|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
"ವೃತ್ತಿ ವೃತ್ತ" ಧಾರಾವಾಹಿಯು 32 ಕಂತುಗಳಲ್ಲ ಪ್ರತಿಲಿಪಿಯಲ್ಲಿ ಪ್ರಕಟವಾದ ವೃತ್ತಿ ಅನುಭವದ ಮಾಲಕೆ. ಕೊನೆಯ ಸಂಚಿಕೆಯಲ್ಲಿ ಲೇಖಕರ ಮಾತುಗಳು ಹೀಗಿವೆ. ನನ್ನ "ವೃತ್ತಿ ವೃತ್ತ"ವು ನಾನು ಮಾಡಿದ ನೌಕರಿ ಅಥವಾ ವೃತ್ತಿಗಳ ಕೆಲವು ನೆನಪುಗಳಷ್ಟೇ ಆಗಿರುತ್ತದೆ... ನನ್ನ ಬ್ಯಾಂಕ್ ವೃತ್ತಿಯು ನನ್ನ ವ್ಯಕ್ತಿತ್ವದ ಮೇಲೆ ಸಹಜವಾಗಿಯೇ ಅದರ ಪರಿಣಾಮ ಬೀರಿದೆ.. ಅದು ಎಲ್ಲಾ ವೃತ್ತಿ ನೌಕರಿಗಳಲ್ಲಿದ್ದವರಲ್ಲೂ ಕಾಣಬಹುದಲ್ಲವೇ..? ಅನೇಕ ಬದುಕಿನ ಪಾಠಗಳನ್ನು ನಾನು ನನ್ನ ಬ್ಯಾಂಕ್ ವೃತ್ತಿಯಿಂದ ಕಲಿತೆ ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ..
ಯಾವುದೇ ವ್ಯಕ್ತಿ ಅಥವಾ ನೌಕಲಿಯಾಗಲ, ಅವುಗಳದ್ದೇ ರಹಸ್ಯಗಳನ್ನು ಅವು ಅಡಗಿಸಿಕೊಂಡಿರುತ್ತವೆ.. ಆ ರಹಸ್ಯಗಳ ಅರಿವು ನಮಗೆ ಉಂಟಾಗುವುದು ನಾವು ವೃತ್ತಿ ಅಥವಾ ನೌಕರಿಯಲ್ಲಿದ್ದಾಗ... ಆದರೆ ಕೆಲವೊಂದು ರಹಸ್ಯಗಳನ್ನು ಹೊರಹಾಕಬಾರದು... ಅದೇ ವೃತ್ತಿ ಧರ್ಮ. ಅದನ್ನು ನಾನೂ ಪಾಲಿಸಿರುವೆ... ಪರರ ಹಣಕ್ಕೆ ಅಥವಾ ಸಂಪತ್ತಿಗೆ ನಾವು ಆಸೆ ಪಡಬಾರದು... ಎಂಬ ವಿಚಾರವು ಬ್ಯಾಂಕ್ನಲ್ಲಿ ನಾವು ನೋಡುವ ಹಾಗೂ ಮುಟ್ಟುವ ಹಣ, ಚಿನ್ನ ಮುಂತಾದ ಪರರ ಸ್ವತ್ತು ಸಂಪತ್ತುಗಳಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ... ಅದಕ್ಕೆ ಆಸಪಟ್ಟರ, ಆ ಕೆಟ್ಟ ಆಸೆ ನಮ್ಮನ್ನೇ ತಿಂದುಬಿಡುತ್ತದೆ...
|
| |
|
|
|
|
|
|
|
|