|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು. ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು. ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು. ಒಳಗಿದ್ದ ನೀರನ್ನು ಕುಡಿದನು. ಕೊಬ್ಬರಿಯನ್ನು ತಿಂದನು. ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು.
ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ!
ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೇ!
ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ!
ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ!
ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ..!
‘ಅನಂತದೆಡೆಗೆ...’ ಬದುಕಿನ ಬಗ್ಗೆ ಇಂತಹ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸುವ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು.
|
| |
|
|
|
|
|
|
|
|
|