|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2007 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
176 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
145335 |
ಬಿ.ಜಿ.ಎಲ್. ಸ್ವಾಮಿ ಕನ್ನಡನಾಡು ಕಂಡ ಅಪರೂಪದ ಚೇತನ. ಕನ್ನಡದ ಪ್ರಸಿದ್ಧ ಸಾಹಿತಿ ಡಿ.ವಿ. ಗುಂಡಪ್ಪನವರ ಮಗನಾದರೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಸ್ಥಾನ ರೂಪಿಸಿಕೊಂಡವರು. ಓದಿದ್ದು ಸಸ್ಯವಿಜ್ಞಾನ. ಕೆಲಸ ನಿರ್ವಹಿಸಿದ್ದು ತಮಿಳುನಾಡಿನಲ್ಲಿ. ಬರೆದದ್ದು ಕನ್ನಡದಲ್ಲಿ. ಅದೂ ಎಂತಹ ಕನ್ನಡ ಅಂತೀರಿ? ಕನ್ನಡದಲ್ಲಿ ಈ ಬಗೆಯ ಸಾಹಿತ್ಯ ರಚನೆ ಸಾಧ್ಯವೇ ಇಲ್ಲ ಎಂದುಕೊಳ್ಳುವವರಿಗೆ ಉತ್ತರವೋ ಎಂಬಂತೆ ಸಸ್ಯಪುರಾಣವನ್ನು ತಿಳಿಗನ್ನಡದಲ್ಲಿ ಲಘು ಹಾಸ್ಯದೊಂದಿಗೆ ನಿರೂಪಿಸಿ ಜನಮನವನ್ನು ಗೆದ್ದರು. ತಮ್ಮ ವೃತ್ತಿಜೀವನದ ಪ್ರಸಂಗಗಳನ್ನು ವಾರೆನೋಟದಿಂದಲೇ ನೋಡಿ, ಕನ್ನಡಿಗರಿಗೆ ಅದರ ಮತ್ತೊಂದು ಮಗ್ಗುಲನ್ನು ಪರಿಚಯ ಮಾಡಿಕೊಟ್ಟರು. ಅವರ ‘ತಮಿಳು ತಲೆಗಳ ನಡುವೆ’, ‘ಹಸುರು ಹೊನ್ನು’, ‘ಕಾಲೇಜು ರಂಗ’, ‘ಕಾಲೇಜು ತರಂಗ’ ಕೃತಿಗಳನ್ನು ಓದಿದವರಿಗೆ ಹೊಸ ಬಗೆಯ ಹಾಸ್ಯದ ಪರಿಚಯವಾದೀತು.
ಇಲ್ಲಿ ಅವರ ಸಾಹಿತ್ಯ ಕೃತಿಗಳಿಂದ ಆಯ್ದ ಬರಹಗಳನ್ನು ಮಾತ್ರ ಸಂಗ್ರಹಿಸಿ ಕೊಡಲಾಗಿದೆ. ಉಳಿದ ಓದಿಗೆ ಮೂಲ ಕೃತಿಗಳಿಗೇ ಮೊರೆಹೋಗಬೇಕು.
|
| |
|
|
|
|
|
|
|
|
|