Items
0
Total
  0.00 
Welcome Guest.

 
Rs. 110   
10%
 
 
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 18 Demy Size
ISBN : 9789389308747
ಕೋಡ್ : 003612

ಯಾವುದೇ ವಿಷಯದ ಪ್ರತಿಪಾದನೆಗೆ ಅಧ್ಯಯನ ಮತ್ತು ನಿರೂಪಣಾ ವಿಧಾನ ಎರಡೂ ಮುಖ್ಯ. ಈ ಕೃತಿಯ ಮೂಲ ಲೇಖಕರಾದ ಡಾ|| ಓಂ ಪ್ರಕಾಶ್ ಪ್ರಸಾದ್ ಅವರ ಅಧ್ಯಯನದ ವಿಸ್ತಾರ ಸಾಕಷ್ಟು ದೊಡ್ಡದಾಗಿದೆ. ಅನೇಕ ವಿದ್ವಾಂಸರ ಕೃತಿಗಳನ್ನು ಅವರು ಅಭ್ಯಾಸ ಮಾಡಿದ್ದಾರೆ. ತಮ್ಮ ವಾದಕ್ಕೆ ಅವರ ವಿಚಾರಗಳನ್ನು ಪೂರಕವಾಗಿ ಬಳಸಿಕೊಳ್ಳುತ್ತಾರೆ. ಔರಂಗಜೇಬನನ್ನು ಕುರಿತು ಕೇವಲ ಕೆಟ್ಟದ್ದನ್ನು ಕಟ್ಟಿಕೊಟ್ಟವರ ಮನೋಸೌಧವನ್ನು ಕೆಡವುತ್ತಾರೆ. ಔರಂಗಜೇಬ ಹಿಂದೂಗಳ ವಿರೋಧಿಯಲ್ಲ ಎಂದು ಸ್ಥಾಪಿಸಲು ಸಾಧಾರ ಸಾಹಸ ಮಾಡುತ್ತಾರೆ. "ಅವನು ತೆಗೆದುಕೊಂಡ ಧಾರ್ಮಿಕ ನಿರ್ಣಯಗಳೆಲ್ಲಾ ಸಿಂಹಾಸನವನ್ನು ಬಲ ಪಡಿಸುವುದಕ್ಕಾಗಿಯೇ ಹೊರತು ಬೇರಾವುದಕ್ಕೂ ಅಲ್ಲ" ಎಂಬ ಕಾರಣ ಕೊಡುತ್ತಾರೆ. ‘ಹೊಸ ದೇವಾಲಯಗಳನ್ನು ನಿರ್ಮಿಸುವುದನ್ನು ನಿಲ್ಲಿಸಿದ್ದೇನೋ ನಿಜ, ಆದರೆ ಹಳೆ ದೇವಾಲಯಗಳನ್ನು ಪುನರುತ್ಥಾನಗೊಳಿಸಲು ಅಪ್ಪಣೆ ನೀಡಿ ದೇಣಿಗೆಯನ್ನು ನೀಡಿದ’ ಎಂದು ಹೇಳುತ್ತ ಆಧಾರಗಳನ್ನು ಒದಗಿಸುತ್ತಾರೆ. ಅಂದರೆ ಔರಂಗಜೇಬ ಮೂಲತಃ "ಹಿಂದೂ ದ್ವೇಷಿ" ಎಂಬುದು ಸುಳ್ಳು ಎಂಬುದು ಈ ವಿವರಗಳ ಸಾರ. ಆದರೆ ಇದೇ ಉಸಿರಿನಲ್ಲಿ ಔರಂಗಜೇಬನು ತನ್ನ ತಂದೆಯ ಕಾಲದಲ್ಲಿ ಮುಚ್ಚಿದ್ದ ದೇವಾಲಯಗಳು ತಾನು ಚಕ್ರವರ್ತಿಯಾದಾಗ ತೆರೆದುಕೊಂಡು ಮತ್ತೆ ಮೂರ್ತಿ ಪ್ರತಿಷ್ಠಾಪನೆ ಮಾಡಿದಾಗ ಕೋಪಗೊಂಡು ಅವುಗಳನ್ನು ಕೆಡವಲು ಆದೇಶಿಸಿದ್ದನ್ನು ಇದೇ ಲೇಖಕರು ವಿವರಿಸುತ್ತಾರೆ. ಇಂಥ "ಕೋಪ ಬರುವುದು ಸಹಜ" ಎಂದು ಲೇಖಕರು ಸಮರ್ಥಿಸುವುದು ಮಾತ್ರ ಅಸಹಜ ಯಾಕೆಂದರೆ ೧೬೬೫ರಲ್ಲಿ ಮರುಸ್ಥಾಪನೆಗೊಂಡ ದೇವಾಲಯಗಳನ್ನೆಲ್ಲಾ ಕೆಡವಲು ಔರಂಗಜೇಬ ಆದೇಶಿಸಿದ್ದನ್ನೂ "ತನ್ನ ಧಾರ್ಮಿಕ ನಾಯಕರನ್ನು ಸಂತೋಷಪಡಿಸಲು ಮತ್ತು ತನ್ನ ಆಡಳಿತ ಭದ್ರತೆಗಾಗಿ ತನ್ನ ಆಡಳಿತದ ಆರಂಭದಲ್ಲೇ ಸೋಮನಾಥ ಮಂದಿರವನ್ನು ಕೆಡವಲು ಆದೇಶಿಸಿದ್ದ" ಎಂಬುದನ್ನೂ ಈ ಕೃತಿಯ ಮೂಲ ಲೇಖಕರೇ ಒಪ್ಪಿದ್ದಾರೆ, ವಿವರಿಸಿದ್ದಾರೆ. ಔರಂಗಜೇಬನ ಇಂಥ ಕೃತ್ಯಗಳೇ ಆತ "ಹಿಂದೂ ದ್ವೇಷಿ" ಎಂದು ಭಾವಿಸಲು ಕಾರಣವಾಗಿದೆ. ಆದರೆ ಈ ಕೃತಿಯು ಮುಂದುವರೆಯುತ್ತ ಔರಂಗಜೇಬನು ಹಿಂದೂ - ಮುಸ್ಲಿಂ ಭೇದ ಭಾವವಿಲ್ಲದೆ ಮಾಡಿದ ಕೆಲಸಗಳನ್ನು ನಿರೂಪಿಸುತ್ತದೆ. ಈ ನಿರೂಪಣೆಗೆ ಪೂರಕವಾಗಿ ಕಾಶಿ ವಿಶ್ವನಾಥ ದೇವಾಲಯ ಕೆಡವಿದ್ದಕ್ಕೆ ಪುರಾವೆಗಳಿಲ್ಲ ಎಂದು ಹೇಳುತ್ತ ಕಾಶಿಯ ನಾಗರಿಕರು ಶಾಂತಿಯುತವಾಗಿ ಜೀವನ ನಡೆಸಲಿ ಎಂದು ಬಯಸಿ, ಹಿಂದೂ ಪೂಜಾರಿಗೆ ಮುಸಲ್ಮಾನರು ಕೊಡುತ್ತಿದ್ದ ಕಿರುಕುಳ ತಪ್ಪಿಸಿದ್ದನ್ನೂ "ಹಿಂದೂ ಧರ್ಮ ಮತ್ತು ಹಿಂದೂಗಳೊಂದಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಮುಸಲ್ಮಾನರು ಸಹಕರಿಸಬೇಕೆಂದು ಆದೇಶ" ನೀಡಿದ್ದನ್ನೂ ಉಲ್ಲೇಖಿಸುತ್ತಾರೆ. ಜೊತೆಗೆ ಹಿಂದೂ ಪೂಜಾರಿಗಳಾದ ಬನಾರಸ್ ಜಿಲ್ಲೆಯ ಬಸ್ತಿ ಎಂಬ ಊರಿನ ನಿವಾಸಿ ಗಿರಿಧರ, ಮಹೇಶಪುರದ ಯದುನಾಥ ಮಿಶ್ರ, ಪಂಡಿತ ಬಲಭದ್ರ ಮಿಶ್ರರಿಗೆ ಔರಂಗಜೇಬ ಜಾಗೀರು ನೀಡಿದ್ದನ್ನು ಆಧಾರ ಸಹಿತ ಉಲ್ಲೇಖಿಸುತ್ತಾರೆ.

Best Sellers
ಅರಮನೆ ಗುಡ್ಡದ ಕರಾಳ ರಾತ್ರಿಗಳು (ಮಲೆನಾಡಿನ ರೋಚಕ ಕತೆಗಳು ಭಾಗ-೨)
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160
ಗುರುವಾಯನಕೆರೆ : ಒಂದು ಊರಿನ ಆತ್ಮಚರಿತ್ರೆ
ಜೋಗಿ, Jogi
Rs. 108/-   Rs. 120
ಐ ಬಿ ಎಚ್ ಇಂಗ್ಲಿಷ್ ಕನ್ನಡ ನಿಘಂಟು (Hard Cover)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 250/-
ರಸವಾದಿ (The Alchemist)
ಪಾಲೊ ಕೊಯಿಲೊ, Paulo Coelho
Rs. 225/-   Rs. 250

Latest Books
ಬ್ರಾಹ್ಮಣ ಕುರುಬ : ಪ್ರಬಂಧಗಳು
ನರಸಿಂಹಮೂರ್ತಿ ಪ್ಯಾಟಿ, Narashimamurthy Pyati
Rs. 108/-   Rs. 120
ಜಗತ್ತಿನ ಅತಿಶ್ರೇಷ್ಠ ಸೇಲ್ಸ್ ಮನ್
ಓಗ್ ಮ್ಯಾಂಡಿನೋ, Og Mandino
Rs. 122/-   Rs. 135
ಫ್ರೆಡರಿಕ್ ನೀಷೆ (ಬುದ್ಡಿಜೀವಿಯೊಬಬ್ಬನ ಭಾವಪೂರ್ಣ ಕಥಾನಕ)
ವಾಸುದೇವಮೂರ್ತಿ ಟಿ ಎನ್, Vasudevmurthy T N
Rs. 216/-   Rs. 240
ಬದುಕಿನ ಅರ್ಥವನ್ನು ಹುಡುಕುತ್ತಾ...
ವಿಕ್ಟರ್ ಫ್ರಾಂಕ್ಲ್, Viktor E Frankl
Rs. 144/-   Rs. 160


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.