|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸೊಗಸಾದ ಕಥೆ ಕಾದಂಬರಿಯಂತೆಯೇ ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಕೃತಿಯು ಸದ್ಯೋಭವಿಷ್ಯದಲ್ಲಿ ಬೇಟೆಯ ಕುರಿತು ಆಕರಗ್ರಂಥವಾಗುವಷ್ಟು ಶ್ರೇಷ್ಠ ಮಟ್ಟದಲ್ಲಿ ಇದೆ ಎಂದರೆ ಅತಿಶಯೋಕ್ತಿಯಲ್ಲ. ಇದರಲ್ಲಿ ಅಲ್ಲಲ್ಲಿ ಬರುವ ಕತೆಗಳು ಪ್ರವಾಹದೊಂದಿಗೆ ಸಹಜವಾಗಿ ಉರುಳಿಕೊಂಡು ಬರುವ, ಇತರ ವಸ್ತುಗಳಂತೆ ಹಾಸು ಹೊಕ್ಕಾಗಿ ಸೇರಿ ನೈಜವಾಗಿ ಪಡಿಮೂಡಿದೆ.
ಕರ್ಪಿನ ಕಿತಾಪತಿಯಲ್ಲಿ ಮೊದಲ ವಿಭಾಗವು ಮುಗಿದ ಕೂಡಲೇ ಆರಂಭವಾಗುವ ಹಾರೋತಿ(ರಾವೋಂತಿ)ಯ ವಿಚಾರವು ಧಿಡೀರನೆ ಬಂದು ಓದುಗನ ಓದಿನ ಓಟಕ್ಕೆ ಒಮ್ಮೆ ಬಿರಿಯಿಕ್ಕಿದರೂ ಮುಮ್ದೆ ಅದು ಬಹು ಸೊಗಸಾಗಿ ಸಾಗಿ - ಓದುಗನ ಕುತೂಹಲವು ಕೊನರಿಡುವಂತೆ ಮಾಡುತ್ತದೆ.
‘ಮಯೂರಲಾಸ್ಯ’ ಈ ಹಿಂದಿನ ಕೆಂಟ್ ಕುಟುಂಬದ ಕಥಾನಕದಂತೆಯೇ ಅತ್ಯುನ್ನತ ಮಟ್ಟದಲ್ಲಿ ಬರುವ ಭರವಸೆಯನ್ನಿತ್ತಿದೆ. ಬಹುಶಃ ಈ ಅಧ್ಯಾಯವು ಈ ಕೃತಿ ಅತ್ಯುತ್ತಮ ವಿಭಾಗವೆಂದು ಓದುಗರು ಅಭಿಪ್ರಾಯಪಟ್ಟರೆ ಅಚ್ಚರಿಯಿಲ್ಲ.
|
| |
|
|
|
|
|
|
|
|
|