|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತ ಸಂವಿಧಾನವನ್ನು ಓದಿ, ಅರ್ಥ ಮಾಡಿಕೊಂಡು ಆ ಮೂಲಕ ಈ ದೇಶದ ನಾಗರಿಕರಾಗಿ ನಮ್ಮ ಹೊಣೆಗಾರಿಕೆಗಳನ್ನು ಅರಿತುಕೊಳ್ಳುವ ತುರ್ತು ಎಂದಿಗಿಂತ ಹೆಚ್ಚಾಗಿದೆ. ಸ್ವಾತಂತ್ರ್ಯ ಸಂಗ್ರಾಮ ಮತ್ತು ಅದರ ಫಲವಾಗಿ ಸ್ವಾತಂತ್ರ್ಯ ಬಂದ ವಿದ್ಯಮಾನಗಳ ತೀವ್ರತೆ ಸ್ವಲ್ಪವೂ ತಟ್ಟಿರದ ನಮ್ಮ ಈಗಿನ ಪೀಳಿಗೆಗೆ ಅದರ ಮಹತ್ವವನ್ನು ಅರ್ಥ ಮಾಡಿಸುವ ಮೂಲಕ ಭಾರತ ಸಂವಿಧಾನದ ಪ್ರಸ್ತುತತೆಯನ್ನು ಮನವರಿಕೆ ಮಾಡಿಸುವ ಪ್ರಯತ್ನ ಇಲ್ಲಿದೆ.
ಸರಕಾರವೇನೋ ಎಲ್ಲ ಪದವಿ ವ್ಯಾಸಂಗದಲ್ಲಿ "ಭಾರತ ಸಂವಿಧಾನ"ವನ್ನು ಒಂದು ವಿಷಯವನ್ನಾಗಿ ವಿಧಿಸಿದೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ಹೇರಿಕೆ ಎಂದೇ ಭಾವಿಸುತ್ತಾರೆ. ಏಕೆಂದರೆ ಪಠ್ಯಕ್ರಮ ಶುಷ್ಕ, ಬೋಧನೆಯೂ ಅಷ್ಟೇ ಅಸ್ವಾರಸ್ಯಕರ. ಓದಿ ಮನನ ಮಾಡಿಕೊಳ್ಳಬೇಕು ಎಂಬ ವಿಧ್ಯಾರ್ಥಿಗಳಿಗೂ ಇದು ಅರಗದಂಥ ಪರಿಸ್ಥಿತಿ. ಸಂವಿಧಾನದ ಗ್ರಂಥವನ್ನು ನೇರವಾಗಿ ಓದಲು ನೋಡಿದರೆ ಅದು ಕಬ್ಬಿಣದ ಕಡಲೆಯಾಗುವುದು ಸಹಜವೇ, ಏಕೆಂದರೆ ಅದು ಕಾನೂನು ಗ್ರಂಥ. ಬದಲಿಗೆ ಅದರ ಸುತ್ತಮುತ್ತಲಿನ ಸ್ವಾರಸ್ಯಕರ ವಿದ್ಯಮಾನಗಳನ್ನು ಅರಿತುಕೊಂಡು ಹಾದಿಯನ್ನು ಸುಗಮಗೊಳಿಸಿಕೊಂಡರೆ ಸಂವಿಧಾನವೂ ನಮಗೆ ತನ್ನ ಒಡಲನ್ನು ಬಿಚ್ಚಿಕೊಳ್ಳುತ್ತದೆ. ಇಂಥ ಪ್ರಯತ್ನವೇ ಸಂವಿಧಾನ ಸಾಕ್ಷರತೆಯ ಈ ಕೈಪಿಡಿ. “ಭಾರತ ಸಂವಿಧಾನ : ಅರ್ಥ - ಅರಿವು - ಜಾಗೃತಿ”.
|
| |
|
|
|
|
|
|
|
|
|