವನ್ನು ಉತ್ತಮಪಡಿಸಿಕೊಳ್ಳಲು ಈ ಪುಸ್ತಕ ನೆರವಾಗುವುದೆಂದು ಆಶಿಸಲಾಗಿದೆ.
|
| |
|
|
|
|
|
|
|
|
|