|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2018 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
40 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1115128 |
ಇದರ ವಿಷಯ-ಆಂಗ್ಲ ಸಾಹಿತ್ಯ-ನಮ್ಮ ಜನಕ್ಕೆ ತುಂಬ ಮುಖ್ಯವಾದದ್ದು.
ಈ ದೇಶದ ವಿದ್ಯಾಭ್ಯಾಸಕ್ರಮದಲ್ಲಿಯೂ ಜನಜೀವನದಲ್ಲಿಯೂ ಇಂಗ್ಲಿಷ್ ಭಾಷೆಗೆ
ಯಾವ ಸ್ಥಾನವಿರಬೇಕೆಂಬ ವಿಷಯದಲ್ಲಿ ಬಹುಮಂದಿಗೆ ಮನಸ್ಸು ಕದಲಿ
ಅನಿಶ್ಚಿತವಾಗಿರುವಾಗ, ಶ್ರೀಮಾನ್ ಗೋಕಾಕರವರಂಥ ಮಹಾವಿದ್ವಾಂಸರೂ
ವಿಚಾರವಂತರೂ ಕೊಟ್ಟಿರುವ ಅಭಿಪ್ರಾಯಗಳು, ಒಂದು ನಿಶ್ಚಯಕ್ಕೆ ಬರುವುದರಲ್ಲಿ
ಜನರಿಗೆ ಸಹಾಯವಾದಾವು ಎಂಬುದರಲ್ಲಿ ಸಂದೇಹವಿಲ್ಲ.
-ಡಿ.ವಿ.ಜಿ.
(ಮುನ್ನುಡಿಯಿಂದ)
....................................................
ವಿ. ಕೃ. ಗೋಕಾಕ್ ಕನ್ನಡ ಸಾಹಿತ್ಯ ಕಂಡ ಅಪರೂಪದ ಕವಿ, ಚಿಂತಕ, ಶಿಕ್ಷಣ
ತಜ್ಞ, ತತ್ವಶಾಸ್ತ್ರಜ್ಞ. ಅವರ ಕಾವ್ಯದಲ್ಲಿ ಹೇಗೋ ಹಾಗೆಯೇ ಗದ್ಯದಲ್ಲಿಯೂ ಸಹ
ತಾತ್ವಿಕ ವಿಚಾರಗಳನ್ನು ಸ್ಪಷ್ಟವಾಗಿ, ನೇರವಾಗಿ ಮಂಡಿಸುತ್ತಾರೆ. ಹೀಗೊಂದು
ಚಿಂತನಾಕ್ರಮ, ವಿಚಾರಶೀಲತೆ ಇದೆ ಎಂಬುದು ನಮ್ಮ ಮನಸ್ಸಿಗೆ ಬರುತ್ತದೆ.
ತಮ್ಮೆಲ್ಲ ಕೆಲಸಗಳ ಜೊತೆಗೆ ಗೋಕಾಕರು ಬರೆದ ಸಾಹಿತ್ಯ ರಾಶಿ ಕಡಿಮೆಯೇನಲ್ಲ.
ಅವು ಹೊಸ ಜನಾಂಗಕ್ಕೆ ನಿರಂತರವಾಗಿ ಮುಟ್ಟಬೇಕೆಂಬ ಅಭಿಲಾಶೆಯಿಂದ ಅಭಿನವ
ಅವರ ಎಲ್ಲ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ...
1973ರಲ್ಲಿ ಪ್ರಥಮ ಮುದ್ರಣವಾಗಿದ್ದ ಈ ಕೃತಿ ಅಭಿನವದಿಂದ ಮರುಮುದ್ರಣಗೊಂಡಿದೆ...
|
ವಿನಾಯಕ ಕೃಷ್ಣ ಗೋಕಾಕರು (1909-1992) ವಿ.ಕೃ.ಗೋಕಾಕ್ ಎಂದೇ ಪರಿಚಿತರು. ಇದುವರೆಗೂ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಮೊದಲ ನಾಲ್ಕು ಪ್ರಶಸ್ತಿಗಳು ನವೋದಯ ಪರ್ವ ಕಾಲದ ಮೇರು ಸಾಹಿತಿಗಳಿಗೆ ಸಂದರೆ(ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ) ನಂತರದ ನಾಲ್ಕು ಪ್ರಶಸ್ತಿಗಳು ನವ್ಯೋತ್ತರ ಕಾಲದ, ಆಧುನಿಕ ಸಮಕಾಲೀನ ಕನ್ನಡ ಸಾಹಿತ್ಯದ ಉದ್ದಾಮ ಸಾಹಿತಿಗಳಿಗೆ ದೊರೆತಿವೆ (ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕಂಬಾರ). ವಿ.ಕೃ.ಗೋಕಾಕರು ನವ್ಯೋತ್ತರ ಕನ್ನಡ ಸಾಹಿತ್ಯ ದಿಗಂತದ ಅರುಣೋದಯವೆನ್ನಬಹುದು.
ವಿನಾಯಕ ಕೃಷ್ಣ ಗೋಕಾಕರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಬಿ.ಎ. ಹಾಗೂ ಎಂ.ಎ.ನಲ್ಲಿ ಪ್ರಥಮ ರ್ಯಾಂಕ್ ಪಡೆದರು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಅಧ್ಯಾಪಕ ಕೆಲಸವನ್ನು ಮಾಡಿ ಅನಂತರ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ವಿದೇಶದಿಂದ ಹಿಂದಿರುಗಿ ಸಾಂಗಲಿಯ ವೆಲ್ಲಿಂಗ್ಡನ್ ಕಾಲೇಜಿನ ಪ್ರಾಂಶುಪಾಲರಾದರು. ಅನಂತರ ಹೈದರಾಬಾದ್, ಗುಜರಾತ್ ಹಾಗೂ ಕೊಲ್ಹಾಪುರಗಳಲ್ಲಿ ಪ್ರಾಂಶುಪಾಲ ವೃತ್ತಿಯನ್ನು ನಿಭಾಯಿಸಿ ಕೊನೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಗೋಕಾಕರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು `ಪದ್ಮಶ್ರೀ` ಪ್ರಶಸ್ತಿ ನೀಡಿ ಗೌರವಿಸಿದೆ.
|
|
| |
|
|
|
|
|
|
|
|
|