|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
"ಬೆಳ್ಳಿಮೈ ಹುಳ" ಲೇಖಕಿ ಜ.ನಾ. ತೇಜಶ್ರೀ ಅವರ ಕತಾಸಂಕಲನ. ಪತ್ರಕರ್ತ, ಲೇಖಕ ಚ.ಹ. ರಘುನಾಥ್ ಮುನ್ನುಡಿ ಬರೆದು ತೇಜಶ್ರೀ ನನ್ನ ಓರಗೆಯ ಬರಹಗಾರ್ತಿ, ನಾನು ಮೆಚ್ಚುಗೆಯಿಂದ ಅಸೂಯೆಯಿಂದ ನೋಡುವ ಕವಯತ್ರಿ, ಈಗ ಕಥೆಗಳ ಮೂಲಕ ಓದುಗರೆದುರು ಹೊಸ ಪೋಷಾಕಿನಲ್ಲಿ ಪ್ರಕಟಗೊಳ್ಳುತ್ತಿರುವ ಅವರು, "ಬೆಳ್ಳಿಮೈ ಹುಳ" ದ ಮೂಲಕ ಹೊಸ ಪ್ರಭೆಗಾಗಿ ಹಂಬಲಿಸುತ್ತಿರುವ ಕನ್ನಡ ಕಥಾಲೋಕಕ್ಕೆ ಹೊಸ ರಂಗೊಂದನ್ನು ಕೂಡಿಸಿದ್ದಾರೆ’ ಎನ್ನುತ್ತಾರೆ ಚ.ಹ.ರಘುನಾಥ್.
ಓದುಗರಿಗಿಂತಲೂ ಬರೆಯುವವರೇ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ಮೇಲ್ನೋಟಕ್ಕೆ ಕಾಣಿಸುವ ಕನ್ನಡ ಸಾಹಿತ್ಯ ಸಂದರ್ಭ ಸಂಖ್ಯಾದೃಷ್ಟಿಯಿಂದ ಸಮೃದ್ಧವಾಗಿದ್ದರೂ, ಆ ಉತ್ಸಾಹ ಬರವಣಿಗೆಯ ಅಸಲು ಕಸುಬುದಾರಿಕೆಯಲ್ಲಿ ಕಾಣಿಸದಿರುವುದು ಸಾಹಿತ್ಯದ ಉತ್ತಮಿಕೆಯ ಬಗ್ಗೆ ಕಾಳಜಿಯುಳ್ಳವರನ್ನು ಆತಂಕ್ಕೀಡು ಮಾಡುವಂತಹದ್ದು, ಇಂಥ ಸಂಕ್ರಮಣ ಸಂದರ್ಭದಲ್ಲಿ ಪ್ರಕಟಗೊಂಡಿರುವ ತೇಜಶ್ರೀ ಅವರ ಕಥೆಗಳ ಶಿಲ್ಪದ ಅಚ್ಚುಕಟ್ಟುತನ ಮತ್ತು ಭಾಷೆಯ ಕುಸುರಿತನ, ಸೂಕ್ಷ್ಮ ಭಾವಲೋಕದೊಂದಿಗೆ ಮಿಳಿತಗೊಂಡಿರುವುದು ನನ್ನಂಥ ಓದುಗರಲ್ಲಿ ಸಂಭ್ರಮ ಹುಟ್ಟಿಸುವಂತಹದ್ದು ಎಂದೂ ಅವರು ಪ್ರಶಂಸಿಸಿದ್ದಾರೆ.
|
ಲೇಖಕಿ ಜ.ನಾ. ತೇಜಶ್ರೀ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ, ಹನ್ನೊಂದು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಹಲವಾರು ಕವನ ಸಂಕಲನ, ಅನುವಾದಿತ ಕೃತಿ ಹಾಗೂ ಸಂಪಾದನೆ ಕೂಡ ಮಾಡಿದ್ದಾರೆ. ಯು. ಆರ್. ಅನಂತಮೂರ್ತಿಯವರ ಆತ್ಮಕತೆ "ಸುರಗಿ"ಯ ಸಂಯೋಜನೆ ಮತ್ತು ನಿರೂಪಣೆ ಕೂಡ ಮಾಡಿದ್ದಾರೆ. ಇವರಿಗೆ ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
|
|
| |
|
|
|
|
|
|
|
|
|