|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2010 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
84 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
146357 |
ಪರಾಡಳಿತದ ಪದತಳದಲ್ಲಿ ತುಳಿಯಲ್ಪಟ್ಟ ಸಣ್ಣ ದೇಶ ಪೋಲೆಂಡಿನಲ್ಲಿ ಜನಿಸಿದ ಈ ಹುಡುಗಿ, ಕಡು ಬಡತನದಲ್ಲಿ ದುಡಿದು ಕಲಿತು, ಪ್ರತಿಕೂಲ ಪರಿಸ್ಥಿತಿಗಲನ್ನು ಮೀರಿ ಜಗತ್ಪ್ರಸಿದ್ಧ ವಿಜ್ಞಾನಿಯಾದದ್ದು, ಭೌತಶಾಸ್ತ್ರ-ರಸಾಯನಶಾಸ್ತ್ರ ಎರಡರಲ್ಲೂ ನೊಬೆಲ್ ಪಾರಿತೋಷಕ ಪಡೆದದ್ದು, ಒಂದು ಅದ್ಭುತ ರಮ್ಯಕತೆಯಂತೆ ಭಾಸವಾಗುತ್ತದೆ. ವಿಜ್ಞಾನ ಚರಿತ್ರೆಯಲ್ಲೇ ಅತ್ಯಂತ ಕಷ್ಟದ ಆವಿಷ್ಕಾರ ‘ರೇಡಿಯಂ’. ಮೇರಿ ಕ್ಯೂರಿ, ಆಧುನಿಕ ಅನುಕೂಲತೆಗಳೊಂದೂ ಇಲ್ಲದೆ, ಆರ್ಥಿಕ ಮುಗ್ಗಟ್ಟಿನಲ್ಲಿ, ಮುರುಕಲು ಮರದ ಕೊಟ್ಟಿಗೆಯೊಂದರಲ್ಲಿ ‘ರೇಡಿಯಂ’ ಕಂಡುಹಿಡಿದಳು. ‘ರೇಡಿಯೋಆಕ್ಟಿವಿಟಿ’ ಎಂಬ ಹೊಚ್ಚ ಹೊಸ ರಂಗಕ್ಕೆ ಜನ್ಮಕೊಟ್ಟಳು. ಮೇರಿ ರೇಡಿಯಂನನ್ನು ಪೇಟೆಂಟ್ ಮಾಡದೆ, ಮಾನವ ಸೇವೆಗೆ ಮೀಸಲೆಂದು, ತನ್ನ ಸಂಶೋಧನೆಯ ಫಲಿತಾಂಶಗಳನ್ನೆಲ್ಲ ಪ್ರಕಟಿಸಿದ ಆ ಹೊತ್ತು, ಅಣುಯುಗದ ಅರುಣೋದಯವಾಯಿತು. ಮೇರಿಕ್ಯೂರಿಯ ಈ ಜೀವನ ಚಿತ್ರ ಒಂದು ಕಟ್ಟುಕತೆಯಂತೆ, ಸಾಹಸಗಾಥೆಯಂತೆ ಕಂಡರೆ ಅಚ್ಚರಿಯಿಲ್ಲ.
|
ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|