|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
5 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
288 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
175172 |
ಶಂಕರ ಮೊಕಾಶಿ ಪುಣೇಕರ ಅವರ ಅವಧೇಶ್ವರಿ ಕನ್ನಡ ಸಾಹಿತ್ಯದಲ್ಲಿ ಅಪರೂಪದ ಕೃತಿ. ಇದನ್ನು ಕಾದಂಬರಿ ಎಂದು ಮಾತ್ರ ನೋಡಬೇಕೆಂದು ಅವರು ಹೇಳುತ್ತಾರಾದರೂ, ಅವರು ಕೊಡುವ ವಿವರಗಳು, ಚಿತ್ರಗಳು ಒಂದು ನೆಲೆಯಲ್ಲಿ ಚರಿತ್ರೆಯಂತೆ ಭಾಸವಾಗುತ್ತದೆ. ನಾವೇ ಅಲ್ಲಿನ ಪಾತ್ರಗಳಂತಾಗಿಬಿಡುತ್ತೇವೆ. ಇದು ನಮ್ಮನ್ನು ನಾವು ಮೀರುವ ಒಂದು ನೆಲೆ. ನಿಜ ಬದುಕಿನಲ್ಲಿ ಹಾಗೆ ಬದುಕುತ್ತೇವಾ? ಸಾಧ್ಯವಾ? ಹೀಗೆ ಮತ್ತು ಹೀಗೂ ಬದುಕಬಹುದು ಎನ್ನುವ ಪರಿಕಲ್ಪನೆಯನ್ನು, ಕನಸನ್ನು ನಮ್ಮ ಮುಂದಿಡುತ್ತದೆ ಕಾದಂಬರಿ. ಮನುಷ್ಯನ ಮನಸ್ಸಿನಂತೆ ಸಮಾಜವೂ ನಿಂತ ನೀರಲ್ಲ. ಇವತ್ತಿನ ನೂರು ಸಂಗತಿಗಳು ಬದಲಾಗಬಹುದು. ಬದಲಾಗದೆಯೂ ಇರಬಹುದು. ಹೀಗಾಗಿ ‘ಇದಮಿತ್ಥ’ ಎನ್ನುವುದು ಯಾವುದೂ ಇಲ್ಲ. ಕೆಲ ಬುಡಕಟ್ಟುಗಳಲ್ಲಿ ಹೆಣ್ಣುಮಕ್ಕಳಿಗೆ ಮಗುವಾಗದ ಹೊರತು ಮದುವೆ ಇಲ್ಲ. ಮದುವೆಗೆ ಮುಂಚೆ ಅವಳು ಯಾರನ್ನಾದರೂ, ಎಷ್ಟು ಜನರನ್ನಾದರೂ ಕೂಡಬಹುದು. ಮದುವೆಯಾದವನು ಕೂಡ ಈ ಮಗು ತನಗೇ ಹುಟ್ಟಿದ್ದಲ್ಲ ಎಂದು ನಿರಾಕರಿಸುವುದಿಲ್ಲ. ಅದು ತನ್ನದೇ ಎಂಬಂತೆ ಸ್ವೀಕರಿಸುತ್ತಾನೆ. ಇಂಥ ಆಚರಣೆಗಳು, ಮನಸ್ಥಿತಿಗಳು ಆರೋಗ್ಯವಂಥ ಸಮಾಜದ ಲಕ್ಷಣಗಳೇ? ಹೌದು ಮತ್ತು ಅಲ್ಲ. ಇದು ಆ ಸಮಾಜದಮಟ್ಟಿಗೆ ಸರಿ. ಅದನ್ನೇ ಎಲ್ಲ ಕಾಲಕ್ಕೂ ಸಮಾಜಕ್ಕೂ ಅನ್ವಯಿಸಿ ನೋಡಲಾಗದು. ಹೀಗೆ ಮನುಷ್ಯನ ಮನಸ್ಸನ್ನು, ವರ್ತನೆಗಳನ್ನು ಗ್ರಹಿಸಲು ಈ ಕಾದಂಬರಿ ಬಹುಮುಖ್ಯ ಆಕರ.
|
| |
|
|
|
|
|
|
|
|
|