|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗಂಡ ಹೆಂಡತಿ ಪರಸ್ಪರ ಹೊಂದಿಕೊಂಡು ಪ್ರೀತಿ ವಿಶ್ವಾಸದಿಂದ ಬಾಳುವುದೇ ಅನ್ಯೋನ್ಯ ದಾಂಪತ್ಯ. ಆದರೆ ಇಂದಿನ ಆಧುನಿಕ ಯಾಂತ್ರಿಕ ಜೀವನ ಪದ್ಧತಿ, ಇಬ್ಬರೂ ದುಡಿಯುವುದು, ಸಂಸಾರದ ತಾಪತ್ರಯಗಳು, ಕೆಲವು ಅನಿವಾರ್ಯತೆಗಳಿಂದ ಪರಸ್ಪರ ದೂರಾಗುವುದು - ಎಲ್ಲ ಸೇರಿ ದಾಂಪತ್ಯದ ’ಸಿಹಿ’ ’ಕಹಿ’ಯಾಗಿದೆ. ಇದರಿಂದ ಬದುಕು ಬೇಸರವೆನಿಸುತ್ತದೆ. ಸುಖ ಸಂತೋಷ ಮರೀಚಿಕೆಯಾಗುತ್ತಿದೆ. ಹಾಗಿದ್ದಲ್ಲಿ ದಾಂಪತ್ಯವನ್ನು ಅನ್ಯೋನ್ಯವಾಗಿಸಿ, ಪರಸ್ಪರ ಸಾಮರಸಯದಿಂದ ಬಾಳುವುದು ಹೇಗೆ? ನಿಮ್ಮ ದಾಂಪತ್ಯ ಜೀವನ ಪ್ರೀತಿಂದ ಕೂಡಿರಲು ಬಯಸಿದ್ದೀರಾ?....ಈ ಪುಸ್ತಕ ಓದಿ. ಹಿರಿಯ ವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಈ ಪುಸ್ತಕದ ಲೇಖಕರು.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|