|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ನನ್ನ ಅಜ್ಜಿಯ ಜಗತ್ತು’ ಎಂಬ ಅವಿಸ್ಮರಣೀಯ ನೆನಪಿನ ಸಂಚಿ ನೀಡಿರುವ ಲೇಖಕಿ ರಜನಿ ನರಹಳ್ಳಿ ಅವರ ಪ್ರಸ್ತುತ ಕೃತಿ ‘ಆತ್ಮವೃತ್ತಾಂತ’ ಹಲವು ಕಾರಣಗಳಿಗಾಗಿ ಪ್ರಮುಖವೆನಿಸುತ್ತದೆ. ಲಿಯೋ ಎಂಬ ಸಾಕುನಾಯಿಯ ಬದುಕಿನ ಸುದೀರ್ಘ ಕಥನವಿದು. ಸಕಲ ಜೀವಜಾತರ ಬದುಕಿನ ರೂಪಕವಾಗಿ ಇಲ್ಲಿ ಲಿಯೋ ಮಾತಾಡಿದೆ. ಮುಖ್ಯವಾಗಿ ಇಲ್ಲಿ ಕಾಣುವುದು ತಾನು ಸಾಕಿದ ನಾಯಿಯೊಂದಿಗೆ ಲೇಖಕಿ, ಸಾಕು ತಾಯಿ-‘ಅಮ್ಮ’-, ಹೊಂದಿದ ಅನ್ಯಾದೃಶ ಆಪ್ತತೆ, ತಾದಾತ್ಮ್ಯ ಪ್ರೀತಿ. ಇಂಥ ಅಪೂರ್ವ ತಾದಾತ್ಮ್ಯದಿಂದಾಗಿಯೇ ಅನುಬಂಧ ಹಾಗೂ ಸಂವೇದನೆಯ ಒಂದು ಅರ್ಥಪೂರ್ಣ ವ್ಯಾಖ್ಯಾನ ಇಲ್ಲಿ ವಿಸ್ಮಯಕಾರಿಯಾಗಿ ಅರಳಿದೆ.
ಇದನ್ನು ಓದಿದ ಮೇಲೆ ನಾಯಿಯೊಂದು ‘ಕೇವಲ’ ‘ನಾಯಿ’ಯಷ್ಟೇ ಅಂತನಿಸಲು ಸಾಧ್ಯವೇ ಇಲ್ಲ. ನಾಯಿ ಮಾತ್ರವಲ್ಲ; ಯಾವ ಪ್ರಾಣಿಯೂ ಯಾರೂ ಮುಖ್ಯರಲ್ಲ, ‘ಯಃಕಶ್ಚಿತ್ ಹುಳವೂ’ ಅಮುಖ್ಯವಲ್ಲ ಎಂಬುದನ್ನು ತನ್ನದೇ ರೀತಿಯಲ್ಲಿ ಹೃದಯಸ್ಪರ್ಶಿಯಾಗಿ ಅಹುದಹುದೆನ್ನುವಂತೆ ಚಿತ್ರಿಸಿದ ಇದೊಂದು ಕನ್ನಡ ಕಂಡ ಅಪರೂಪದ ಕೃತಿಯೇ ಸರಿ.
|
| |
|
|
|
|
|
|
|
|
|