|
|
|

| Rs. 160 | 10% |
Rs. 144/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದು ವಿಜ್ಞಾನ, ತಂತ್ರಜ್ಞಾನಗಳ ಯುಗ. ಪ್ರಗತಿಯನ್ನಳೆಯಲು ಅವೇ ಮಾನದಂಡ. ಕರ್ನಾಟಕದಲ್ಲಿ ಅತ್ಯಂತ ಮೇಧಾವಿಗಳು ಹುಟ್ಟಿದ್ದಾರೆ. ತಮ್ಮ ಬೌದ್ಧಿಕ ಕೊಡುಗೆಯಿಂದ ನಾಡನ್ನು ಪ್ರಗತಿಪಥಕ್ಕೆ ಒಯ್ದಿದ್ದಾರೆ. ಇವರ ಬದುಕು ಸದಾ ಅನುಕರಣೀಯ. ‘ತ್ರಿವಿಕ್ರಮ ಹೆಜ್ಜೆಗಳು : ನಾಡಿಗಾಗಿ-ನಾಳೆಗಾಗಿ’ ಕೃತಿಯಲ್ಲಿ ನಮ್ಮ ನಾಡು ಕಂಡ ಧೀಮಂತರ ಸಾಧನೆಯ ಹೆಜ್ಜೆಗಳನ್ನು ಪಡಿಮೂಡಿಸುವ ಪ್ರಯತ್ನ ಮಾಡಿದೆ. ಸರ್. ಎಂ.ವಿಶ್ವೇಶ್ವರಯ್ಯನವರು ಒಳಗೊಂಡಂತೆ ಹದಿನೆಂಟು ಮಂದಿ ಶ್ರೇಷ್ಠ ಸಾಧಕರು ತಮ್ಮ ತಮ್ಮ ಕ್ಷೇತ್ರದಲ್ಲಿ ನೀಡಿದ ಕೊಡುಗೆಯ ಜೊತೆಗೆ ಅವರು ನಂಬಿದ್ದ ಮೌಲ್ಯಗಳನ್ನು ಎಳೆಎಳೆಯಾಗಿ ಬಿಡಿಸಿ ತೋರಿಸಿದೆ. ಕನ್ನಡದ ಎಲ್ಲ ಓದುಗ ವರ್ಗವನ್ನೂ ಹಿಡಿದಿಡುವ ಆಪ್ತ ಶೈಲಿ, ಆತ್ಮೀಯ ನಿರೂಪಣೆ, ತಾಂತ್ರಿಕವಾಗಿ ಭಾರವಾಗದ ಭಾಷೆ ಈ ಕೃತಿಯುದ್ದಕ್ಕೂ ಜೀವಂತವಾಗಿದೆ. ಆಯಾ ಕ್ಷೇತ್ರದ ಪರಿಣತರೇ ಬರೆದಿರುವುದು ಕೃತಿಯ ಮೌಲ್ಯ ಹೆಚ್ಚಿಸಿದೆ. ನಾಡು, ನುಡಿಯನ್ನು ಪ್ರೀತಿಸುವ ಕನ್ನಡದ ಜನತೆಗೆ ಇಲ್ಲಿದೆ ಸಾಧಕರ ಬದುಕಿನ ಸಾರಸಂಗ್ರಹ.
|
ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
|
|
| |
|
|
|
|
|
|
|
|
|