|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
656 |
ಪುಸ್ತಕದ ಗಾತ್ರ |
: |
1/4 Crown Size |
ISBN |
: |
9789386809889 |
ಕೋಡ್ |
: |
003363 |
ಸಮಕಾಲೀನ ಭಾರತ ಕುರಿತು
ಒಂದು ಪರಿಪೂರ್ಣ ಮತ್ತು ವಸ್ತುನಿಷ್ಠ ಪರಿಚಯ
ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವವೆನಿಸಿದ ಭಾರತದ ಪ್ರಗತಿಯ ಕತೆ ಸಮೃದ್ಧ ಮತ್ತು ಪ್ರೇರಣಾತ್ಮಕವಾಗಿದೆ. ಬಿಪಿನ್ಚಂದ್ರ ಮತ್ತು ಸಹಲೇಖಕರ ‘ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ’ ಗ್ರಂಥದ ಮುಂದುವರಿದ ಭಾಗವಾಗಿರುವ ಈ ಸಂಪುಟ ಭಾರತ ಎದುರಿಸಿದ ಸವಾಲುಗಳನ್ನು ಹಾಗೂ ಅದು ಸಾಧಿಸಿದ ಯಶಸ್ಸುಗಳನ್ನು ವಸಾಹತುಶಾಹಿ ಪರಂಪರೆ ಮತ್ತು ಒಂದು ಶತಮಾನದವರೆಗೆ ನಡೆದ ಸ್ವಾತಂತ್ರ್ಯ ಹೋರಾಟದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
ಈ ಗ್ರಂಥ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ಹಾಗೂ ನೆಹರುವಾದಿ ರಾಜಕೀಯ, ಆರ್ಥಿಕ ಕಾರ್ಯಕ್ರಮ ಮತ್ತು ವಿದೇಶಾಂಗ ನೀತಿ ಹೇಗೆ ವಿಕಸಿಸಲ್ಪಟ್ಟಿತು ಹಾಗೂ ಅಭಿವೃದ್ಧಿಪಡಿಸಲ್ಪಟ್ಟಿತು ಎಂಬುದನ್ನು ವಿವರಿಸುತ್ತದೆ. ಇದು ರಾಷ್ಟ್ರದ ಸದೃಢೀಕರಣ ಹಂತಗಳು, ಕೇಂದ್ರ ಮತ್ತು ರಾಜ್ಯಗಳಲ್ಲಿ ಪಕ್ಷ ರಾಜಕೀಯ, ಪಂಜಾಬ್ ಸಮಸ್ಯೆ, ಜಾತಿ ವಿರೋಧಿ ರಾಜಕಾರಣ ಮತ್ತು ಅಸ್ಪøಶ್ಯತೆಯನ್ನು ಪರಾಮರ್ಶಿಸುತ್ತದೆ.
ಭಾರತದಲ್ಲಿ ಕೋಮುವಾದದ ಬೆಳವಣಿಗೆ ಹಾಗೂ ಅದನ್ನು ಪ್ರಚ್ಛನ್ನಗೊಳಿಸುವಲ್ಲಿ ರಾಜ್ಯಾಧಿಕಾರದ ಬಳಕೆಯನ್ನು ಈ ಗ್ರಂಥ ವಿಶ್ಲೇಷಿಸುತ್ತದೆ. ಇದು 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟದ ಪತನದ ಪರಿಣಾಮವಾಗಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಉದಯ ಹಾಗೂ ನಂತರದ ರಾಜಕೀಯ ವಿದ್ಯಮಾನಗಳ ಕುರಿತು ವಿವರಿಸುತ್ತದೆ.
ಈ ಗ್ರಂಥ 1991ರಿಂದೀಚೆಯ ಭಾರತೀಯ ಆರ್ಥಿಕ ಸುಧಾರಣೆಗಳು ಹಾಗೂ ವಿಸ್ತøತ ಭೂಸುಧಾರಣೆಗಳು, ಮತ್ತು ಹಸಿರು ಕ್ರಾಂತಿಯಲ್ಲದೇ, ಹೊಸ ಸಹಸ್ರಮಾನದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಸಾಧನೆಗಳು ಮತ್ತು ವೈಫಲ್ಯಗಳ ಮೌಲ್ಯಮಾಪನ ಮಾಡುತ್ತದೆ. ಅದರೊಂದಿಗೆ ಜವಾಹರ್ಲಾಲ್ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್, ರಾಜೀವ್ ಗಾಂಧಿ, ವಿಶ್ವನಾಥ ಪ್ರತಾಪ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನ್ಮೋಹನ್ ಸಿಂಗ್ ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾಗಿ ಪರಿಚಯಿಸುತ್ತ ಪ್ರಗತಿಪಥದಲ್ಲಿರುವ ದೇಶವೊಂದರ ಸಂಚಲನೆ ಕುರಿತು ಗಣನೀಯ ಮೇಲ್ನೋಟವೊಂದನ್ನು ಒದಗಿಸುತ್ತದೆ.
|
| | |
|
|
|
|
|
|
|
|