|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2009 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದಿನಂಪ್ರತಿ ಉದಯಿಸುವ ಸೂರ್ಯ, ರಾತ್ರಿಯ ತಂಪನ್ನು ಉಣಬಡಿಸುವ ಚಂದ್ರ ಆಗಿಂದ್ದಾಗ್ಗೆ ಬೆಳಗಿನಲ್ಲಿ ಹಾಜರಾಗುವ ಕೌತುಕ, ನಡುಹಗಲಲ್ಲಿ ಕಗ್ಗತ್ತಲಾಗುವ ವಿಸ್ಮಯ ಹೀಗೆ ಆಕಾಶಕಾಯಗಳು ಬಹಳ ಹಿಂದಿನಿಂದಲೂ ಮಾನವನ ಕುತೂಹಲವನ್ನು ಕೆರಳಿಸುತ್ತಿದ್ದವು. ಅವುಗಳ ಅವಿರತ ಚಲನೆ ಒಮ್ಮೆ ಸುಲಭವಾಗಿ ಅರ್ಥವಾಗುವಂತೆ ಮಗದೊಮ್ಮೆ ಕಗ್ಗಂಟಾದಂತೆ ಕಾಣುತ್ತಿತ್ತು. ಭೂಮಿ ಸೂರ್ಯನನ್ನು ಏಕೆ ಸುತ್ತಬೇಕು ? ಗ್ರಹಗಳು ಸೂರ್ಯನನ್ನು ಏಕೆ ಸುತ್ತಬೇಕು ? ಹೀಗೆ ಆರಂಭವಾಗುವ ತರ್ಕ ಗುರುತ್ವಾಕರ್ಷಣೆಯಂತಹ ತತ್ವಗಳನ್ನು ತಿಳಿಸಿಕೊಟ್ಟಿತು. ಬರಿಗಣ್ಣಿಗೆ ಚುಕ್ಕೆಗಳ ಹಾಗೆ ಕಾಣುವ ನಮ್ಮ ನೆರೆಹೊರೆಯ ಕಾಯಗಳು ದೂರದರ್ಶಕದ ಮೂಲಕ ಹೊಸ ಜಗತ್ತನ್ನೇ ಪರಿಚಯಿಸುತ್ತವೆ. ದೂರದ ಚುಕ್ಕಿಗಳ ಅಧ್ಯಯನ ನಮಗೆ ಏಕೆ ಬೇಕು ? ಅದೂ ಒಂದು ಪ್ರಶ್ನೆ. ಇವುಗಳ ಉತ್ತರ ಒದಗಿಸುವ ಸಣ್ಣ ಪ್ರಯತ್ನ ಈ ಪುಸ್ತಕ.
|
ಶ್ರೀಮತಿ ಬಿ ಎಸ್ ಶೈಲಜಾ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಅತಿ ಹೆಚ್ಚು ಉಷ್ಣತೆಯ ಯಮಳ ನಕ್ಷತ್ರಗಳ ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿಯನ್ನು ಗಳಿಸಿದ್ದಾರೆ. ‘ಹೊಸತು’ ಪತ್ರಿಕೆಯ ಪ್ರಾರಂಭದಿಂದಲೂ ‘ನಭಾವಲೋಕನ’ ಅಂಕಣ ಬರೆಯುತ್ತಿದ್ದಾರೆ. ಖಗೋಳ್ ವಿಜ್ಞಾನಕ್ಕೆ ಸಂಬಂಧಿಸಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇವರ ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘Chintamani Ragoonatha Charry and Contemporary Indian Astronomy’ ‘ಏನು...? ಗಣಿತ ಅಂದ್ರಾ...?’ ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ. ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಪ್ರಸ್ತುತ ಇವರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿಯಾಗಿದ್ದಾರೆ.
|
|
| |
|
|
|
|
|
|
|
|
|