|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತ ಸಂವಿಧಾನದ ಪ್ರಕಾರ 6-14 ಪ್ರಾಯದ ಎಲ್ಲ ಮಕ್ಕಳೂ ಶಾಲೆಯಲ್ಲಿರಬೇಕು. ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕು. ಹೆತ್ತವರು ಮತ್ತು ಸರಕಾರಗಳು ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಹೊರಬೇಕು. ಇಲ್ಲವಾದರೆ ಅದು ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ವಸ್ತುಸ್ಥಿತಿ ತದ್ವಿರುದ್ಧವಾಗಿದೆ. ಏನಾದರೊಂದು ಕಾರಣಕ್ಕೆ ಕಲಿಕೆಯಿಂದ ವಂಚಿತರಾಗುವ, ಬಡತನ ಅಥವಾ ಮನೆಯಲ್ಲಿ ಕಲಿಕೆಗೆ ಸಹಾಯಕವಾಗುವ ವಾತಾವರಣವಿಲ್ಲದ ಕಾರಣ ಅರ್ಧಕ್ಕೆ ಓದು ನಿಲ್ಲಿಸಿ ಬಾಲಕಾರ್ಮಿಕರಾಗುವ ಮಕ್ಕಳ ಸಂಖ್ಯೆಯೂ ಅಧಿಕವಾಗಿದೆ. ಕಲಿಯುವ ವಾತಾವರಣವಿದ್ದಾಗಲೂ ಆಧುನಿಕ ಕಾಲದ ಪ್ರಭಾವದಿಂದ ಬೇರೆ ಬೇರೆ ವಿಷಯಗಳನ್ನು ಕಲಿಯುವ ಒತ್ತಡದಿಂದ ತತ್ತರಿಸುವ ಮಕ್ಕಳಿಗೆ, ಅವರ ಒತ್ತಡವನ್ನು ಕಡಿಮೆ ಮಾಡಲು, ಉಪಾಯಗಳನ್ನು ಈ ಕೃತಿಯಲ್ಲಿ ಸೂಚಿಸಲಾಗಿದೆ. ಮಕ್ಕಳು ಬಾನಾಡಿಗಳಂತೆ. ಅವರ ರೆಕ್ಕೆ ಪುಕ್ಕ ಕತ್ತರಿಸಿ ಅವರನ್ನು ಪಂಜರದಲ್ಲಿ ಕೂಡಿ ಹಾಕದೆ, ಅವರ ಬದುಕಿನ ಪಾಠಗಳನ್ನು ಅವರೇ ಕಲಿಯಲು ಸಹಾಯಕರಾಗಬೇಕು. ಇದು ಈ ಕೃತಿಯ ಸಂದೇಶ. ಲೇಖಕರು ತಮ್ಮ ಬಾಲ್ಯದ ಕಲಿಕೆಯ ಅನುಭವಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ.
|
ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|