|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಲಡಾಯಿ ಪ್ರಕಾಶನ, Ladai Prakashana |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
352 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381503362 |
ಕೋಡ್ |
: |
186577 |
ಗಂಗಾಧರಮೂರ್ತಿಯವರ “ಸೂಫಿ ಕಥಾಲೋಕ” ಡಾ.ರಹಮತ್ ತರೀಕೆರೆ ತಮ್ಮ ಮುನ್ನುಡಿಯಲ್ಲಿ ಆಶಿಸುವಂತೆ ಕನ್ನಡ ಕಥಾಲೋಕವೇ ಆಗಿದೆ. ಸ್ಫುಟವಾಗಿ ಶುದ್ಧವಾಗಿ ಬರೆದಂತೆ ಇರುವ ಈ ಕಥೆಗಳು ಹೇಳಿದಂತೆಯೂ ಇವೆ. ಇವನ್ನು ಓದಿದ ನಾವು ಇತರರಿಗೆ ನಮ್ಮ ನುಡಿಯಲ್ಲೇ ಹೇಳೀದಂತೆಯೂ ಒದಗುತ್ತವೆ. ಕಥೆಗಳಿಗೆ ಇರಬೇಕಾದ ಗುಣವೆಂದರೆ ಅವುಗಳನ್ನು ಕೇಳಿಸಿಕೊಂಡ ನಮ್ಮ ಸ್ಮೃತಿಯಲ್ಲಿ ಅವು ಬಾಳಿ ಮರುಕಳಿಸುವಂತೆ ಉಳಿಸುವ ಕಥನ ಕೌಶಲ. ಈ ಕೌಶಲ್ಯ ಕಥೆ ಹೇಳುವವನ ಉಮೇದಿನಲ್ಲಿ, ಕೇಳುವವನನ್ನು ಒಲಿಸಿಕೊಳ್ಳಬೇಕೆಂಬ ಪ್ರೀತಿಯಲ್ಲಿ ಹುಟ್ಟುವಂಥದು, ಜಾಣತನದ ಪ್ರದರ್ಶನದಲ್ಲಿ ಅಲ್ಲ.
ಕಥೆಗಳನ್ನು ಕೇಳಿಸಿಕೊಳ್ಳಲು ಆಸೆಪಡುವವನು ಮಾತ್ರ ಕಥೆ ಹೇಳುವವನೂ ಆಗಬಲ್ಲ. ಕಥೆ ಹುಟ್ಟುವುದು ಕೇಳಿಸಿಕೊಳ್ಳಲು ಕುತೂಹಲಿಯಾದ ಕೂತವನೊಬ್ಬನಿದ್ದಾಗ. ಅವರಸರ ಆತುರಗಳು ಇಲ್ಲದ “ಉದಾಸೀನತೆಗೆ” ಅವಕಾಶವಿರುವ ಸಮುದಾಯದಲ್ಲಿ ಮಾತ್ರ ಈ ಇಬ್ಬರೂ ಒದಗುತ್ತಾರೆ. ಅವಳಿಜವಳಿಗಳಾಗುತ್ತಾರೆ. ಗಂಗಾಧರಮೂರ್ತಿಯವರು ಇಲ್ಲಿ ಬರೆದಿರುವುದು ಕೇವಲ ಒಂದು ಪುಸ್ತಕವಲ್ಲ. ಅವರಲ್ಲಿ ಆಳವಾಗಿರುವ ಸಾಹಿತ್ಯದ ಪ್ರೇಮ, ಜೊತೆಗೇ ಅವರಲ್ಲಿ ಸದಾ ಜಾಗೃತವಾಗಿರುವ ರಾಜಕೀಯ ಸಾಂಸ್ಕೃತಿಕ ಒತ್ತಾಸೆಗಳು ಈ ಕಥೆಗಳನ್ನು ಅವರೇ ಕೇಳಿಸಿಕೊಳ್ಳುವಂತೆ ಮಾಡಿವೆ. ಜೊತೆಗೇ ಅವರು ಪ್ರೀತಿಸುವ ಓದುಗರು ಹೇಳುವಂತೆಯೂ ಮಾಡಿವೆ.
|
| |
|
|
|
|
|
|
|
|
|