|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪುಸ್ತಕವು ಪ್ರಖ್ಯಾತ ‘ಪ್ರೇರಕ’ರಾದ ಡಾ. ಜಿ. ಫ್ರಾನ್ಸಿಸ್ ಜ಼ೇವಿಯರ್ರವರ ಹಲವಾರು ಸ್ಫೂರ್ತಿದಾಯಕ ಪುಸ್ತಕಗಳಲ್ಲೊಂದು. ಇದು ಅವರು ಭೇಟಿ ನೀಡಿದ ಪ್ರದೇಶಗಳು ಮತ್ತು ಓದಿದ ಪುಸ್ತಕಗಳ ಜ್ಞಾನಸಂಗ್ರಹವನ್ನೇ ಒಟ್ಟಾರೆಯಾಗಿ ನಮಗೆ ನೀಡೂತ್ತದೆ. ತುಂಬು ಸಭೆಗಳಿಂದ ಜನಪ್ರಿಯವಾಗಿರುವ ವೈಯಕ್ತಿಕ ಅಭಿವೃದ್ಧಿ ಕೋರ್ಸುಗಳನ್ನು ನಡೆಸುವ ಜ಼ೇವಿಯರ್ರವರು ಈ ಪುಸ್ತಕವನ್ನು ಚರ್ಚಾ ಸ್ವರೂಪದಲ್ಲಿ ತಂದಿರುವುದು ಹಾಗೂ ಕಥೆಯ ಕೊನೆಯಲ್ಲಿ ಓದುಗರೇ ಉತ್ತರವನ್ನು ನೀಡುವಂತೆ ಪ್ರೇರೇಪಿಸುವುದು ಇದರ ವಿಶೇಷತೆಯಾಗಿದೆ. ಕಥೆಗಳು ಹಾಗೂ ನಿದರ್ಶನಗಳು ಪ್ರೇರಣೆಗೆ ಅತ್ಯುತ್ತಮ ವಿಧಾನ. ಈ ಪುಸ್ತಕವನ್ನು ನಾವು ಯಾರಿಗಾದರೂ ಕಾಣಿಕೆಯಾಗಿ ನೀಡಬಹುದು. ವಿಶೇಷವಾಗಿ ಬೋಧಕರು, ಭಾಷಣಕಾರರು ಹಾಗೂ ಶಿಕ್ಷಕರಿಗೆ ಇದು ಬಹಳ ಉಪಯುಕ್ತ.
ಈ ಪುಸ್ತಕವು ಖಂಡಿತವಾಗಿ ಎಲ್ಲಾ ವಯಸ್ಸಿನ ಓದುಗರಿಗೆ ಮೆಚ್ಚುಗೆಯಾಗುವಂತಹದ್ದು. ಆದರೆ ಖಂಡಿತವಾಗಿಯೂ ವಿಷಣ್ಣ ಮನೋಭಾವದ, ನಕಾರಾತ್ಮಕ ಮನಸ್ಸಿನ ಹಾಗೂ ಓದುವುದನ್ನು ದ್ವೇಷಿಸುವ ಹದಿವಯಸ್ಕರಿಗಲ್ಲ. ಸ್ಫೂರ್ತಿ ತುಂಬುವ ಹಾಗೂ ಕೊನೆಯವರೆಗೆ ನಮ್ಮ ಮನಸ್ಸನ್ನು ಹಿಡಿದಿಟ್ಟು ಮುದನೀಡುವ ಕಥೆಗಳು ಇದರಲ್ಲಿವೆ.
|
| | |
|
|
|
|
|
|
|
|