Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Demy Size
ISBN : 9788194476191
ಕೋಡ್ : 1123872

ಸಾಮಾನ್ಯವಾಗಿ ಶ್ರೀವೈಷ್ಣವ ಮತ್ತು ವೈಷ್ಣವ ಪಂಥಗಳು ರಾಮಾನುಜರು ಮತ್ತು ಮಧ್ವಾಚಾರ್ಯರ ನಂತರ ಪ್ರಸಿದ್ಧಿಗೆ ಬಂದವು ಎಂದು ತಿಳಿಯಲಾಗಿದೆ. ಆದರೆ ಬಾದಾಮಿ ಚಾಲುಕ್ಯರ ಕಾಲಕ್ಕಾಗಲೇ ವೈಷ್ಣವ ಪಂಥ ಪ್ರಸಿದ್ಧವಾಗಿತ್ತು. ಮಂಗಳೀಶನನ್ನು ಬಾದಾಮಿಯ ಒಂದು ಶಾಸನ ಪರಮಭಾಗವತ ಎಂದೇ ಕರೆದಿದೆ. ಬಾದಾಮಿಯ ವಿಷ್ಣುಗೃಹವೂ ಅವನ ಕಾಲದ ನಿರ್ಮಾಣ. ಕಾಲದಿಂದ ಕಾಲಕ್ಕೆ ತಾವು ಒಪ್ಪಿಕೊಂಡ ಪಂಥಗಳಲ್ಲಿ ಬದಲಾವಣೆಗಳನ್ನು ಕಾಣುವ ಪ್ರಯತ್ನ ನಡೆದಿರುತ್ತದೆ. ಅದು ಸಂಘರ್ಷದ ಕಾರಣದಿಂದ ಆದ ಬದಲಾವಣೆಯಲ್ಲ. ಬದಲಾದ ಸ್ವರೂಪಕ್ಕೆ ತಕ್ಕಂತೆ ಆಚರಣೆಗಳಲ್ಲಾದ ವ್ಯತ್ಯಾಸಗಳಿಗೆ ತಕ್ಕಂತೆ ಭಾಷೆಯ ಮೂಲಕ ಸಾಂಸ್ಕøತಿಕ ಸಾಮರಸ್ಯಕ್ಕೆ ಅಣಿಯಾಗುವುದು ಮುಖ್ಯವಾಗುತ್ತದೆ. ಈ ಬದಲಾವಣೆ ಆಯಾ ಪಂಥಗಳ ಅಂತರಂಗಕ್ಕೆ ಮುಖ್ಯವಾಗುತ್ತದೆಯೇ ಹೊರತು, ಇಡೀ ಸಮುದಾಯಕ್ಕಲ್ಲ. ಶ್ರೀವೈಷ್ಣವ ದೇವಾಲಯಗಳು ತಮಿಳು ಭಾಷೆಯ ಪ್ರಭಾವದಿಂದ ಪೂಜಾ ವಿಧಿವಿಧಾನಗಳಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡಿದರೂ, ಸ್ಥಳೀಯ ಸಂಸ್ಕøತಿಯನ್ನು ಮರೆಯಲಿಲ್ಲ.
ಕರ್ನಾಟಕಕ್ಕೆ ರಾಮಾನುಜ ಪೂರ್ವದಲ್ಲೇ ಕಣ್ವ ಮತ್ತು ಕಾವೇರಿ ನದಿಗಳ ದಂಡೆಯಲ್ಲೇ ಸಾಗಿ ಬಂದು, ಅಗ್ರಹಾರಗಳನ್ನು ಸ್ಥಾಪಿಸಿ, ವೇದಾಧ್ಯಯನ ಮತ್ತು ದೇವಾಲಯಗಳ ನಿರ್ವಹಣೆಗೆ ತೊಡಗಿಕೊಂಡ ಜನರು ವೈಷ್ಣವದಿಂದ ಶ್ರೀವೈಷ್ಣವದತ್ತ ಹೇಗೆ ಬದಲಾದರು ಎಂಬುದನ್ನು ಶಾಸನಗಳ ಮೂಲಕ ವಿಶ್ಲೇಷಿಸುವ ಆಸಕ್ತಿದಾಯಕ ಕೆಲಸವನ್ನು ಷ. ಶೆಟ್ಟರ್ ಅವರು ವೈಷ್ಣವದಿಂದ ಶ್ರೀವೈಷ್ಣವಕ್ಕೆ ಎಂಬ ಅಧ್ಯಯನದ ಮೂಲಕ ಮಾಡಿದ್ದಾರೆ. ಶಾಸನಗಳು ನೀಡುವ ಇಂತಹ ಸೂಕ್ಷ್ಮ ವಿಚಾರಗಳ ಬಗೆಗೇ ಹೆಚ್ಚು ಚಿಂತಿಸುತ್ತಿದ್ದ ಷ. ಶೆಟ್ಟರ್ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಿಕ ಅಧ್ಯಯನಕ್ಕೆ ನೀಡಿರುವ ಮಹತ್ವದ ಕೊಡುಗೆಗಳ ಜೊತೆಗೆ ಇದೂ ಸೇರಿಕೊಳ್ಳುತ್ತದೆ.
- ಎಚ್. ಎಸ್. ಗೋಪಾಲ ರಾವ್
(ಬೆನ್ನುಡಿಯಿಂದ)

ಪ್ರೊ. ಷ. ಶೆಟ್ಟರ್ ಅವರು ಜನಿಸಿದ್ದು ೧೯೩೫ ನೇ ಇಸವಿಯಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೨೭ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇದೆ.

ಶ್ರೀಯುತರು ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದಿರುತ್ತಾರೆ. ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ರಾಜ್ಯ ಹಾಗು ರಾಷ್ಟ್ರ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದಾರೆ.
೧೯೬೦-೯೬: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೋಧನೆ
೧೯೭೮-೯೫: ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ
೧೯೯೬-೯೯: ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ
೨೦೦೨-೧೦: ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ. ಎಸ್. ರಾಧಾಕೃಷ್ಣನ್ ಪ್ರಾಧ್ಯಾಪಕತ್ವ ಹಾಗು ೨೦೧೦ ರಿಂದ ಇದೇ ಸಂಸ್ಥೆಯಲ್ಲಿ ಎಮೆರಿಟಸ್ ಪ್ರಾಧ್ಯಾಪಕ ಸ್ಥಾನ[೧]
೨೦೦೫ ರಿಂದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ದಕ್ಷಿಣ ಭಾರತ ಶಾಖೆಯ ಗೌರವ ನಿರ್ದೇಶಕತ್ವ[೨].

uploads/authorimages/611.jpg
ಲೇಖಕರ ಇತರ ಕೃತಿಗಳು
10%
ಸ್ಥಪತಿ (ರೂವಾರಿಗಳ ಜತೆ ....
ಶೆಟ್ಟರ್ ಷ, Shettar S
Rs. 350    Rs. 315
5%
ಹಳಗನ್ನಡ ಭಾಷೆ, ಭಾಷಾ ....
ಶೆಟ್ಟರ್ ಷ, Shettar S
Rs. 600    Rs. 570
10%
ಹಳಗನ್ನಡ : ಶೆಟ್ಟರ್ ....
ಶೆಟ್ಟರ್ ಷ, Shettar S
Rs. 1200    Rs. 1080
5%
ಹಳಗನ್ನಡ ಲಿಪಿ, ....
ಶೆಟ್ಟರ್ ಷ, Shettar S
Rs. 600    Rs. 570
Best Sellers
ಕಲಾಮ್ ಅವರಿಗೆ ಮಕ್ಕಳ ಪ್ರಶ್ನೆಗಳು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 86/-   Rs. 95
ಸಜ್ಜನನ ಸಾವು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 113/-   Rs. 125
ಹುಡುಗಾಟ ಉಡುಕಾಟ (ಮಲೆನಾಡಿನ ರೋಚಕ ಕತೆಗಳು ಭಾಗ - ೬)
ಗಿರಿಮನೆ ಶ್ಯಾಮರಾವ್, Girimane Shyamarao
Rs. 135/-   Rs. 150
ಭುಜಂಗಯ್ಯನ ದಶಾವತಾರಗಳು
ಶ್ರೀಕೃಷ್ಣ ಆಲನಹಳ್ಳಿ, Srikrishna Alanahalli
Rs. 350/-

Latest Books
ಲಂಕೇಶ್ : ಬದುಕು ಬರೆಹ
ಮರುಳಸಿದ್ದಪ್ಪ ಕೆ, Marulasiddappa K
Rs. 108/-   Rs. 120
ಜಹನಾರಾ : ಹಿಂದೂ ಮಹಾರಾಣಿಯಾಗಲು ಭ್ರಮಿಸಿದ್ಧ ಮೊಹಲ್ ಬಾದಶಹ ಬೇಗಮಳ ದುರಂತ ಜೀವನಸ್ಮೃತಿ
ಸಂತೆ ನಾರಾಯಣ ಸ್ವಾಮಿ, Sante Narayana Swamy
Rs. 203/-   Rs. 225
ಒಂದು ಕಾಡಿನ ಪುಷ್ಪಕ ವಿಮಾನ
ಪ್ರಸಾದ್ ಶೆಣೈ ಆರ್ ಕೆ, Prasad Shenoy R K
Rs. 135/-   Rs. 150
ಅಮ್ಮಾ ನನ್ನನ್ನು ಯಾಕೇ ಕೊಂದೆ?
ರವಿ ಬೆಳಗೆರೆ, Ravi Belagere
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.