Items
0
Total
  0.00 
Welcome Guest.

 
Rs. 400    
5%
Rs. 380/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 372
ಪುಸ್ತಕದ ಗಾತ್ರ : 1/8 Demy Size
ISBN : 9789387257528
ಕೋಡ್ : 1120628

ಬಿ. ಆರ್. ವಾಡಪ್ಪಿ ಲಲಿತ ಪ್ರಬಂಧಗಳ ಸಂಗ್ರಹ ಲಲಿತ ಪ್ರಬಂಧಗಳ ಆಶಯ, ಆಕೃತಿಗಳನ್ನು ಕುರಿತು ಸಂಗ್ರಹರೂಪದಲ್ಲಿ ಕೆಲವು ಮಾತುಗಳನ್ನು ಹೇಳಬಹುದು.ಲಲಿತ ಪ್ರಬಂಧವೆನ್ನುವುದು ಅತ್ಯಂತ ಆತ್ಮೀಯವಾದ ಸಾಹಿತ್ಯ ಪ್ರಕಾರ; ಅಷ್ಟೇನೂ ದೀರ್ಘವಲ್ಲದ, ಅನೌಪಚಾರಿಕವಾದ, ವೈಯಕ್ತಿಕ ವಿಚಾರವಿಲಾಸವನ್ನು ಪ್ರತಿಫಲಿಸುವ ಸಾಹಿತ್ಯ ಪ್ರಕಾರ.ಅದಕ್ಕೆ ಅಷ್ಟೇನೂ ಅವಸರವಿಲ್ಲದ, ಲೋಕಾಭಿರಾಮ ಎನ್ನಬಹುದಾದ ಧಾಟಿಯಿದೆ. ಒಂದು ವ್ಯಕ್ತಿತ್ವದ ಧ್ವನಿಯೇ ಶೈಲಿಯೆನ್ನುವುದಾದರೆ ಒಳ್ಳೆಯದೊಂದು ಪ್ರಬಂಧದಲ್ಲಿ ಬರೆದವನ ವ್ಯಕ್ತಿವಿಶೇಷಗಳೆಲ್ಲವೂ ಮೇಳೈಸಿರುತ್ತವೆ. ಸುಮತೀಂದ್ರ ನಾಡಿಗರು ಒಂದೆಡೆ ಬರೆದಿರುವಂತೆ, ಲಲಿತ ಪ್ರಬಂಧ ಡಿ.ವಿ.ಜಿ., ಅಡಿಗರಂತಹ ಗಂಭೀರ ವ್ಯಕ್ತಿತ್ವವುಳ್ಳ ಚಿಂತಕರಿಗೆ ಹೊಂದುವ ಪ್ರಕಾರವಲ್ಲ. ಅದು ಮನಸ್ಸನ್ನು ಹಗುರವಾಗಿಟ್ಟುಕೊಳ್ಳುವ ಒಂದು ಪ್ರಕಾರ. ವಿಜ್ಞಾನ, ಸಮಾಜಶಾಸ್ತ್ರ, ಮನಃಶಾಸ್ತ್ರ, ತತ್ತ್ವಶಾಸ್ತ್ರ, ಭಾಷಾಶಾಸ್ತ್ರ, ಖಗೋಳವಿಜ್ಞಾನ, ಭೌತಶಾಸ್ತ್ರ, ಅಣುವಿಜ್ಞಾನ, ವೈದ್ಯಕೀಯ ಶಾಸ್ತ್ರ ಮುಂತಾದವನ್ನು ಲಲಿತ ಪ್ರಬಂಧ ಸವರಿಕೊಂಡು ಹೋಗಬಹುದಷ್ಟೆ. ಆದರೆ ಬಹಳ ಕಾಲ ಅವುಗಳ ಜೊತೆಯಲ್ಲಿರಲಾರದು.ಅದು ಹತ್ತಿಪ್ಪತ್ತು ಪುಟಗಳಷ್ಟು ದೂರ ನಡೆಯಬಲ್ಲದು. ಗಾಳಿಗುದರಿ, ಸುಳಿಗಾಳಿ, ತಾರಕಂಬಗಳು, ಗುಬ್ಬೀಗೂಡು, ಇವು ವಾಡಪ್ಪಿಯವರ ನಾಲ್ಕು ಪ್ರಬಂಧ ಸಂಕಲನಗಳು.ಇವುಗಳಲ್ಲಿರುವ ಒಟ್ಟು ಪ್ರಬಂಧಗಳ ಸಂಖ್ಯೆ 56.ಇಷ್ಟು ದೊಡ್ಡ ಸಂಖ್ಯೆಯ ಪ್ರಬಂಧಗಳನ್ನು ಬರೆದವರಿಗೆ ಈ ಸಾಹಿತ್ಯ ಪ್ರಕಾರವನ್ನು ಕುರಿತು ತಮ್ಮದೇ ನಿಲುವೂ ನಿರ್ದಿಷ್ಟ ವಿಚಾರಗಳೂ ಇಲ್ಲವೆನ್ನಲಾಗದು.ಉದಾಹರಣೆಗೆ ಗುಬ್ಬೀಗೂಡು ಸಂಕಲನದಲ್ಲಿರುವ ಕನ್ನಡದಲ್ಲಿ ಪ್ರಬಂಧ ಸಾಹಿತ್ಯ ಎಂಬ ಲೇಖನದಲ್ಲಿ ಅವರು ಬರೆದಿರುವುದನ್ನು ನೋಡಿ: ಪ್ರಬಂಧಕಾರ ತನ್ನ ಅನೇಕ ಅನುಭವಗಳನ್ನು ಚಿತ್ರಿಸುತ್ತ ಲೀಲಾಜಾಲವಾಗಿ ವಿಷಯ ನಿರೂಪಣೆ ಮಾಡುತ್ತ ಹೋದಂತೆ ಅದೊಂದು ಸುಂದರ ಶಬ್ದಚಿತ್ರವಾಗಬಲ್ಲದು. ಅದರ ನಿಲುವು ಯಾವ ಭಂಗಿಯಲ್ಲಿದ್ದರೂ ಆದೀತು.... ಪ್ರಾರಂಭ, ಮುಕ್ತಾಯ ಹೀಗೇ ಆಗಬೇಕೆಂಬುದು ಅದರ ಧಾಟಿಯಲ್ಲ. ಅಲ್ಲಲ್ಲಿ ವೈಯಕ್ತಿಕ ಭಾವನೆಗಳ ಚೆಲುವು ಹೊರಹೊಮ್ಮುತ್ತಿರುತ್ತದೆ.... ಬಹುಶ್ರುತತ್ವ, ಜಾಣ್ಮೆ, ಲೋಕಾನುಭವ, ಚಾರಿತ್ರ್ಯದ ಹಿನ್ನೆಲೆ ಮಿಂಚುಮಿಂಚಾಗಿ ಅಲ್ಲಲ್ಲಿ ಕಂಡಾಗ ಪ್ರಬಂಧಕ್ಕೆ ಮೆರುಗುಕೊಡಬಲ್ಲವು. ವಾಡಪ್ಪಿಯವರಲ್ಲಿ ಪ್ರಬಂಧಕ್ಕೆ ಅಗತ್ಯವಾದ, ಮನೋಲಹರಿಯನ್ನು ಹಲವು ದಿಕ್ಕುಗಳತ್ತ ಹರಿಸಬಲ್ಲ ಪ್ರತಿಭೆಯಿದೆÉ. ಪ್ರಬಂಧದ ಧಾಟಿ ಎಷ್ಟು ಅತಿಶಯವಾದರೆ ಉದ್ದೇಶಿತ ಆಶಯ ಎಷ್ಟೆಲ್ಲ ಆಯಾಮಗಳನ್ನು ಪಡೆದುಕೊಳ್ಳಬಹುದೆಂಬ ಪರಿಜ್ಞಾನವಿದೆ.ಅವರು ಉಪಯೋಗಿಸುವ ಭಾಷೆ ಕೆಲವು ಕಡೆ ಸ್ವಾನುಭವದ, ಮನೋವ್ಯಾಪಾರದ ಸೂಕ್ಷ್ಮಗಳಿಗೆ ಆಕಾರಕೊಡುವಷ್ಟು ಶಕ್ತವಾಗಿದೆ.ವಿಷಯವೊಂದು ಹೊಳೆದದ್ದೇ ಅವರ ಮನಸ್ಸು ಅದನ್ನು ಹಿಂಬಾಲಿಸುತ್ತದೆ.ಓದುಗನು ಎಷ್ಟು ದೂರ ಹಿಂಬಾಲಿಸುವುದೆಂದಾದಲೀ ಅದಕ್ಕೊಂದು ನಿಶ್ಚಿತ ಗುರಿಯಿದೆಯೆಂದಾಗಲೀ ಮೊದಲೇ ಊಹಿಸುವಂತಿಲ್ಲ. ಒಂದು ವಿಷಯದ ಆಸುಪಾಸನ್ನು ಸಮೀಕ್ಷಿಸುತ್ತಿರುವಾಗಲೇ ಅವರು ಅದರ ಅಂತರಾರ್ಥವನ್ನು ಹೇಗೋ ಹಾಗೆ ಅದರ ಒಟ್ಟು ಧ್ವನಿಯನ್ನೂ ಪಡಿಮೂಡಿಸಬಲ್ಲರು.ಅವರ ಪ್ರಬಂಧಗಳಿಗೆ ಅವರದೇ ಬುದ್ಧಿಭಾವಗಳ ಛಾಪಿದೆ. ಅದು ಅವರ ವಿಶಿಷ್ಟ ವ್ಯಕ್ತಿತ್ವವನ್ನು ಸ್ಫುಟಗೊಳಿಸುವುದರ ಜೊತೆಗೆ ಅವರ ವೈಚಾರಿಕ ನೆಲೆಯನ್ನೂ ಪ್ರಕಟಗೊಳಿಸುತ್ತದೆ. ವಿಚಾರದ ಮಸೆದಾಟವು ಇವರ ಒಲವು ಎಂದು ತೋರುವುದು ಎಂದಿದ್ದಾರೆ ದ.ರಾ.ಬೇಂದ್ರೆ (ತಾರಕಂಬಗಳು ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ). ವಾಡಪ್ಪಿಯವರು ಕೆಲವೊಮ್ಮೆ ಪ್ರಬಂಧದ ನಡುನಡುವೆ ಉಪಯೋಗಿಸುವ ಕನ್ನಡ ಕಾವ್ಯದ ಸಾಲುಗಳು ಆ ಪ್ರಬಂಧದ ಸಂದರ್ಭದಲ್ಲಿ ಹೊಸದೊಂದು ವೈಚಾರಿಕ ಆಯಾಮವನ್ನೇ ಪಡೆದುಕೊಂಡುಬಿಡುತ್ತವೆ. ಈ ಸಂಕಲನದಲ್ಲಿರುವ ಕೆಲವು ವಿಷಯಗಳನ್ನೇ ನೋಡಿ: ಚಾವಡಿ, ಚಟ, ಮುಪ್ಪು, ಗಡಿಯಾರ, ಬೇಸರ, ನಲ್ಲಿ, ನವಿಲು, ನಮ್ಮ ಬಸ್ಸುಗಳು, ಅವತಾರ, ನಾಮಕರಣ, ಈರುಳ್ಳಿ, ಮರೆವು, ಕನ್ನಡಕ, ಹೊಗಳಿಕೆ, ಚಿಂತೆ, ನಿವೃತ್ತಿ, ರಾಜಬೀದಿಗಳು, ಗುಬ್ಬಿಗೂಡು.... ಇವು ಯಾವುವೂ ಘನಗಂಭೀರ ವಿಷಯಗಳಲ್ಲ. ಆದರೆ ವಾಡಪ್ಪಿಯವರು ಇವುಗಳನ್ನು ಕುರಿತ ತಮ್ಮ ಕಲ್ಪನೆಗಳನ್ನು ಹಾರಿಸಿದಾಗ ಒಂದೊಂದು ವಿಷಯವೂ ವಿವಿಧ ದಿಕ್ಕುಗಳಲ್ಲಿ ಸಾಗುತ್ತ, ಇಷ್ಟು ಸರಳವೆಂದುಕೊಂಡದ್ದು ಇಷ್ಟು ವ್ಯಾಪಕಾರ್ಥವುಳ್ಳ ಸಂಕೀರ್ಣವಾಗಿದೆಯೆ?ಎಂದು ಓದುಗರು ಬೆರಗುಗೊಳ್ಳುವಂತೆ ಮಾಡುತ್ತವೆ. ಈ ಮಾತನ್ನು ಪುರಸ್ಕರಿಸುವಂತಿವೆ ಬೀದಿಯ ನಳ, ಸುಳಿಗಾಳಿ, ಚಂದ್ರನಿಗೂ ಚಿಂತೆ, ತಾರಕಂಬಗಳು, ಮುಪ್ಪು ಮುಂತಾದ ಪ್ರಬಂಧಗಳು. ಮುಪ್ಪು ಎಂಬ ಪ್ರಬಂಧ ಚಳಿಗಾಲದ ಮುಂಜಾವಿನಲ್ಲಿ ಹಾಸಿಗೆಯಿಂದ ಏಳುವುದೂ ಮುಪ್ಪಿನ ಮುದುಕರ ಮೋರೆ ನೋಡುವುದೂ ಬೇಡಾ ಅಂತ ನನ್ನ ಕೆಟ್ಟ ಮನಸ್ಸಿಗೆ ಅನಿಸುತ್ತದೆ! ಎಂದು ಪ್ರಾರಂಭವಾಗುತ್ತ, ಮುಪ್ಪು ಎರಡನೆಯ ಬಾಲ್ಯ ಎಂಬ ರೂಢಿಯ ಮಾತನ್ನು ನಿರಾಕರಿಸುತ್ತ, ಮುದುಕರಲ್ಲಿ ತನಗೆ ಏನೇನು ಹಿಡಿಸುವುದಿಲ್ಲವೆಂದು ವಿವರಿಸುತ್ತಇಳಿವಯಸ್ಸಿನ ಬಗೆಗೆ ಹೊಸದೊಂದೇ ಕಾಣ್ಕೆಯನ್ನು ನೀಡುತ್ತದೆ. ನವೋದಯ ಕಾಲದಲ್ಲಿ ಲಲಿತ ಪ್ರಬಂಧ ಪ್ರಕಾರಕ್ಕೆ ಸಮೃದ್ಧಿಯನ್ನು ತಂದುಕೊಟ್ಟವರಲ್ಲಿ ಮುಖ್ಯವಾಗಿ ಇಬ್ಬರನ್ನು ಹೆಸರಿಸಬೇಕು.ಒಬ್ಬರು ಎ.ಎನ್. ಮೂರ್ತಿರಾವ್, ಇನ್ನೊಬ್ಬರು ರಾಕು.ಇವರಿಬ್ಬರ ಅನನ್ಯ ಸಾಧನೆಯ ಹಿನ್ನೆಲೆಯಲ್ಲಿ ಅದೆಷ್ಟು ಮಂದಿ ಲಲಿತ ಪ್ರಬಂಧಕಾರರಿದ್ದಾರೆ! ಅವರಲ್ಲಿ ಎದ್ದು ಕಾಣುವ ಕೆಲವೇ ಹೆಸರುಗಳಲ್ಲಿ ಬಿ.ಆರ್.ವಾಡಪ್ಪಿಯವರದೂ ಒಂದು.ಬಹುಕಾಲದಿಂದ ಮುದ್ರಣದಲ್ಲಿಲ್ಲದ ಅವರ ಪ್ರಬಂಧ ಸಂಕಲನಗಳು ಇದೀಗ ಸಮಗ್ರವಾಗಿ ಈ ರೂಪದಲ್ಲಿ ಹೊರಬರುತ್ತಿರುವುದು ನಿಜಕ್ಕೂ ಒಂದು ಸಂತೋಷದ ಸಂಗತಿ.ಕಳೆದ ಕೆಲವು ದಶಕಗಳಲ್ಲಿ ಬಹುಮಟ್ಟಿಗೆ ಸೊರಗಿಹೋಗಿದ್ದ ಲಲಿತ ಪ್ರಬಂಧ ಪ್ರಕಾರ ಈಗ ಪ್ರತಿಭಾವಂತರು ಕೆಲವರಿಂದ ಮತ್ತೆ ಚಿಗುರುತ್ತಿರುವ ಸಂದರ್ಭವಿದು.ಇಂಥ ಸಂದರ್ಭದಲ್ಲಿ ಹೊಸ ಪೀಳಿಗೆಯ ಓದುಗರಿಗೆಹೇಗೋ ಹಾಗೆ ಒಳ್ಳೆಯ ಸಾಹಿತ್ಯವನ್ನು ಓದಬಯಸುವ ಇತರರಿಗೆ ಕೂಡ ವಾಡಪ್ಪಿಯವರ ಪ್ರಬಂಧಗಳ ಓದಿನಿಂದ/ಮರು ಓದಿನಿಂದ ಪ್ರಯೋಜನವುಂಟು.ಹಾಗಾಗಿ ಅವರ ಈ ಸಮಗ್ರ ಪ್ರಬಂಧಗಳ ಪ್ರಕಟನೆ ತೀರ ಅಗತ್ಯವಾಗಿತ್ತೆಂದು ಹೇಳಬೇಕು. ಇದಕ್ಕಾಗಿ ವಾಡಪ್ಪಿಯವರ ಪುತ್ರ ಶ್ರೀನಿವಾಸ ವಾಡಪ್ಪಿಯವರನ್ನೂ ಪ್ರಕಟಿಸುತ್ತಿರುವ ಮನೋಹರ ಗ್ರಂಥಮಾಲೆಯನ್ನೂ ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. - ಎಸ್. ದಿವಾಕರ್ ಮುನ್ನುಡಿಯಿಂದ

Best Sellers
ಹತ್ತು ತಮಿಳು ಕತೆಗಳು
ವಿವಿಧ ಲೇಖಕರು, Various Authors
Rs. 72/-   Rs. 80
ಆನಂದ ಅಲೆ ಆಸೆ ಪಡು ಸಾಧಿಸು : ಸದ್ಗುರು
ಸದ್ಗುರು, Sadhguru
Rs. 171/-   Rs. 190
ಡಾ. ರಾಜ್ ಕುಮಾರ್ (ಜೀವನ ಚರಿತ್ರೆ)(ವಿಶ್ವಮಾನ್ಯರು)
ನರಸಿಂಹಮೂರ್ತಿ ಕೆ ಎಚ್, Narasimhamurthy K H
Rs. 23/-   Rs. 25
ಕಂಪ್ಯೂಟರ್ ಪ್ರಪಂಚ
ಶ್ರೀನಿಧಿ ಟಿ ಜಿ, Srinidhi T G
Rs. 122/-   Rs. 135

Latest Books
ನಗೆ, ಬಗೆ ಬಗೆ : ವಿನೋದ ಕವಿತೆಗಳು
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 59/-   Rs. 65
ನಮ್ಮ ಮಕ್ಕಳೇ ಚರಿತ್ರೆ ಬರೆದರೆ
ಸತ್ಯನಾರಾಯಣ ಕೆ, Satyanarayana K
Rs. 68/-   Rs. 75
ನುಡಿ ರಂಗೋಲಿ : ಲೇಖನಗಳು
ವಿಜಯಾ, Vijaya
Rs. 126/-   Rs. 140
ಗಾಳಿಗೆ ಮೆತ್ತಿದ ಬಣ್ಣ
ಕರ್ಕಿ ಕೃಷ್ಣಮೂರ್ತಿ, Karki Krishnamurthy
Rs. 108/-   Rs. 120


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.