|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಕನಸು ಪ್ರಕಾಶನ, Kanasu Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
618 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789383765577 |
ಕೋಡ್ |
: |
190155 |
ಪತ್ರಗಳು ಸಾಹಿತ್ಯವಾಗುವುದು, ಸಾಂಸ್ಕೃತಿಕ ದಾಖಲೆಗಳಾಗುವುದು ಅವು ಹೊಂದಿರುವ ವಿಷಯಗಳೀಂದ. ಬರೆದಾತ ಮತ್ತು ಬರೆಸಿಕೊಂಡಾತ ಇಬ್ಬರೂ ಜಗತ್ತಿನ ಯಾವುದೆ ಮೂಲೆಯಲ್ಲಿರಬಹುದು. ಅಂಟಿಸಿದ ಲಕೋಟೆಯನ್ನು ಹರಿಯಬಿಟ್ಟು ಅವರಿಬ್ಬರು ಎರಡು ತುದಿಗಳಲ್ಲಿ ನಿಂತು ಸಂವಾದಿಸುತ್ತಾರೆ. ಅಷ್ಟರಮಟ್ಟಿಗೆ ಅವು ಖಾಸಗಿಯಾಗಿರುತ್ತವೆ.
ಇಲ್ಲಿರುವ ಪತ್ರಗಳು ಪೂರ್ಣಚಂದ್ರ ತೇಜಸ್ವಿಯವರಿಗೆ ಸಂಬಂಧಿಸಿದುದು. ಈ ಕಾರಣಕ್ಕಾಗಿಯೇ ತೇಜಸ್ವಿಯವರನ್ನು ಇಲ್ಲಿ ಪ್ರತ್ಯೇಕವಾಗಿ ಕನ್ನಡಿಗರಿಗೆ ಪರಿಚಯಿಸುವ ಯಾವ ಅಗತ್ಯವೂ ಇಲ್ಲ. ಒಂದು ತಲೆಮಾರನ್ನು ಎಚ್ಚರಿಸಿದ, ಓದುವ ಆಸಕ್ತಿಯನ್ನು ಬೆಳೆಸಿ ಉಳಿಸಿದ; ಪರಿಸರ ಕಾಳಜಿಯಿಂದ ನೆಲದ ಕೌತುಕ, ಸತ್ಯಗಳನ್ನು ಸರಳವಾಗಿ ಬರೆದ ಅದ್ಭುತ ಲೇಖಕರವರು.
ತೇಜಸ್ವಿಯವರು ಬೇರೆಯವರಿಗೆ ಬರೆದ ಮತ್ತು ತೇಜಸ್ವಿಯವರಿಗೆ ಬೇರೆಯವರು ಬರೆದ ಕನ್ನಡ-ಇಂಗ್ಲಿಷ್ನ ಸುಮಾರು ಏಳೂನೂರಕ್ಕಿಂತಲೂ ಹೆಚ್ಚು ಪತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಅವೆಲ್ಲವೂ ಈಗ ಮುದ್ರಿತ ಏಕರೂಪಗಳು. ಯಥಾವತ್ತಾಗಿ ಯಾವುದೇ, ಯಾರದ್ದೇ ಪತ್ರಗಳನ್ನು ಮುದ್ರಿಸುವುದು ಸಾಧ್ಯವಾದರೂ ಆ ಪ್ರಯತ್ನ ತುಂಬಾ ದುಬಾರಿ ಮತ್ತು ಓದುವುದಕ್ಕೂ ಕಷ್ಟ. ಪುಟಗಳು ದ್ವಿಗುಣಗೊಳ್ಳುತ್ತವೆ. ವೆಚ್ಚ ವಿಪರೀತವಾಗುತ್ತದೆ. ಆದರೂ ಕೆಲವೊಂದು ಮಾದರಿಗಳನ್ನು ಯಥಾವತ್ತಾಗಿ ಹಸ್ತಾಕ್ಷರದಲ್ಲೇ ಮುದ್ರಿಸಲಾಗಿದೆ.
|
| |
|
|
|
|
|
|
|
|
|