|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಲ್ಯದ ನೆನಪುಗಳು ಸದಾ ನಮ್ಮೊಡನೇ ಇರುವಂಥವು. ತಮ್ಮ ಬದುಕಿನ ಬವಣೆಯ ಬಿಸಿ ಮಕ್ಕಳಿಗೆ ತತ್ತಬಾರದೆಂದು ಬಯಸುತ್ತ. ಮಕ್ಕಳ ಬಾಲ್ಯ ಸುಖಮಯವಾಗಿರಲೆಂದು ಶ್ರಮಿಸುವ ಅಜ್ಜ - ಅಜ್ಜಿಯರ ಅಕ್ಕರೆಯಲ್ಲಿ ಬೆಳೆದವರಿಗಂತೂ ಆ ನೆನಪುಗಳು ಸದಾ ಹಸಿರಾಗಿರುತ್ತದೆ. ಸಿಕ್ಕಿದ್ದಕ್ಕೆಲ್ಲ ಮಕ್ಕಳನ್ನು ಗದರಿಸಿ ದೂರವಿರಿಸುವ "ದೊಡ್ಡ"ವರಂತಲ್ಲದೆ, ಮಕ್ಕಳ ಜೊತೆಗೆ ತಾವು ಮಕ್ಕಳಾಗಿ, ಹಬ್ಬ ಹರಿದಿನಗಳಲ್ಲಿ ಮನೆಯ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಮಕ್ಕಯಿಂದ ತೊಡಗಿಸುವಂತೆ ಮಾಡುತ್ತಿದ್ದ ಹಿರಿಯರು, ಕೆಲಸದಾಳುಗಳು ಸಹ ಆ ಪುಟ್ಟ ಹೃದಯಗಳಲ್ಲಿ ತಮಗೆಂದು ಒಂದು ಸ್ಥಳ ಗಿಟ್ಟಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಎಲ್ಲ ಮಕ್ಕಳಿಗೂ ಇಂಥ ಅನುಭವ ಸಾಧ್ಯವಾಗಲಾರದು ಎಂಬುದು ಬೇರೆಯ ವಿಷಯ!
ಈ ಕೃತಿಯ ಲೇಖಕಿ ಶ್ರೀಮತಿ ವಿಜಯ ಶ್ರೀಧರ್ ಮತ್ತೆ ಮತ್ತೆ "ಅಜ್ಜನ ಮನೆ ಅಂಗಳದಲ್ಲಿ" ಸುಳಿದಾಡುತ್ತ. ಬಾಲ್ಯದ ಬೆರಗಿನ ಕಣ್ಣುಗಳಿಂದ ಹುಡುಕಾಡಿ ಜಲವು ಸ್ವಾರಸ್ಯಕರ ವಿಷಯಗಳನ್ನು ನೆನಪಿನ ಕಣಜದಿಂದ ಹೊರತೆಗೆದಿದ್ದಾರೆ. ಬಾಲ್ಯದತ್ತ ಪಯಣ ಎಷ್ಟು ಆನಂದ ನೀಡಬಲ್ಲುದು ಎಂಬುದನ್ನು ಲಲಿತ ಪ್ರಬಂಧಗಳ ರೂಪದಲ್ಲಿ ನೀಡಿದ್ದಾರೆ.
|
| |
|
|
|
|
|
|
|
|