Items
0
Total
  0.00 
Welcome Guest.

 
Rs. 200   
10%
 
 
Rs. 180/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪಲ್ಲವ ಪ್ರಕಾಶನ, Pallava Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 230
ಪುಸ್ತಕದ ಗಾತ್ರ : 1/8 Demy Size
ISBN : 9789381920183
ಕೋಡ್ : 176862

ಹಾಕಿಂಗ್ ಅವರ ಅಷ್ಟೂ ಕೃತಿಗಳಲ್ಲಿ ಮುಖ್ಯವಾದದ್ದು ಇದೀಗ ಕೈಪಿಡಿ ರೂಪದಲ್ಲಿ ಬಂದಿರುವ ‘ಕಾಲದ ಸಂಕ್ಷಿಪ್ತ ಇತಿಹಾಸ’. ಜಗತ್ತಿನಾದ್ಯಂತ ಭಿನ್ನ ಭಾಷೆಯ ವಿಮರ್ಶಕರಿಂದ ಕ್ಲಾಸಿಕ್ ಎಂದು ಹೊಗಳಿಸಿಕೊಂಡ ಈ ಕೃತಿಯನ್ನು ವಿಜ್ಞಾನಿಗಳು ಮಾತ್ರ ಓದಿದ್ದರೆ ಅದರ ೧೦ ಲಕ್ಷಕ್ಕೂ ಹೆಚ್ಚು ಪ್ರತಿಗಳು ಇವತ್ತಿಗೆ ಮಾರಾಟವಾಗುತ್ತಿರಲಿಲ್ಲ. ಬದಲು ಈ ಪುಸ್ತಕವನ್ನು ತತ್ವಶಾಸ್ತ್ರಜ್ಞರು, ಸಾಹಿತಿಗಳು, ಸಮಾಜಶಾಸ್ತ್ರಜ್ಞರು, ಜ್ಯೋತಿಷಿಗಳೇ ಮೊದಲಾದ ದೊಡ್ಡ ಸಮೂಹವೊಂದು ನಿರಂತರವಾಗಿ ಓದಿದೆ. ಈ ಪುಸ್ತಕದ ಮಹತ್ವ ಇರುವುದೇ ಇಂಥ ವ್ಯಾಪಕ ಓದಿನಲ್ಲಿ. ಆ ಓದು ಜಗತ್ತಿನಾದ್ಯಂತ ತನ್ನ ಸಾಂಪ್ರದಾಯಿಕ ಪರಿಧಿಗಳ ಆಚೆಗೆ ಚಾಚಿಕೊಂಡು ಬಗೆಬಗೆಯಾಗಿ ವಿಸ್ತಾರಗೊಂಡಿದೆ. ಹಾಗೆ ಮಾಡಲು ಹಾಕಿಂಗ್‌ಗೆ ಸಾಧ್ಯವಾದದ್ದು ನಮ್ಮ ಕಾಲದ ಚೋದ್ಯಗಳಲ್ಲೊಮ್ದು. ಮುಖ್ಯವಾಗಿ ಈ ಪುಸ್ತಕ ಮೂರು ಪ್ರಶ್ನೆಗಳಿಗೆ ಉತ್ತರ ನೀಡಲು ಯತ್ನಿಸುತ್ತದೆ. ಅವುಗಳೆಂದರೆ,
೧. ಈ ವಿಶ್ವವು ಹುಟ್ಟಿದ್ದು ಹೇಗೆ?
೨. ವಿಶ್ವವು ಹೇಗೆ ಮತ್ತು ಏಕೆ ಅಸ್ತಿತ್ವಕ್ಕೆ ಬಂತು?
೩. ವಿಶ್ವವು ಕೊನೆಯಾಗುವುದೇ? ಆಗುವುದಾದರೆ ಹೇಗೆ?

ಈ ಪ್ರಶ್ನೆಗಳಿಗೆ ಹಾಕಿಂಗ್ ಉತ್ತರ ನೀಡುವಾಗ ವೈಜ್ಞಾನಿಕ ವಿಧಾನಗಳಿಗೆ ಅನುಗುಣವಾದ ರೀತಿಯಲ್ಲಿ ಅದನ್ನೊಂದು ವಿಶ್ವಾತ್ಮಕವಾದ ಚೌಕಟ್ಟಿನಲ್ಲಿ ಮತ್ತು ಪರಿಭಾಷೆಯಲ್ಲಿ ವಿವರಿಸುತ್ತಾನೆ. ಈ ವಿವರಣೆಗಳು ೨೦ನೇ ಶತಮಾನದ ಮುಖ್ಯ ಗುಣವಾದ ಕಾರ್ಯ-ಕಾರಣ ಸಂಬಂಧಗಳ ಪರಿಶೀಲನೆಯ ನೆಲೆಯಲ್ಲಿಯೇ ನಡೆಯುತ್ತದೆ. ಸ್ಥಳ, ಕಾಲ, ವಿಶ್ವದ ಹಿಗ್ಗುವಿಕೆ, ಮತ್ತಿತರ ವಿಷಯಗಳೆಲ್ಲವೂ ಈ ಚೌಕಟ್ಟಿನಲ್ಲಿ ಗಂಭೀರ ಪರಿಶೀಲನೆಗೆ ಒಳಗಾಗುತ್ತವೆ.

ಇಂಥ ಪರಿಶೀಲನೆಯಲ್ಲಿ ಹಾಕಿಂಗ್ ಹೆಚ್ಚು ಕಠಿಣವಾದ ಪಾರಿಭಾಷಿಕ ಪದಗಳನ್ನು ಬಳಸುವುದಿಲ್ಲವಾದ್ದರಿಂದ ಅದು ಒಂದು ಸಾಹಿತ್ಯಕೃತಿಯ ಹಾಗೆ ಓದುಗರನ್ನು ಸುಲಭವಾಗಿ ತಲುಪಿದೆ. ಈ ಕೃತಿಯ ವಿಶೇಷ ಇರುವುದೇ ವಿಶ್ವವನ್ನು ನಮ್ಮಂತಹವರಿಗೂ ಅರ್ಥವಾಗುವ ಹಾಗೆ ವಿವರಿಸುವಲ್ಲಿ. ಹಾಕಿಂಗ್‌ನ ಭಾಷೆಗೆ ಕಾವ್ಯದ ಮಾದಕತೆಯಿದೆ.

Best Sellers
ಕಾಡು ಪ್ರಾಣಿಗಳು (Chart)
ನವಕರ್ನಾಟಕ, Navakarnataka
Rs. 36/-   Rs. 40
ಸರ್ ಎಂ ವಿ (ವಿಶ್ವೇಶ್ವರಯ್ಯ) ಒಂದು ಬಿಚ್ಚುನೋಟ
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 198/-   Rs. 220
ಸಚಿತ್ರ ಹಿಂದೀ-ಹಿಂದೀ-ಕನ್ನಡ ರತ್ನ ಕೋಶ
ಪಂಡಿತ ಜೆ ಡಿ ಮೈಸಾಳೆ , Pandit J D Maisale
Rs. 216/-   Rs. 240
ಶತಮಾನದ ಸಣ್ಣ ಕತೆಗಳು
ದಿವಾಕರ್ ಎಸ್, Diwakar S
Rs. 539/-   Rs. 599

Latest Books
ಸೋಲೆಂಬುದು ಅಲ್ಪವಿರಾಮ (ಬದುಕು ಬದಲಿಸಬಹುದು - ಭಾಗ - 3)
ನೇಮಿಚಂದ್ರ, Nemichandra
Rs. 225/-   Rs. 250
ಗೆಲುವು ನಿಮ್ಮದಾಗಬೇಕೆ ? (ಬದುಕು ಬದಲಿಸುವ ಕಥೆಗಳು)
ವಿನಾಯಕ ಕೋಡ್ಸರ, Vinayaka Kodsara
Rs. 90/-   Rs. 100
ಮತಧರ್ಮದ ಕುರಿತು
ಕಾರ್ಲ್ ಮಾರ್ಕ್ಸ್, Karl Marx
Rs. 113/-   Rs. 125
13 Years : A Naxalites Prison Diary
ರಾಮಚಂದ್ರ ಸಿಂಗ್, Ramachandra Singh
Rs. 356/-   Rs. 395


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.