|
|

| Rs. 75 | 10% |
Rs. 68/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹೊಸತು ಪತ್ರಿಕೆಯ ಪ್ರಾರಂಭದಿಂದ ಐದು ವರ್ಷಗಳ ಅರವತ್ತು ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಸಂಪಾದಕೀಯ ಸೇರಿದಂತೆ ವಿಷಯವಾರಾಗಿ ವಿಂಗಡಿಸಿ ಹದಿನೆಂಟು ಸಂಪುಟಗಳಲ್ಲಿ ‘ಹೊಸತು ವಾಚಿಕೆ’ ರೂಪದಲ್ಲಿ ಓದುಗರಿಗೆ ನವಕರ್ನಾಟಕ ನೀಡುತ್ತಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತೆರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ. ವಿಚಾರ ಸಂಪತ್ತು, ತಿಳಿವು, ಪ್ರಚಲಿತ ವಿದ್ಯಮಾನ, ಬಾನಿಗೊಂದು ಕೈಪಿಡಿ, ಆಯ್ದ ಸಂಪಾದಕೀಯಗಳು, ಇದು ನಮ್ಮ ಕರ್ನಾಟಕ, ಸಾಹಿತ್ಯ ಸಂವಾದ, ಪರಿಮಳದ ಸುಗ್ಗಿ, ಕಥಾಕುಂಜ, ಬಂಧ-ಬಂಧುರ, ಇತಿಹಾಸದ ಪರಾಮರ್ಶೆ, ದರ್ಶನ - ಸಂದರ್ಶನ, ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ, ವೈದ್ಯಲೋಚನ, ಮಹಿಳಾ ಲೋಕ, ವಚನ ಸಾಹಿತ್ಯ, ಬಿಂಬ - ಪ್ರತಿಬಿಂಬ ಹಾಗೂ ಶಿಕ್ಷಣ ಮತ್ತು ಸಂಸ್ಕೃತಿ - ಇವೇ ‘ಹೊಸತು ವಾಚಿಕೆ’ ಮಾಲೆಯ ಹದಿನೆಂಟು ಸಂಪುಟಗಳು. ಪ್ರತಿಯೊಂದು ಸಂಪುಟದಲ್ಲಿ ಆಯಾಯ ಲೇಖನಗಳ ಲೇಖಕರ ಪರಿಚಯ ನೀಡಿರುವುದೂ ಸಹ ವಾಚಿಕೆಯ ಒಂದು ವೈಶಿಷ್ಟ್ಯ! ‘ಬಂಧ - ಬಂಧುರ’ ಹಾಸ್ಯ ಲೇಖನಗಳ ಸಂಪುಟವನ್ನು ಸಂಪಾದಿಸಿಕೊಟ್ಟವರು ಶ್ರೀಮತಿ ಭಾರತೀ ಕಾಸರಗೋಡು.
|
| |
|
|
|
|
|
|
|
|
|