|
|

| Rs. 300 | 10% |
Rs. 270/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಡಾ. ಎನ್.ಕೆ. ಪದ್ಮನಾಭ ಅವರ ಸಂಶೋಧನಾ ಮಹಾಪ್ರಬಂಧ ‘ಅನನ್ಯ ಹಾದಿಯ ಹೆಜ್ಜೆಗಳು’ ಶೀರ್ಷಿಕೆಯಲ್ಲಿ ಪ್ರಕಟವಾಗುತ್ತಿರುವುದು ಸಂತಸದ ಸಂಗತಿ. ಈ ಕೃತಿಯ ಮೂಲಕ ನಾಗಾಭರಣ ಸಿನಿಮಾಗಳು ಧ್ವನಿಸುವ ಒಟ್ಟು ಆಶಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯಕ ಸತ್ವ, ಸಾಮಾಜಿಕ ವಾಸ್ತವ, ಮಾನವೀಯ ಸಂವೇದನೆ, ದೇಸಿ ಸಂಸ್ಕೃತಿಯ ಸೊಗಡು ಮತ್ತು ಅಭಿವ್ಯಕ್ತಿ ವೈಶಿಷ್ಟ್ಯತೆಯೊಂದಿಗೆ ಗಮನ ಸೆಳೆಯುವ ನಾಗಾಭರಣ ಅವರ ಸಿನಿಮಾಗಳು ಎಲ್ಲ ಕಾಲಕ್ಕೂ ಪ್ರಸ್ತುತವಾದ ಕಥನವಸ್ತುಗಳನ್ನೇ ಜೀವಾಳವಾಗಿಸಿಕೊಂಡಿವೆ. ಅಂಥ ಸಿನಿಮಾಗಳನ್ನು ಸಾಧ್ಯಂತವಾಗಿ ಎಲ್ಲ ಮಗ್ಗಲುಗಳನ್ನು ವಿಶ್ಲೇಷಿಸಿದ್ದಾರೆ. ಸ್ಥಳೀಯತೆಯಿಂದ ದೇಶ-ವಿದೇಶದ ಸಂಗತಿ-ಸಾಂಗತ್ಯಗಳನ್ನು ಒರೆಗೆ ಹಚ್ಚಿ ಅಸ್ಮಿತೆ ಮೆರೆದಿದ್ದಾರೆ. ಇದೇ ಅಂತಿಮವಲ್ಲ ಎನ್ನುವ ವಿನಮ್ರತೆ ಜತೆಯಲ್ಲಿ ಭವಿಷ್ಯತ್ತಿನ ವ್ಯಾಸಂಗಾರ್ಥಿಗಳಿಗೆ ಟಿಎಸ್ಸೆನ್ ಎಲ್ಲ ಸಿನಿಮಾಗಳ ಅಧ್ಯಯನದ ಅವಕಾಶ, ಸಾಧ್ಯತೆ ಬಿಚ್ಚಿಟ್ಟಿದ್ದಾರೆ. ಅಂದಹಾಗೆ, ಹೊಸ ಶತಮಾನದ ಹೊಸ್ತಿಲಲ್ಲಿ ಸಿನಿಮಾ ಮಾಧ್ಯಮವು ಸಂಶೋಧನೆಯ ಜ್ಞಾನಶಿಸ್ತೀಯ ಸ್ಥಾನಮಾನ ಪಡೆದುಕೊಂಡ ಸಂದರ್ಭದಲ್ಲಿ ‘ಅನನ್ಯ ಹಾದಿಯ ಹೆಜ್ಜೆಗಳು’ ಅನಾವರಣಗೊಳ್ಳುತ್ತಿರುವುದು ಗಮನಾರ್ಹ.
|
| |
|
|
|
|
|
|
|
|