|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2007 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
112 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
144184 |
‘ಕಥನ ಕವನ’ದ ಪಾರಂಪಾರಿಕ ವ್ಯಾಖ್ಯೆ ಶ್ರೀ ಎಕ್ಕುಂಡಿಯವರಲ್ಲಿ ಬದಲಾಗಿದೆ; ‘ಕಥೆಯುಳ್ಳ ಕವನ’ವೆಂಬುದಕ್ಕೆ ಸೀಮಿತಗೊಳ್ಳದೆ ‘ಕಥನವುಳ್ಳ ಕವನ’ ಎಂಬ ಅರ್ಥಕ್ಕೆ ಹೊರಳಿದೆ. ಶ್ರೀ ಎಕ್ಕುಂಡಿಯವರು ಕಥಿಸುವ ಜಗತ್ತು ‘ನಂಬುವಿಕೆ’ಯ ಬುನಾದಿಯನ್ನು ಪಡೆದಿದೆ ‘ನಂಬಿಸುವಿಕೆ’ಯನ್ನಲ್ಲ. ಈ ವ್ಯತ್ಯಾಸವನ್ನು ಗಮನಿಸಬೇಕು. ನಂಬಿಸುವಿಕೆಯನ್ನು ಹುನ್ನಾರವನ್ನಾಗಿ ಬಳಸುವ ಕವಿಗಳ ಬಗೆ ಬೇರೆ. ಅವರ ಸಮಸ್ಯೆಗಳೂ ಬೇರೆ. ಆದರೆ ಇವರಲ್ಲಿ ಅದು ಮುಖ್ಯವಾಗದು. ಏಕೆಂದರೆ ಕಥಕನ ಜಗತ್ತಿ ‘ಇದೆ’ ಎಂಬ ಬಗ್ಗೆ ಕಥಕನಿಗೆ ದೃಢ ನೆಮ್ಮುಗೆಯುಂಟು, ಹಾಗಾಗಿ ಜಗತ್ತು ‘ಆಗುವ’ ಬಗೆ, ಅದರ ತಳಮಳ, ಇಕ್ಕಟ್ಟು, ಸಂಘರ್ಷ, ದ್ವಂದ್ವ ಶೋಧನೆ ಮೊದಲಾದವು ಈ ಕವಿತೆಗಳಲ್ಲಿ ಲವಲೇಶವೂ ಇಲ್ಲ. ಆದ್ದರಿಂದ ಈ ಕವಿತೆಗಳ ಕಥನ ಭಿನ್ನವಾಗುತ್ತದೆ; ತನ್ನ ಬಗೆಯ ಭಿನ್ನತೆಯನ್ನು ಕಂಡುಕೊಳ್ಳಲು ಓದುಗನನ್ನು ಒತ್ತಾಯಿಸುತ್ತದೆ. ಕನ್ನಡ ಕವಿತೆಯ ನಿರಂತರತೆಯನ್ನು, ಅದರ ಬಂಧ ವಿನ್ಯಾಸವನ್ನು ಈ ಕವಿತೆಗಳು ಮುಂದುವರಿಸುತ್ತಿವೆ.
|
| |
|
|
|
|
|
|
|
|
|