|
|

| Rs. 30 | 10% |
Rs. 27/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸ್ಟೀಫನ್ ಹಾಕಿಂಗ್ ನಮ್ಮ ನಡುವೆ ಬದುಕಿರುವ ಮಹಾನ್ ತಾತ್ವಿಕ ಭೌತಶಾಸ್ತ್ರಜ್ಞ. ಏಮಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೀರೋಸಿಸ್ ಎನ್ನುವ ಸ್ನಾಯು ನಶಿಸುವ ಬೇನೆಗೆ ತುತ್ತಾಗಿರುವ ಇವರು ಸದಾ ಕಾಲಕ್ಕೂ ಗಾಲಿ ಕುರ್ಚಿಯ ಬಂಧಿ. ಆದರೆ ಇವರ ಪ್ರಖರ ಮತಿಗೆ, ತೀಕ್ಷ್ಣ ವಿಚಾರಧಾರೆಗೆ ಯಾವುದೇ ಕುಂದಿಲ್ಲ. ಜನಸಾಮಾನ್ಯರಿಗಾಗಿ ಜನಪ್ರಿಯ ವಿಜ್ಞಾನ ಶೈಲಿಯಲ್ಲಿ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‘, ‘ದಿ ಥಿಯರಿ ಆಫ್ ಎವೆರಿಥಿಂಗ್‘, ‘ದಿ ಯೂನಿವರ್ಸಸ್‘ ಮುಂತಾದ ಕೃತಿಗಳನ್ನು ಬರೆದಿರುವರು. ಅಮೆರಿಕವು ಇರಾಕ್ ಮೇಲೆ ನಡೆಸಿದ ಯುದ್ಧವನ್ನು ‘ಕ್ರೈಮ್‘ ಎಂದು ಕರೆದರು. ‘ಪರಮಾಣು ನಿಃಶ್ಯಸ್ತ್ರೀಕರಣ‘ಕ್ಕೆ ಬೆಂಬಲ ಸೂಚಿಸಿದರು. ‘ಜಾಗತಿಕ ಆರೋಗ್ಯ‘ಕ್ಕೆ ಆದ್ಯತೆಯನ್ನು ನೀಡಿದರು. ‘ಹವಾಮಾನ ಬದಲಾವಣೆ‘ಯನ್ನು ತಡೆಗಟ್ಟಬೇಕೆಂದರು. ಭೌತಿಕವಾಗಿ ನಿಶ್ಚೇಷ್ಟಿತರಾಗಿದ್ದರೂ ಬೌದ್ಧಿಕವಾಗಿ ಜಗತ್ತಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವರು.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|