|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಾರ್ಕ್ಸ್ ಮತ್ತು ಏಂಗೆಲ್ಸ್ರ ಸಾಮ್ಯವಾದ ಪರಿಕಲ್ಪನೆಗಳಿಗೆ ಮೂರ್ತರೂಪ ಕೊಟ್ಟು, ಜಗತ್ತಿನ ಪ್ರಥಮ ಸಮಾಜವಾದಿ ರಾಷ್ಟ್ರದ ಉದಯಕ್ಕೆ ಬುನಾದಿ ಹಾಕಿದವನು ವ್ಲಾದಿಮೀರ್ ಲೆನಿನ್. ಎಲ್ಲ ಕ್ರಾಂತಿಕಾರಿಗಳಂತೆ ಈತನ ಜೀವನವೂ ಅನೇಕ ಏಳು-ಬೀಳುಗಳನ್ನು ಕಂಡಿತ್ತು. ತ್ಸಾರ್ನ ಕೆಂಗಣ್ಣಿಗೆ ತುತ್ತಾಗಿ, ತಲೆಮರೆಸಿಕೊಂಡು ಜೀವನ ನಡೆಸಬೇಕಾದರೂ, ತನ್ನ ಅದಮ್ಯ ಚೇತನವನ್ನು ಬಿಟ್ಟುಕೊಡದೆ ದಮನಕಾರಿ ಅರಸೊತ್ತಿಗೆಯ ವಿರುದ್ಧ ವೈಚಾರಿಕ ಮತ್ತು ಕ್ರಿಯಾಶೀಲ ಸಮರವನ್ನು ಸಾರಿದವ ಕ್ರಾಂತಿಕಾರಿ ಲೆನಿನ್. ರಷ್ಯಾದ ಕಾರ್ಮಿಕರು, ರೈತಾಪಿ ವರ್ಗದ ಜನರು ಹಾಗೂ ಇತರ ದುಡಿಯುವ ಮಂದಿಯನ್ನು ಒಗ್ಗೂಡಿಸಿ, 1917ರ ಅಕ್ಟೋಬರ್ ಕ್ರಾಂತಿಗೆ ಮಹಾನಾಯಕ ಲೆನಿನ್ ನಾಂದಿ ಹಾಡಿದನು.
ರಷ್ಯಾದಲ್ಲಿ ಕ್ರಾಂತಿ ಜರುಗಿದ ಕೆಲವು ವರ್ಶಗಳಲ್ಲೇ ಲೆನಿನ್ ಗತಿಸಿದರೂ, ಅಲ್ಲಿನ ನೂತನ ಸರ್ಕಾರ ಆಂತರಿಕ ಮತ್ತು ಬಾಹ್ಯ ಶತ್ರುಗಳನ್ನು ದಿಟ್ಟವಾಗಿ ಎದುರಿಸಿದ್ದರಲ್ಲಿ ಈತನ ಪಾತ್ರವೂ ದೊಡ್ಡದಾಗಿತ್ತು. ಎಷ್ಟೇ ಕಾರ್ಯ ಬಾಹುಳ್ಯವಿದ್ದರೂ, ಲೆನಿನ್ ಬರವಣಿಗೆಯಲ್ಲಿ ನಿರತನಾಗುತ್ತಿದ್ದ. ಹೀಗಾಗಿ, ಆತನ ಲೇಖನಿಯ ಮೂಲಕ ಕೆಲವು ಮಹತ್ವದ ಕೃತಿಗಳು ಲೋಕಾರ್ಪಣೆಗೊಂಡಿವೆ. ಎಡಪಂಥೀಯ ಹೋರಾಟಗಳಲ್ಲಿ ಮಾರ್ಕ್ಸ್ ಮತ್ತು ಏಂಗೆಲ್ಸ್ರ ಜೊತೆಗೆ ಅನುಪಮ ಕೊಡುಗೆಗಳು ಸ್ಮರಿಸಲ್ಪಡುತ್ತವೆ.
|
ಬ್ಯಾಂಕ್ ನೌಕರ ಚಳವಳಿಯ ಸಕ್ರಿಯ ಕಾರ್ಯಕರ್ತ ರಾಗಿರುವ ಶ್ರೀ ಮ. ಶ್ರೀ. ಮುರಳಿ ಕೃಷ್ಣ ಪತ್ರಿಕೆ, ನಿಯತಕಾಲಿಕೆ ಗಳಿಗೆ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ. ಪ್ರಕಟಿತ ಬರೆಹಗಳನ್ನೊಳಗೊಂಡ "ಸ್ಪಂದನ" ಇವರ ಪ್ರಥಮ ಪುಸ್ತಕ. ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರ "ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ" ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಹಿತ್ಯ, ಸಂಗೀತ, ಸಿನಿಮಾ, ಚಾರಣ ಇತ್ಯಾದಿ ಅವರ ಆಸಕ್ತಿಯ ಕ್ಷೇತ್ರಗಳಾಗಿವೆ.
|
|
| |
|
|
|
|
|
|
|
|
|