|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಮರ ಹುತಾತ್ಮ ಸರದಾರ್ ಭಗತ್ ಸಿಂಗ್ ಒಂದು ಜೀವನ ವೃತ್ತಾಂತದ ಪುಸ್ತಕ ಮಾತ್ರವಲ್ಲ, ಸ್ವಾತಂತ್ರ್ಯ ಸಂಗ್ರಾಮದ ಮತ್ತು ತಾಯಿನಾಡಿನ ಪ್ರೇಮದ ಜೀವಂತ ಆಖ್ಯಾನ ಕೂಡ. 23ನೇ ಮಾರ್ಚ್ 1931ರ ದಿನ ಭಾರತದ ಇತಿಹಾಸದಲ್ಲಿ ಬ್ರಿಟಿಷ್ ಆಡಳಿತದ ಬರ್ಬರತೆಯ ಒಂದು ಜ್ವಲಂತ ಉದಾಹರಣೆ. ಈ ದಿನ ಸರದಾರ್ ಭಗತ್ ಸಿಂಗ್ ಮತ್ತು ಅವರ ಸಂಗಡಿಗರಾದ ಸುಕದೇವ್ ಮತ್ತು ರಾಜಗುರುವನ್ನೂ ಗಲ್ಲಿಗೇರಿಸಿದ್ದರು. ಕಾಲಾನಂತರವೂ ಈ ಮೃತ್ಯು ಹಳೆಯದಾಗಲಿಲ್ಲ. ಇಂದೂ ಈ ದಿನ ಭಾರತೀಯರಿಗೆ ಹುತಾತ್ಮರ ದಿನ. ಈ ಪುಸ್ತಕವನ್ನು ಸರದಾರ್ ಭಗತ್ಸಿಂಗ್ರ ಜೀವನ ವೃತ್ತಾಂತ ಎನ್ನದೆ ಅವರ ಸಂಘರ್ಷದ ಕತೆ ಎನ್ನುವುದು ಉತ್ತಮ. 1931ರಲ್ಲಿ ಈ ಪುಸ್ತಕವನ್ನು ಮೊದಲಿಗೆ ಇಂಗ್ಲಿಷಿನಲ್ಲಿ ಬರೆಯಲಾಗಿತ್ತು. ಇದನ್ನು ಬ್ರಿಟಿಷ್ ಸರ್ಕಾರ ಜಪ್ತಿ ಮಾಡಿತ್ತು. ಅದನ್ನೇ ಆಧರಿಸಿ ಈ ಪುಸ್ತಕವನ್ನು ಮತ್ತೆ ವಿಸ್ತಾರಪೂರ್ವಕವಾಗಿ ಬರೆಯಲಾಗಿದ್ದು ಹಿಂದಿಯಲ್ಲಿ ಮೊಟ್ಟ ಮೊದಲಿಗೆ 1947ರಲ್ಲಿ ಕರ್ಮಯೋಗಿ ಪ್ರೆಸ್ನಿಂದ ಪ್ರಕಟವಾಗಿದೆ.
ಬ್ರಿಟಿಷ್ ಸರ್ಕಾರ ಪುಸ್ತಕವನ್ನು ಜಪ್ತಿ ಮಾಡುವ ಕಲುಷಿತ ಮನೋವೃತ್ತಿಯನ್ನು ತೋರಿದ ವಿವರಣೆಯ ಜೊತೆಗೆ ಭಗತ್ಸಿಂಗ್ರ ಜೀವನದ ಎಲ್ಲ ಮಹತ್ವಪೂರ್ಣ ಘಟನೆಗಳನ್ನು, ಚಟುವಟಿಕೆಗಳನ್ನು ಅವರ ಸಂಘರ್ಷದ ಕತೆ ಮತ್ತು ಅವರ ಸಹಕರ್ಮಿಗಳ ಬಲಿದಾನದ ವರ್ಣನೆಯನ್ನು ಎಷ್ಟು ತಥ್ಯಪೂರ್ಣವಾಗಿ ಜಿತೇಂದ್ರನಾಥ ಸಾನ್ಯಾಲ್ ಅವರು ಈ ಪುಸ್ತಕದಲ್ಲಿ ಕೊಟ್ಟಿದ್ದಾರೆಂದರೆ ಮತ್ತೆಲ್ಲೂ ಇದು ಸಿಗಲಾರದು. ಲೇಖಕರು ಸರದಾರ್ ಭಗತ್ಸಿಂಗ್ರ ಆತ್ಮೀಯ ಸ್ನೇಹಿತರು. ತನ್ನ ದೇಶ ಮತ್ತು ದೇಶದ ಇತಿಹಾಸವನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಮಾನ್ಯ ಓದುಗರಿಗೆ ಇದು ಪ್ರೇರಣಾದಾಯಕ ಮತ್ತು ಸಂಗ್ರಹಣೀಯ ಪುಸ್ತಕವಾಗಿದೆ.
|
| | |
|
|
|
|
|
|
|