|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಾಸ್ತಿಕರಾಗಿದ್ದ ಬಾಬಾ ಆಮಟೆ ಮಹಾನ್ ಮಾನವತಾವಾದಿ, ಪದ್ಮವಿಭೂಷಣ, ರಾಮನ್ ಮ್ಯಾಗ್ಸೆಸೆ, ಗಾಂಧಿ ಶಾಂತಿ ಪ್ರಸಸ್ತಿ, ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಮುಂತಾದ ಅಸಂಖ್ಯ ಪ್ರಶಸ್ತಿಗಳು ಹಾಗೂ ಗೌರವ ಡಾಕ್ಟೋರೇಟ್ ಪ್ರಶಸ್ತಿಗಳನ್ನು ಗಳಿಸಿದ್ದ ಆಮಟೆಯವರ ಬದುಕನ್ನು ಗಾಂಧೀಜಿ, ರವೀಂದ್ರನಾಥ ಠಾಕೂರ್ ಹಾಗೂ ಸಾಣೇ ಗುರೂಜಿಯವರ ತತ್ವಗಳು ರೂಪಿಸಿದವು. ರಾಜಕೀಯದಿಂದ ದೂರವಿದ್ದ ಆಮಟೆಯವರು ನ್ಯಾಯವಾದಿಯಾಗಿ ಸ್ವಾತಂತ್ರ್ಯ ಹೋರಾಟಾಗಾರರ ಪರವಾಗಿ ವಾದಿಸಿದರು. ಕುಷ್ಠ ರೋಗಿಗಳಿಗೆ ಪುನರ್ವಸತಿಯನ್ನು ಕಲ್ಪಿಸಿಕೊಟ್ಟರು. ನರ್ಮದಾ ಆಂದೋಲನದಂತಹ ಪರಿಸರ ರಕ್ಷಣಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಯೌವನದ ದಿನಗಳಲ್ಲಿ ಚಲನಚಿತ್ರಗಳನ್ನು ತುಂಬಾ ಇಷ್ಟಪಡುತ್ತಿದ್ದ ಆಮಟೆ ಪತ್ರಿಕೆಯೊಂದಕ್ಕೆ ಚಿತ್ರ ವಿಮರ್ಶೆ ಬರೆಯುತ್ತಿದ್ದರು. ಗ್ರೆಟಾ ಗಾರ್ಬೋ, ನಾರ್ಮನ್ ಶೀರರ್ ಮುಂತಾದ ಹಾಲಿವುಡ್ ನಟಿಯರೊಡನೆ ಸಂಪರ್ಕವನ್ನಿಟ್ಟುಕೊಂಡಿದ್ದರು. ಆಮಟೆ ಕುಷ್ಠ ರೋಗಿಗಳ ಪುನರ್ವಸತಿಯ ಕೆಲಸವನ್ನಾರಂಭಿಸಿದಾಗ ನಾರ್ಮನ್ ಶೀರರ್ ಮೊದಲ ದೇಣಿಗೆಯನ್ನು ನೀಡಿದರು!
|
ಶ್ರೀ ಎನ್ ಎಲ್ ಆನಂದ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ, ಅನಂತಪುರದ ಕೃಷ್ಣದೇವರಾಯ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಪಡೆದಿದ್ದಾರೆ. ಹಲವು ಪರಿಸರದ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಾಜದ ಹುಲ್ಲು ಬೇರುಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಶ್ರೀ ಗುಂಡಪ್ಪ ದೇವಿಕೇರಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ ಹಾಗೂ ತಮಿಳುನಾಡಿನ ಭಾರತಿ ದಾಸನ್ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಗಳಿಸಿದ್ದಾರೆ. ಇವರು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
|
|
| |
|
|
|
|
|
|
|
|
|