|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರತಿಯೊಬ್ಬರೂ ಚಿನ್ನದ ಗಣಿಯೇ. ಆತ್ಮವಿಶ್ವಾಸ ಪ್ರೇರೇಪಣೆ. ಉತ್ತೇಜನಗಳ ಕೊರತೆಯಿಂದಾಗಿ ಅನೇಕರು ಕೀಳರಿಮೆಯಿಂದ ನರಳುತ್ತ ತಮ್ಮ ಸಾಮರ್ಥ್ಯವನ್ನು ಅರಿಯದೇ ಹೋಗುತ್ತಾರೆ. ಭಾವನೆಗಳನ್ನು, ಸಂಬಂಧಗಳನ್ನು ನಿರ್ವಹಿಸಿಕೊಳ್ಳಲು ಬರಗೆ ಪರದಾಡುತ್ತಾರೆ. ಟೀಕೆಗಳನ್ನು ಮತ್ತು ನಿರಾಶೆಗಳನ್ನು ಎದುರಿಸಲಾರದೆ ಖಿನ್ನರಾಗುತ್ತಾರೆ. ಇವೆಲ್ಲವೂ ಅನೇಕರನ್ನು ಸಾಧಕರಾಗುವ ದಾರಿ ತಪ್ಪಿಸಿ ಸಮಸ್ಯೆಗಳ ದಾರಿಯಲ್ಲಿ ಕರೆದೊಯ್ಯುತ್ತವೆ. ನಮ್ಮ ಕನಸುಗಳು, ನಮ್ಮಲ್ಲಿ ಹುದುಗಿರುವ ಕೌಶಲ್ಯ, ಸಾಮರ್ಥ್ಯಗಳು ನಮ್ಮ ಅಮೂಲ್ಯ ಆಸ್ತಿ. ಸೃಜನಶೀಲತೆ ನಮ್ಮ ಶಕ್ತಿ. ಇವುಗಳನ್ನು ಬಳಸಿಕೊಂಡರೆ ಸಾಧನೆ ಮಾಡುವುದು ಸಾಧ್ಯ. ಸಾಧಕರಾಗಲು ಅಡ್ಡಿ ಬರುವುದನ್ನು ನಿವಾರಿಸಿಕೊಂಡು, ಇರುವುದನ್ನು ಬಳಸಿಕೊಂಡು, ಅವಕಾಶಗಳನ್ನು ಕಲ್ಪಿಸಿಕೊಂಡು, ಛಲದಿಂದ ಮುನ್ನಡೆದರೆ ಯಾರು ಬೇಕಾದರೂ ಸಾಧಕರಾಗಬಹುದು.
ಇದಕ್ಕೆ ಸೂಕ್ತ ಉಪಾಯಗಳು, ಸಲಹೆಗಳು ನಿಮಗೆ ಈ ಪುಸ್ತಕದಲ್ಲಿ ಲಭ್ಯ. ನೈಜ ದೃಷ್ಟಾಂತಗಳೊಂದಿಗೆ ಉತ್ತೇಜನ ನೀಡಬಲ್ಲ, ಸುಲಭವಾಗಿ ಓದುವಷ್ಟು ಚಿಕ್ಕದಾದ, ಅಧ್ಯಾಯಗಳು ಇದರಲ್ಲಿ ಇವೆ. ಮೊದಲಿನಿಂದ ಕೊನೆಯವರೆಗೂ ಓದಲೇಬೇಕು ಎಂಬ ನಿಯಮವಿಲ್ಲದೆ ಬೇಕಾದಾಗ ಬೇಕೆನಿಸಿದ ವಿಷಯವನ್ನು ಆರಿಸಿಕೊಂಡು ಓದಲು ನೆರವಾಗುವ ರೀತಿಯಲ್ಲಿ ಅಧ್ಯಾಯಗಳು ವರ್ಗೀಕರಿಸಲ್ಪಟ್ಟಿವೆ. ನಿಮ್ಮೊಳಗಿರುವ ಚಿನ್ನದ ಗಣಿಯನ್ನು ಹೊರತಂದು ನೆಮ್ಮದಿಯ ಜೀವನ ನಡೆಸಲು ಈ ಪುಸ್ತಕ ಖಂಡಿತ ನೆರವು ನೀಡಬಲ್ಲದು.
|
| |
|
|
|
|
|
|
|
|
|