|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಜಾವಾಣಿಯ ಅಂಕಣಕಾರರಲ್ಲಿ ಒಬ್ಬರಾದ ಎಚ್. ಎಸ್. ಶಿವಪ್ರಕಾಶ್ ಅವರು ತಮ್ಮ ಪ್ರತಿಸ್ಪಂದನ ಅಂಕಣದಲ್ಲಿ 2013ರ ಮಾರ್ಚ್ 14ರಂದು ವಚನ ಸಾಹಿತ್ಯ ಮತ್ತು ಜಾತಿ ವಿರೋಧ ಎಂಬ ಲೇಖನವೊಂದನ್ನು ಬರೆದಿದ್ದರು. ವಚನಕಾರರ ಜಾತಿ ವಿರೋಧಕ್ಕೆ ಸಂಬಂಧಿಸಿದಂತೆ ಸ್ಥಾಪಿತ ಅಭಿಪ್ರಾಯಗಳಿಗಿಂತ ಭಿನ್ನವಾದ ನಿಲುವೊಂದನ್ನು ಪ್ರತಿಪಾದಿಸುವ ಡಂಕಿನ್ ಝಳಕಿ ಅವರ ಸಂಶೋಧನೆಯನ್ನು ವಿಮರ್ಶಾತ್ಮಕವಾಗಿ ಪರಿಚಯಿಸುವ ಈ ಲೇಖನಕ್ಕೆ ಕನ್ನಡದ ಅನೇಕ ವಿದ್ವಾಂಸರು ಪ್ರತಿಕ್ರಿಯಿಸಿದರು. ಒಂದು ಅರ್ಥದಲ್ಲಿ ಎಚ್. ಎಸ್. ಶಿವಪ್ರಕಾಶ್ ಅವರು ವಚನ ಸಾಹಿತ್ಯದ ಗ್ರಹಿಕೆಗೆ ಸಂಬಂಧಿಸಿದ ಹೊಸ ನಿಲುವುಗಳ ಚರ್ಚೆಯೊಂದನ್ನು ತಮ್ಮ ಅಂಕಣ ಬರಹದ ಮೂಲಕ ಆರಂಭಿಸಿದ್ದರು. ಪ್ರಜಾವಾಣಿಯ ಸಂಪಾದಕೀಯ ಪುಟ ವಚನ ಸಾಹಿತ್ಯದ 21ನೇ ಶತಮಾನದ ಚರ್ಚೆಯೊಂದಕ್ಕೆ ವೇದಿಕೆಯಾಯಿತು. ಕನ್ನಡದ ಅನೇಕ ವಿದ್ವಾಂಸರು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸುಮಾರು ಎರಡೂವರೆ ತಿಂಗಳುಗಳ ಕಾಲ ನಡೆದ ಈ ಚರ್ಚೆ, 2013ರ ಮೇ 24ರಂದು ಪ್ರಕಟವಾದ ಎಚ್. ಎಸ್. ಶಿವಪ್ರಕಾಶ್ ಅವರ ಮತ್ತೊಂದು ಅಂಕಣ ಬರಹ ವಚನಗಳಲ್ಲಿ ಅಧ್ಯಾತ್ಮಿಕತೆ ಮತ್ತು ಸಾಮಾಜಿಕತೆ ಮೂಲಕ ಔಪಚಾರಿಕವಾಗಿ ಕೊನೆಗೊಂಡಿತು. ವಚನಗಳಿಗೆ ಸಂಬಂಧಿಸಿದ ಈ ಚರ್ಚೆ-ಸಂವಾದದಲ್ಲಿ ಒಟ್ಟು 27 ಲೇಖನಗಳು ಪ್ರಕಟಾವಾದವು. ವಚನ ಸಾಹಿತ್ಯವನ್ನು ಭಿನ್ನ ನೆಲೆಗಳಿಂದ ಅಭ್ಯಾಸ ಮಾಡಿರುವ ಕನ್ನಡದ ಅನೇಕ ವಿದ್ವಾಂಸರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಚನ ಸಾಹಿತ್ಯ ಕುರಿತು ನಡೆದ ಈ ಚರ್ಚೆಗೆ ಒಂದು ಐತಿಹಾಸಿಕ ಮಹತ್ವವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಪುಸ್ತಕ ಪ್ರಜಾವಾಣಿ ಪ್ರಕಾಶನದಿಂದ ರೂಪುಗೊಂಡಿದೆ.
|
| |
|
|
|
|
|
|
|
|
|