Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 183    
10%
Rs. 165/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಉತ್ತಮ
ಪುಟಗಳು : 206
ಪುಸ್ತಕದ ಗಾತ್ರ : 1/8 Demy Size
ಕೋಡ್ : 174998

ತಮ್ಮನ್ನು ಯಾರಾದರೂ ವಿಜ್ಞಾನ ಲೇಖಕರೆಂದು ಕರೆದರೆ ತೇಜಸ್ವಿಯವರು ಮನುಷ್ಯ ಇರಬೇಕಾದ್ದೇ ಹಾಗಲ್ಲವೆ? ಒಬ್ಬ ಮನುಷ್ಯ ತನ್ನ ಪರಿಸರವನ್ನು ಸುತ್ತಮುತ್ತಲಿನ ಆಗು ಹೋಗುಗಳನ್ನು ಗಮನಿಸದೆ ಇರಲು ಸಾಧ್ಯವೆ? ಎಂದು ಮರು ಪ್ರಶ್ನಿಸುತ್ತಿದ್ದರು. ಆದ್ದರಿಂದ ತೇಜಸ್ವಿಯವರ ಬರಹ ಮತ್ತು ವ್ಯಕ್ತಿತ್ವವನ್ನು ವಿಶ್ಲೇಷಣೆ ಹಾಗು ಸಂಶ್ಲೇಷಣಾ ವಿಧಾನದಲ್ಲಿ ಪರಿಭಾವಿಸಲು ಪ್ರಯತ್ನಿಸಬೇಕು. ಇಲ್ಲಿರುವ ವಿಮರ್ಶಾ ಲೇಖನಗಳು ಸಾಹಿತ್ಯ ವಿಮರ್ಶೆಯಾಗಿಯೂ, ಜಾತಿ, ಧರ್ಮ ವಿಮರ್ಶೆಯಾಗಿಯೂ, ಅರ್ಥ ವ್ಯವಸ್ಥೆಯ ವಿಮರ್ಶೆಯಾಗಿಯೂ, ಭಾಷೆ, ರೈತ, ಬೆಳೆಗಾರ, ಮಾರ್ಕೆಟ್ ನಿಯಂತ್ರಣ ಶಕ್ತಿಗಳ ಹಾಗೂ ಜಾಗತೀಕರಣ ವಿಮರ್ಶೆಯಾಗಿಯೂ, ಕಾಣುತ್ತವೆ. ಇವುಗಳೆಲ್ಲದರ ಮಧ್ಯೆ ಬದುಕುವ ಮನುಷ್ಯನೇ ಸದಾ ತೇಜಸ್ವಿಯವರನ್ನು ಕಾಡಿದವನು. ಅದೇ ಅವರ ಸಾಹಿತ್ಯಲೋಕ. ಈ ಕೃತಿಯ ವಿಮರ್ಶಾ ಲೇಖನಗಳು ಕನ್ನಡ ಸಾಹಿತ್ಯ ಲೋಕವು ಮುಂದೆ ಸಾಗಬೇಕಾದ ದಾರಿಯ ದಿಕ್ಸೂಚಿಗಳೆನ್ನಬಹುದು. ತೇಜಸ್ವಿಯವರು ಬರೆದ ಕೊನೆಯ ಕಾಗದ ಶ್ರೀ ಚಂದ್ರಶೇಖರ ನಂಗಲಿಯವರನ್ನು ಉದ್ದೇಶಿಸಿದ್ದು. ಇದು ಏಕ ವ್ಯಕ್ತಿಯನ್ನೇ ಉದ್ದೇಶಿಸಿದ್ದಾದರೂ ಇಡೀ ಸಾಹಿತ್ಯ ಲೋಕವನ್ನೇ ಉದ್ದೇಶಿಸಿದ್ದೂ ಆಗಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
10%
ಬೆಳ್ಳಂದೂರಿನ ನರಭಕ್ಷಕ (ಕಾಡಿನ ....
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 75    Rs. 68
Rs. 87    Rs. 78
Best Sellers
ಗಾಜು ಮೋಜು (ಗಾಜಿನ ಲೋಟದ ಪ್ರಯೋಗಗಳು)
ರಾಘವೇಂದ್ರರಾವ್ ಎಂ ಎಲ್, Ragahvendrarao M L
Rs. 36/-   Rs. 40
ಸೇಡಿನ ಸಂಚು (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 176/-   Rs. 195
ರಾಘವೇಂದ್ರ ಪಾಟೀಲ (ಜೀವನ ಮತ್ತು ಸಾಧನೆ)
ಚಿಂತಾಮಣಿ ಕೊಡ್ಲೆಕೆರೆ, Chintamani Kodlekere
Rs. 54/-   Rs. 60
ತಾವರೆಯ ಕೊಳ - ತ್ರಿವೇಣಿ
ತ್ರಿವೇಣಿ , Triveni
Rs. 119/-   Rs. 125

Latest Books
ನೂತನ GK : IAS KAS PSI PDO
ಬಿ ಡಿ ಪಾಟೀಲ, B D Patil
Rs. 650/-
ಆಹುತಿ : ಕಾದಂಬರಿ
ಅನುಷ್ ಎ ಶೆಟ್ಟಿ, Anysh A Shetty
Rs. 90/-   Rs. 100
ಸಂಸ್ಕೃತಿ ಮೀಮಾಂಸೆ : ಕನಡ ಸಂಸ್ಕೃತಿ ಮೀಮಾಂಸೆಯ ಲೇಖನಗಳು
ನಟರಾಜ ಬೂದಾಳು ಎಸ್, Nataraja Budalu S
Rs. 176/-   Rs. 195
ಕನ್ನಡ ಸಾಹಿತ್ಯ ಚರಿತ್ರೆ ಪ್ರಶ್ನೋತ್ತರ ಕೋಶ
ನಾಗರಾಜರಾವ್ ಎಂ ವಿ, Nagarajarao M v
Rs. 207/-   Rs. 230


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.