|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಚಿಂತನ ಪುಸ್ತಕ, Chinthana Pusthaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
244 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381187227 |
ಕೋಡ್ |
: |
189381 |
ಭಾರತದ ಪ್ರಖ್ಯಾತ ಇತಿಹಾಸಶಾಶ್ತ್ರಜ್ಞಾ ಇರ್ಫಾನ್ ಹಬೀಬ್ ಬರೆದ ಈ ಗ್ರಂಥ ಇತಿಹಾಸ ಬರವಣಿಗೆಯಲ್ಲಿಯೇ ಒಂದು ವಿನೂತನವಾದದ್ದು. ಇದು ಆಧುನಿಕ ಭಾರತದ ಆರ್ಥಿಕ ಚರಿತ್ರೆಯಲ್ಲ. ಬದಲಾಗಿ ಆಧುನಿಕ ಭಾರತದ ಒಂದು ನಿರ್ದಿಷ್ಟ ಕಾಲಘಟ್ಟದ ಅರ್ಥಶಾಸ್ತ್ರೀಯ ವಿಶ್ಲೇಷಣೆ. ಅಂದರೆ ಈ ಗ್ರಂಥದಲ್ಲಿ ಏಕಕಾಲದಲ್ಲಿ ಇತಿಹಾಸದ ಶಾಸ್ತ್ರೀಯತೆ ಹಾಗೂ ಅರ್ಥಶಾಸ್ತ್ರೀಯತೆ ಸಮ್ಮಿಲನಗೊಂಡಿದೆ. ಭಾರತದ ಆರ್ಥಿಕತೆಯ ಒಂದು ಮಹತ್ವದ ಚಾರಿತ್ರಿಕ ಕಾಲಘಟ್ಟದಲ್ಲಿ ಅರ್ಥಶಾಸ್ತ್ರೀಯತೆಯ ಪರಿಭಾಷೆಯನ್ನು ಚಾರಿತ್ರಿಕವಾಗಿ ಈ ಗ್ರಂಥ ಬಿಂಬಿಸುತ್ತದೆ. 1858 ರಿಂದ 1941ರ ಭಾರತದ ಆರ್ಥಿಕತೆಯ ಪರಿದೃಶ್ಯವನ್ನು ಹಬೀಬ್ ಅರ್ಥಶಾಸ್ತ್ರೀಯ ಚೌಕಟ್ಟಿನಲ್ಲಿ ಚಾರಿತ್ರಿಕ ವಿಮರ್ಶೆಗೆ ಒಳಪಡಿಸುತ್ತಾರೆ. ಆದ್ದರಿಂದಲೇ, ಭಾರತದ ಆರ್ಥಿಕತೆಯನ್ನು ವಿವರಿಸುವ ಹಾಗೂ ವಿಶ್ಲೇಷಿಸುವ ವಿಭಿನ್ನ ಪ್ರಕೃತಿಯ ಅರ್ಥಶಾಸ್ತ್ರೀಯ ವ್ಯಾಖ್ಯಾನಗಳು ಮತ್ತು ಸಿದ್ಧಾಂತಗಳು ಹಬೀಬ್ರವರ ವಿಧಾನಕ್ರಮೀಯ ವಿಶ್ಲೇಷಣೆಯಲ್ಲಿ ಗುರುತಿಸಲ್ಪಟ್ಟಿವೆ ಹಾಗೂ ವಿಮರ್ಶಿಸಲ್ಪಟ್ಟಿವೆ. ಅತ್ಯಂತ ಸಂಕೀರ್ಣವಾದ ಮತ್ತು ಚಾರಿತ್ರಿಕವಾಗಿ ಮಹತ್ವಪೂರ್ಣವಾದ ಕಾಲಘಟ್ಟವೊಂದರ ಅರ್ಥಶಾಸ್ತ್ರೀಯ ವಿಶ್ಲೇಷಣೆಯ ಉದಾಹರಣೆ ಈ ಗ್ರಂಥದಲ್ಲಿ ಕಾಣಬಹುದು.
ಇಂತಹ ಕ್ಲಿಷ್ಟವಾದ ಗ್ರಂಥವೊಂದನ್ನು ಅನುವಾದಿಸುವುದು ಸ್ವತಂತ್ರ ಗ್ರಂಥ ರಚನೆಯಷ್ಟೇ ಕಷ್ಟದ ಕೆಲಸ. ಗ್ರಂಥದಲ್ಲಿ ಕಂಡುಬರುವ ಸೂಕ್ಷ್ಮಾತಿಸೂಕ್ಷ್ಮ ಪದರಗಳನ್ನು, ಪ್ರತಿಪಾದನೆಗಳನ್ನು ಹಾಗೂ ನವಿರಾದ ನಿರೂಪಣೆಗಳನ್ನು ಗ್ರಂಥಕರ್ತನ ಊಹಿತ ಆಶಯಕ್ಕೆ ಭಂಗ ಬರದಂತೆ ಮರು ನಿರೂಪಿಸುವ ಕೆಲಸವನ್ನು ಲೋಕೇಶ್ ಮಾಡಿದ್ದಾರೆ. ಹಬೀಬ್ರವರ ಪುಸ್ತಕದ ಬಗೆಗಿನ ಅವರ ಅರಿವು ಮತ್ತು ಈ ಅರಿವನ್ನು ಅವರು ಕನ್ನಡದಲ್ಲಿ ಪ್ರತಿನಿಧಿಸಿದ ವೈಖರಿ ಶ್ಲಾಘನೀಯವಾದದ್ದು.
|
ಇರ್ಫಾನ್ ಹಬೀಬ್ ನಮ್ಮ ಕಾಲದ ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರು ಹಾಗೂ ಮಾರ್ಕ್ಸಿಸ್ಟ್ ದೃಷ್ಟಿಕೋನದಿಂದ ಬರೆಯುವ ಎಡಪಂಥೀಯ ಚಿಂತನೆಯ ಲೇಖಕರಲ್ಲಿ ಪ್ರಮುಖರು. ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಇತಿಹಾಸ ಬರಹಗಾರರು - ‘ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್’ನ ಅಧ್ಯಕ್ಷರಾಗಿದ್ದ ಇವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್. ಮೊಘಲ್ ಇಂಡಿಯಾ, ಬ್ರಿಟಿಷ್ ಇಂಡಿಯಾ, ಮಧ್ಯಕಾಲೀನ ಇಂಡಿಯಾ ಬಗ್ಗೆ ನಿಖರವಾಗಿ ಬರೆಯಬಲ್ಲವರು.
|
|
| | |
|
|
|
|
|
|
|
|