|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ|| ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪ್ರಶಸ್ತಿ’ 2013 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ನಾನು ಅಸಹಾಯಕ, ನಿಷ್ಪ್ರಯೋಜಕ ಮತ್ತು ಇನ್ನು ನನಗಾರು ಗತಿ’ ಎಂಬ ನಕಾರಾತ್ಮಕ ಭಾವನೆಗಳಿಗೆ ದಾಸರಾಗಿ ಆಧುನಿಕ ಯುಗದ ಹದಿಹರೆಯದ ಹುಡುಗ-ಹುಡುಗಿಯರಲ್ಲಿ ಹಲವರು ಸೋಲಿನಿಂದ ಕಂಗೆಟ್ಟು ಪ್ರಯತ್ನಗಳನ್ನು ಕೈಚೆಲ್ಲಿ ಆತ್ಮಹತ್ಯೆಗೆ ಮನಮಾಡುವುದು ಅಥವಾ ಮನೆಬಿಟ್ಟು ಓಡಿಹೋಗುವುದು ಈಗ ಸಾರ್ವಜನಿಕ ಚಿಂತೆಯ ವಿಷಯ. ಬಾಳಿ ಬದುಕಿ ಬೆಳಗಬೇಕಾದ ಎಳೆಯ ಕುಡಿಗಳು ಜೀವನಾಸಕ್ತಿಯನ್ನೇ ಕಳೆದುಕೊಂಡು ಮುದುಡುತ್ತಿರುವುದು ಒಂದು ಮಹಾ ದುರಂತ. ‘ಮನಸ್ಸಿದ್ದರೆ ಮಾರ್ಗವಿದೆ’, ‘ಸಾಧಿಸಿದರೆ ಸಬಳ ನುಂಗಬಹುದು’, ‘ಇಲ್ಲಿ ಯಾವುದೂ ಅಸಾಧ್ಯವಲ್ಲ’, ‘ನಾವು ಗೆದ್ದೇ ಗೆಲ್ಲುವೆವು’, ‘ಈಸಬೇಕು ಇದ್ದು ಜೈಸಬೇಕು’ ಮೊದಲಾದ ರೂಢಿಯ ಮಾತುಗಳು ಬದುಕನ್ನು ಬೆಳಗುವ ತಾರೆಗಳು. ಇಂಥ ಸೂಕ್ತಿಗಳಲ್ಲಿ ‘ಧನಾತ್ಮಕ ಮನೋವಿಜ್ಞಾನ’ದ ಸಾರ ಹುದುಗಿದೆ. ಸದ್ಯದ ಹಾಗೂ ನಾಳಿನ ಬದುಕಿಗೆ ಆಧಾರವಾಗುವ ಶಕ್ತಿ ಧನಾತ್ಮಕ ಮನೋವಿಜ್ಞಾನಕ್ಕೆ ಇದೆ. ಮನೋವಿಜ್ಞಾನದ ಕ್ಷೇತ್ರದ ತೀರ ಈಚಿನ ಕುಡಿಯಾಗಿರುವ ‘ಪಾಸಿಟಿವ್’ ಮನೋವಿಜ್ಞಾನದ ಮೂಲ ಆಶಯಗಳನ್ನು ನಿಜ ಜೀವನದ ಸ್ವಾರಸ್ಯಕರ ದೃಷ್ಟಾಂತಗಳೊಂದಿಗೆ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಸಿದ್ಧಾಂತಗಳ ಪರಿಭಾಷೆಗಳ ಕಗ್ಗಾಡಿನಲ್ಲಿ ಓದುಗರನ್ನು ಕಣ್ಣು ಕಟ್ಟಿ ಬಿಡದೆ ತಿಳಿಯದ ಅರ್ಥಗಳ ದೀಪಸಾಲುಗಳ ಮೂಲಕ ದಾರಿ ಸಾಗುವ ಸಾರ್ಥಕ ಪ್ರಯತ್ನ ಇದರಲ್ಲಿದೆ.
|
ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|