Items
0
Total
  0.00 
Welcome Guest.

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 92
ಪುಸ್ತಕದ ಗಾತ್ರ : 1/8 Demy Size
ISBN : 9788188478767
ಕೋಡ್ : 109644

ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾಡದ್ದು. “ನಾನು ಇಂಗ್ಲೆಂಡಿನಲ್ಲಿದ್ದಾಗ ನಡೆದ ಒಂದು ಸತ್ಯ ಸಂಗತಿ ಈ ನಾಟಕದ ವಸ್ತು” ಎಂದು ನಾಟಕಕ್ಕಿರುವ ವಾಸ್ತವದ ನೆಲೆಯನ್ನು ಕಾರ್ನಾಡರು ಸೂಚಿಸಿದ್ದಾರೆ (ಪ್ರಶಸ್ತಿ, 83:77) ಆದರೂ ಪುರಾಣ (myth) ಹಾಗೂ ಇತಿಹಾಸಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶ ಪೂರ್ವಕವಾಗಿ ನಮ್ಮ ಲಕ್ಷಕ್ಕೆ ತಂದಿದ್ದಾರೆ. ಯಾಮಿನಿ (ಋಗ್ವೇದದ ಯಮಿ ಶಬ್ದದ ಧ್ವನಿಯನ್ನು ಗಮನಿಸಬೇಕು) ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ಈ ನಾಟಕದ ವಸ್ತು. ದೃಶ್ಯ ನಾಲ್ಕರಲ್ಲಿ ಬರುವ ಕ್ಲಿಯೋಪಾತ್ರಳ ಪ್ರಸ್ತಾಪವೂ ಸಾಂದರ್ಭಿಕವಾದುದು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯರ ವಿವಾಹ ನಿಷಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು “The play might yield to Freudian reading” ಎಂದು ಹೇಳುವುದರ ಮೂಲಕ ಯಾಮಿನಿ-ಸತೀಶರ ಸಂಬಂಧದ ಮೇಲೆ ಕಾರ್ನಾಡರು ಬೆಳಕು ಚೆಲ್ಲಿದ್ದಾರೆ.

ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ|ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ. ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ೫ ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು. ೧೯೯೪ರಲ್ಲಿ ತಮ್ಮ `ತಲೆದಂಡ` ನಾಟಕಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಗಿರೀಶ್ ಕಾರ್ನಾಡ್ ಅವರು ನಾಟಕ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ ರಾಷ್ಟೀಯ, ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವಂಥವರು. ಅವರ ನಾಟಕಗಳು ಪುರಾಣ, ಇತಿಹಾಸ ಮತ್ತು ಜಾನಪದ ವಸ್ತು ಮತ್ತು ತಂತ್ರಗಳನ್ನು ಆಶ್ರುಸಿದ್ದರೂ, ರಂಗಸಾಧ್ಯತೆಗಳನ್ನು ವಿಸ್ತರಿಸುವ ಅಪರೂಪದ ಸಾಧನೆಗಳಿಗೆ ಅವನ್ನೇ ಬಳಸಿಕೊಂಡಿವೆ. ಹಳೆಯ ಕಥಾವಸ್ತುಗಳನ್ನೇ ಆಯ್ದುಕೊಂಡಿದ್ದರೂ ಸಮಕಾಲೀನ ಸನ್ನಿವೇಶಗಳಿಗೆ ಹಾಗೂ ಸಮಸ್ಯೆಗಳಿಗೆ ಅವುಗಳನ್ನು ಸಂಬಂಧಿಸಿರುವುದು ಅವರ ವೈಶಿಷ್ಟ್ಯವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜಿನಲ್ಲಿ ನಾಟಕಶಾಸ್ತ್ರ ವಿಭಾಗದಲ್ಲಿ ಪ್ರವಾಚಕರಾಗಿರುವ ಡಾ. ಮೀರಾ ಮೂರ್ತಿ ಈ ಪುಸ್ತಕದ ಲೇಖಕರು.

uploads/authorimages/1047.jpg
ಲೇಖಕರ ಇತರ ಕೃತಿಗಳು
10%
ಹೂವು, ಒಡಲು ಬಿಂಬ, ....
ಗಿರೀಶ ಕಾರ್ನಾಡ, Girish Karnad
Rs. 70    Rs. 63
10%
ಆಗೊಮ್ಮೆ ಈಗೊಮ್ಮೆ
ಗಿರೀಶ ಕಾರ್ನಾಡ, Girish Karnad
Rs. 200    Rs. 180
Best Sellers
ವಿಜ್ಞಾನ ಕಲಿಯೋಣ ಸಂಪುಟ - 4 (ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 325/-
ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ (ಬುದ್ಧ ಸಾಹಿತ್ಯ ಮಾಲೆ - 6)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
ಕುವೆಂಪು ಅವರ ಆಯ್ದ ಕವಿತೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಕರಿಸಿರಿಯಾನ
ಗಣೇಶಯ್ಯ ಕೆ ಎನ್, Ganeshaiah K n
Rs. 205/-

Latest Books
ಜಿ ವೆಂಕಟಸುಬ್ಬಯ್ಯ : ವಿಶ್ವಮಾನ್ಯರು
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಜೀವಜಗತ್ತಿನ ಕೌತುಕಗಳು : ಸಚಿತ್ರ - ವಿಚಿತ್ರ
ಲೀಲಾ ಎನ್ ಎಸ್, Leela N S
Rs. 135/-   Rs. 150
ಫ್ರೆಡರಿಕ್ ನೀಷೆ (ಬುದ್ಡಿಜೀವಿಯೊಬಬ್ಬನ ಭಾವಪೂರ್ಣ ಕಥಾನಕ)
ವಾಸುದೇವಮೂರ್ತಿ ಟಿ ಎನ್, Vasudevmurthy T N
Rs. 216/-   Rs. 240
ಸವಾರಿ ಗಿರಿ.. ಗಿರಿ.. : ಪ್ರವಾಸ ಕಥನ
ಸಂತೋಷ್ ಅನಂತಪುರ, Santosh Ananthapura
Rs. 113/-   Rs. 125


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.