|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
7 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
148 |
ಪುಸ್ತಕದ ಗಾತ್ರ |
: |
1/4 Crown Size |
ISBN |
: |
9788173020872 |
ಕೋಡ್ |
: |
001985 |
ಆಹಾರವನ್ನು ಸಂಗ್ರಹಿಸುವುದು ಮತ್ತು ಉಪಯೋಗಿಸುವುದು, ನೀರನ್ನು ಕುಡಿಯುವುದಕ್ಕೆ ಯೋಗ್ಯವನ್ನಾಗಿ ಮಾಡುವುದು, ಕಸದ ವಿಲೇವಾರಿ ಹಾಗೂ ಮನೆಯ ಪರಿಸರವನ್ನು ಆರೋಗ್ಯವಾಗಿಡುವುದು - ಇತ್ಯಾದಿ ಪ್ರಾಯೋಗಿಕ ವಿಷಯಗಳು ಈ ಪುಸ್ತಕದ ಅಧ್ಯಾಯಗಳಾಗಿವೆ. ದೇಹಕ್ಕೆ ನೀರು ಏಕೆ ಅಗತ್ಯ (ಭೇದಿಯಿಂದಾಗಿ ಉಂಟಾಗುವ ನಿರ್ಜಲ ಸ್ಥಿತಿಯ ಅಪಾಯವೂ ಸೇರಿದಂತೆ), ಆರೋಗ್ಯವಾಗಿರಲು ದೇಹಕ್ಕೆ ಅಗತ್ಯವಾದ ಆಹಾರದ ವಿಧಗಳು, ಯಾವುದೇ ಸಮುದಾಯದಲ್ಲಿ ಸೋಂಕು ಮತ್ತು ಕಾಯಿಲೆಗಳು ಹರಡುವ ವಿಧಾನಗಳನ್ನು ಮಕ್ಕಳಿಗೆ ವಿವರಿಸುವ ಮಾರ್ಗದರ್ಶನವೂ ಈ ಪುಸ್ತಕದಲ್ಲಿದೆ. ಶಿಕ್ಷಕರು ತಾವು ಬೋಧಿಸುವ ವಿಷಯಗಳನ್ನು, ಈಗಾಗಲೇ ಮಕ್ಕಳಿಗೆ ತಿಳಿದಿರುವ ಮಾಹಿತಿಗೆ, ಸ್ಥಳೀಯ ಆಚರಣೆಗಳಿಗೆ, ಲಭ್ಯವಿರುವ ಸಂಪನ್ಮೂಲಗಳಿಗೆ, ಈಗಾಗಲೇ ಸಮುದಾಯದಲ್ಲಿ ಕೈಗೊಳ್ಳಲಾಗಿರುವ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಹೇಳಲು ಈ ಪುಸ್ತಕದಲ್ಲಿ ಒತ್ತುಕೊಡಲಾಗಿದೆ. ಸ್ಥಳೀಯ ಆರೋಗ್ಯ ಕಾರ್ಯಕರ್ತರ ಸಹಕಾರ ಮತ್ತು ಸಲಹೆಗಳನ್ನು ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಪಡೆಯಲು ಸೂಚಿಸಲಾಗಿದೆ. ಪುಸ್ತಕ ಸಾಕಷ್ಟು ಚಿತ್ರಗಳಿಂದ ಕೂಡಿದೆ. ಪ್ರಾಯೋಗಿಕವಾಗಿ ತಾವೇ ಮಾಡಬಹುದಾದಂತಹ ಅನೇಕ ಚಟುವಟಿಕೆಗಳನ್ನು ಮಕ್ಕಳಿಗೆ ಸೂಚಿಸಲಾಗಿದ್ದು, ಅವರು ತಾವು ಕಲಿತದ್ದನ್ನು ಮಾಡಿ ನೋಡಿ, ತಾವು ಕಲಿತ ಜ್ಞಾನ, ಶಾಲೆಯಿಂದ ಹೊರಗೆ ತಮ್ಮ ಜೀವನದಲ್ಲಿ ಹೇಗೆ ಪ್ರಸ್ತುತವಾಗಿದೆ ಎಂದು ತಿಳಿಯಲು ಅವಕಾಶವಿದೆ. ಅನೇಕ ಚಟುವಟಿಕೆಗಳಲ್ಲಿ ತಂದೆತಾಯಿಗಳು ಮತ್ತು ಸಮುದಾಯದ ಮುಖಂಡರು ತಾವೂ ಸಹಕರಿಸಿ ಭಾಗವಹಿಸಲು ಪ್ರೋತ್ಸಾಹ ಕೊಡಲಾಗಿದೆ. ಪುಸ್ತಕವು ಶಿಫಾರಸು ಮಾಡುವ ಆಹಾರ, ಪರಿಸರ ಮತ್ತು ಆರೋಗ್ಯದ ಬಗ್ಗೆ ಸಂದೇಶಗಳು ಎಲ್ಲೆಡೆ ಹರಡಲು ಇದೂ ಒಂದು ವಿಧಾನ.
|
| | |
|
|
|
|
|
|
|