|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೬೪ರಲ್ಲಿ ತಮ್ಮ ಕ್ರಾಂತಿ ಕಲ್ಯಾಣ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡ ಶ್ರೀ ಬಿ. ಪುಟ್ಟಸ್ವಾಮಯ್ಯನವರು ಪತ್ರಿಕೋದುಮ, ನಾಟಕ, ಕಾದಂಬರಿಗಳ ಕ್ಷೇತ್ರದಲ್ಲಿ ಅವಿಸ್ಮರಣೀಯವಾದ ಸೇವೆಯನ್ನು ಸಲ್ಲಿಸಿರುವಂತವರು. ‘ಪುಟ್ಟಸ್ವಾಮಯ್ಯ ಯುಗ‘ ಎಂದೇ ಖ್ಯಾತರಾಗುವಷ್ಟರಮಟ್ಟಿಗೆ ಒಂದು ಕಾಲಘಟ್ಟದಲ್ಲಿ ಅವರ ನಾಟಕಗಳು ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದವು. ರಂಗಭೂಮಿಯ ಚಟುವಟಿಕೆಗಳಿಗೆ ಶುದ್ಧ ಸಾಹಿತ್ಯದ ಸ್ಪರ್ಶವನ್ನೂ ತಂದು ಕೊಟ್ಟು ಹೊಸ ಆಯಾಮವನ್ನು ಮೂಡಿಸಿದ ಶ್ರೇಯಸ್ಸು ಅವರದು. ಬಸವಣ್ಣನವರ ಬದುಕು-ಬವಣೆ-ಸಾಧನೆಗಳನ್ನು ಕುರಿತಂತೆ ಅವರು ರಚಿಸಿದ ಕಾದಂಬರಿ ಮಾಲೆ ಅವರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟಿದೆ. ಒಟ್ಟಿನಲ್ಲಿ ಮರೆಯಲಾಗದ ಮಹಾನುಭಾವರಲ್ಲಿ ಅವರು ಒಬ್ಬರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಪ್ರಾಧ್ಯಪಕರಾಗಿರುವ ಡಾ|| ಕೃಷ್ಣಮೂರ್ತಿ ಹನೂರು ಈ ಪುಸ್ತಕದ ಲೇಖಕರು.
|
| |
|
|
|
|
|
|
|
|
|