Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಬೇಲೂರು ಹಳೇಬೀಡು ಶಿಲ್ಪಕಲಾ ಸಾಮ್ರಾಜ್ಯ
ಲೇಖಕರು: ಪುಂಡಲೀಕ ಕಲ್ಲಿಗನೂರು, Pundalika Kalliganuru

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 1450    
5%
Rs. 1378/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕಿಕ್ಕೇರಿ ಪ್ರಕಾಶನ್, Kikkeri Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2016
ರಕ್ಷಾ ಪುಟ : ಉತ್ತಮ
ಪುಟಗಳು : 406
ಪುಸ್ತಕದ ಗಾತ್ರ : A4 Size
ಕೋಡ್ : 198456

ಕಲಾವಿದ ಪುಂಡಲೀಕ ಕಲ್ಲಿಗನೂರು ಮತ್ತು ಅವರ ತಂಡ ಹಾಸನ ಜಿಲ್ಲೆಯ ಹೊಯ್ಸಳ ದೇವಾಲಯಗಳಾದ ಬೇಲೂರು–ಹಳೇಬೀಡಿನ ಶಿಲ್ಪಕಲೆಯನ್ನು ಕಲಾತ್ಮಕವಾಗಿ ಸೆರೆ ಹಿಡಿದು ಈ ಪುಸ್ತಕದಲ್ಲಿ ಕೊಟ್ಟಿದೆ.

ಇಲ್ಲಿ ಕೊಡಲಾಗಿರುವ ಪ್ರತಿಯೊಂದು ಚಿತ್ರವೂ ಬಣ್ಣದಾಗಿದ್ದು ಶಿಲ್ಪಕಲೆಯ ಹಲವು ಆಯಾಮಗಳನ್ನು, ಅದು ಮುಟ್ಟಿರುವ ಎತ್ತರವನ್ನು, ಅದರ ಸೂಕ್ಷ್ಮತೆಯನ್ನು ಸೂಚಿಸುವಂತಿದೆ. ಛಾಯಾಚಿತ್ರಕ ಪುಂಡಲೀಕ ಕಲ್ಲಿಗನೂರು ತಮ್ಮ ಚಿತ್ರಗಳೂ ಸೇರಿದಂತೆ ಸಹ ಚಿತ್ರಕರಾದ ದೀಪು ಬೇಲೂರು, ಮಹಾಲಿಂಗು, ಎಂ. ವಿಶ್ವನಾಥ್‌, ವಿಪಿನ್‌ ಬಾಳಿಗಾ ಅವರ ಚಿತ್ರಗಳನ್ನು ಇಟ್ಟುಕೊಂಡು ಈ ಸಂಪುಟವನ್ನು ಸಂಪಾದಿಸಿದ್ದಾರೆ. ಇವರೆಲ್ಲರ ಅಪಾರ ಶ್ರಮ ಇಲ್ಲಿ ಪ್ರತಿ ಪುಟಗಳಲ್ಲಿ ಕಾಣುತ್ತದೆ. ಜೊತೆಗೆ ಆ ಶಿಲ್ಪಗಳ ಕುರಿತ ವಿವರಣೆಯೂ ಈ ಸಂಪುಟದಲ್ಲಿದೆ.

ಬೇಲೂರಿನ ಚೆನ್ನಕೇಶವ, ನಾಟ್ಯರಾಣಿ ಶಾಂತಲೆ, ರತಿ–ಮನ್ಮಥರು, ವಿಷ್ಣು ಶಿಲ್ಪಗಳು, ಶಿಲಾಬಾಲಿಕೆಯರ ಶಿಲ್ಪಗಳ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ಜೋಡಿ ದೇವಾಲಯಗಳು, ಅಲ್ಲಿನ ದೇವತೆಗಳು, ಮಿಥುನ ಶಿಲ್ಪಗಳು, ರಾಮಾಯಣ–ಮಹಾಭಾರತ ಕಥಾಪಟ್ಟಿಕೆ ಮತ್ತಿತರ ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ.

ಈ ದೇವಾಲಯಗಳ ಎಲ್ಲ ಕಡೆಯೂ ಇರುವ ಶಿಲ್ಪಗಳು ಪುರಾಣ, ಇತಿಹಾಸ, ಧರ್ಮ, ಕಲೆಗಳ ಮೂರ್ತು ರೂಪವಾಗಿವೆ. ದ್ರಾವಿಡ–ನಾಗರ ಶೈಲಿಯ ಬೆರಕೆ ಈ ಶಿಲ್ಪಗಳು.ಇಲ್ಲಿನ ಚಿತ್ರಗಳ ಹಿಂದಿರುವುದು ಕಲಾತ್ಮಕ ದೃಷ್ಟಿಕೋನ ಮಾತ್ರವಲ್ಲ, ಅವುಗಳ ಸೌಂದರ್ಯವನ್ನು ಕನ್ನಡಿಗರಿಗೆ ವಿವರವಾಗಿ ತೋರುವ ಮಾರ್ಗದರ್ಶಿ ಗುಣವೂ ಇದೆ. ಈ ಶಿಲ್ಪಕಲೆಯ ಪ್ರತಿಯೊಂದು ಭಾಗವನ್ನೂ ಪುಂಡಲೀಕ ಮತ್ತು ಅವರ ತಂಡ ಸೆರೆಹಿಡಿಯಲು ಪ್ರಯತ್ನಿಸಿದೆ. ಈಗಾಗಲೇ ಈ ದೇವಾಲಯಗಳ ಅಸಂಖ್ಯ ಚಿತ್ರಗಳನ್ನು ಅನೇಕರು ಚಿತ್ರಿಸಿದ್ದಾರೆ ಮತ್ತು ಅವನ್ನು ದಾಖಲಿಸಿದ್ದಾರೆ. ಅವುಗಳ ನಡುವೆ ಇದು ಎಲ್ಲಿ ನಿಲ್ಲುತ್ತದೆ ಎಂಬುದನ್ನು ಪರಿಣತರು ನಿರ್ಧರಿಸಬಹುದು.

Best Sellers
ಭಾರತ ಸಂವಿಧಾನ ಮತ್ತು ಸರ್ಕಾರ (ಪರಿಷ್ಕೃತ ಆವೃತಿ)
ರಾಜಶೇಖರ ಎಚ್ ಎಂ, Rajshekar H M
Rs. 523/-   Rs. 550
ನೂರ್ ಇನಾಯತ್ ಖಾನ್ : ನಾಝಿ ಹೋರಾಟದ ಆರ್ದ್ರ ಕಾವ್ಯ
ಚಂದ್ರಶೇಖರ ಮಂಡೆಕೋಲು, Chandrashekhar Mandakola
Rs. 144/-   Rs. 160
ಡಾ. ಶಿವರಾಮ ಕಾರಂತರ ಸಮಗ್ರ ನಾಟಕಗಳು : ಭಾಗ 1 ರಿಂದ 4
ಶಿವರಾಮ ಕಾರಂತ ಕೆ, Shivarama Karantha K
Rs. 1700/-   Rs. 2000
My Journey - Abdul Kalam (English)
Abdul Kalam A p j
Rs. 176/-   Rs. 195

Latest Books
ಸೌಹಾರ್ದ ಸಂಕೇತ : ಸ್ವಾಮಿ ವಿವೇಕಾನಂದ
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 18/-   Rs. 20
ದಾವೂದ್ ಇಬ್ರಾಹಿಂನ ಜೊತೆ ನನ್ನ ಟೆಲಿಫೋನ್ ಸಂಭಾಷಣೆ ಹಾಗೂ ಕೆಲ ರೋಚಕ ಸಿಬಿಐ ತನಿಖೆಗಳು
ನೀರಜ್ ಕುಮಾರ್, Neeraj Kumar
Rs. 135/-   Rs. 150
ಮರೀಚಿಕೆ : ಆರಿಫ್ ಲವ್ಸ್ ಸುಮಿತ್ರಾ (ಕಾದಂಬರಿ)
ಅಬ್ದುಲ್ಲಾಹ್ ಖಾನ್, Abdullah Khan
Rs. 180/-   Rs. 200
God Save the Honble Supreme Court
ಫಾಲಿ ಎಸ್ ನರಿಮನ್,FALI S. NARIMAN
Rs. 539/-   Rs. 599


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.