|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಧ್ಯಾಪಕರು ಯಾರು? ಅಧ್ಯಾಪಕರು ಏನನ್ನು ಮಾಡುತ್ತಾರೆ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸದ ಉದ್ದೀಶ್ಯವನ್ನಷ್ಟೇ ವಿಚಾರಣೆಗೆ ಸೀಮಿತಗೊಳಿಸದೆ, ಅಧ್ಯಾಪಕರು-ವಿದ್ಯಾರ್ಥಿಗಳ ಮಧ್ಯೆ ಇರಬೇಕಾದ ಬಹುಮುಖ ಸಂಬಂಧದತ್ತ ತೀಕ್ಷ್ಣ ದೃಷ್ಟಿ ಹರಿಸುವುದು ಈ ಕೃತಿಯ ವೈಶಿಷ್ಟ್ಯ.
* ಅಧ್ಯಾಪಕ ವೃತ್ತಿಯಲ್ಲಿ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಅಪರಿಮಿತ. ಹೆಚ್ಚಿನ ಮಾಹಿತಿ ಪಡೆದ, ಮಕ್ಕಳ ವರ್ತನೆಯ ಹಿನ್ನೆಲೆಯನ್ನು ಅರಿತ, ಅವರ ಮನಸ್ಸಿನ ಮೇಲೆ, ಅವರ ವ್ಯಕ್ತಿತ್ವವನ್ನು ಕದಲಿಸದೇ ಅವರ ಸಾಧನೆಗೆ ನೆರವಾಗುವ ಪರಿಣತಿಯಿದ್ದ ಅಧ್ಯಾಪಕಿ ನಮಗೆ ಆದರ್ಶ.
* ಯಾವುದನ್ನು ಇತರರು "ಸೋಲು" ಅಂದುಕೊಳ್ಳುತ್ತಾರೊ ಸೃಜನಶೀಲರು ಅದನ್ನು ಸಾಧನೆಯ ಒಂದು ಮೆಟ್ಟಲಾಗಿ ಉಪಯೋಗಿಸುತ್ತಾರೆ, ಅದನ್ನವರು ಯಾವ ದಾರಿಯಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರೆಯಬಹುದು ಎಂಬ ಮಾಹಿತಿಗಾಗಿ ಉಪಯೋಗಿಸುತ್ತಾರೆ.
* ವಿದ್ಯಾರ್ಥಿಗಳು ಅಧ್ಯಾಪಕಿ ಕೇಳಿದ ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿರುತ್ತಾರೆ ಎಂಬುದಕ್ಕಿಂತಲೂ ಅವರು ಎದುರಿಸುವ ಪ್ರಶ್ನೆಗಳಿಗೆ ತಮ್ಮಲ್ಲಿ ಉತ್ತರ ಇಲ್ಲದಾಗ ಹೇಗೆ ವರ್ತಿಸುತ್ತಾರೆ ಎಂಬುದು ಹೆಚ್ಚು ಮುಖ್ಯ.
|
ಕೃಷ್ಣಮೂರ್ತಿ ತಾಳಿತ್ತಾಯರು ಕಾಸರಗೋಡು ತಾಲೂಕಿನ ಮಂಜೇಶ್ವರ ಬಳಿಯ ವರ್ಕಾಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗವನ್ನು ಮಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಮಾಡಿದರು. ವಾಣಿಜ್ಯ, ಸಮಾಜ ಸೇವೆ ಮತ್ತು ಮಾನವ ಸಂಪನ್ಮೂಲಗಳಲ್ಲಿ ವಿದ್ಯಾರ್ಹತೆಗಳನ್ನು ಹೊಂದಿರುವ ತಾಳಿತ್ತಾಯರು ಸಾರ್ವಜನಿಕ ಮತ್ತು ಖಾಸಗಿ ರಂಗದ ಹಲವು ದೊಡ್ಡ ಸಂಸ್ಥೆಗಳಲ್ಲಿ ಸುಮಾರು ನಾಲು ದಶಕಗಳ ಸೇವೆ ಸಲ್ಲಿಸಿರುತ್ತಾರೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಮಂಗಳೂರಿನ ಬೃಹತ್ ಮೋಂಬತ್ತಿ ಕಾರ್ಖಾನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
|
|
| |
|
|
|
|
|
|
|
|
|