|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಪಂಚದಲ್ಲಿ ಸುಮಾರು 3500 - 4000 ಭಾಷೆಗಳಿವೆ. ಸ್ವರ್ಗಕ್ಕೆ ಲಗ್ಗೆ ಇಡಲು ಆಕಾಶದೆತ್ತರದ ಗೋಪುರವೊಂದನ್ನು ಕಟ್ಟಲು ಹೊರಟವರ ಒಗ್ಗಟ್ಟನ್ನು ಮುರಿಯುವುದಕ್ಕಾಗಿ ಅವರ ಭಾಷೆಗಳು ಬೇರೆ ಬೇರೆ ಆಗಲಿ ಎಂದು ದೇವರು ಶಪಿಸಿದ. ಒಬ್ಬರ ಮಾತು ಇನ್ನೊಬ್ಬರಿಗೆ ತಿಳಿಯದಂತಾಗಿ ಗೊಂದಲವುಂಟಾಯಿತು. ಆದರೆ ಮಾನವನ ಬುದ್ಧಿಶಕ್ತಿ ಮತ್ತು ದೃಢ ಸಂಕಲ್ಪದ ಇದಿರಲ್ಲಿ ದೇವರ ಶಾಪ ವಿಫಲವಾಯಿತು; ಶಾಪದಿಂದ ಪಾರಾಗಲು ಮಾನವ ಭಾಷಾಂತರದ ಮಾರ್ಗವನ್ನು ಹುಡುಕಿ ಹಿಡಿದ... ಕ್ರಿಸ್ತಪೂರ್ವ 1500ರ ಸುಮಾರಿಗೆ ಗಿಲ್ಗಮೇಶನ ಮಹಾಕಾವ್ಯ ಎಂಬ ಸುಮೆರಿಯನ್ ಭಾಷೆಯ ಕೃತಿ ಅಕ್ಕಡಿ ಭಾಷೆಗೆ ಅನುವಾದವಾಯಿತು. ಅದು ಈಗ ಲಭ್ಯವಿರುವ ಮೊದಲ ಭಾಷಾಂತರ ಕೃತಿ. ಭಾಷಾಂತರ ಕಲೆಯ ಪ್ರಾಚೀನತೆಯನ್ನದು ತೋರಿಸುತ್ತದೆ... ಜ್ಞಾನಕ್ಕೆ ಮೇರೆಗಳಿಲ್ಲ, ಭಾಷೆಗಳ ಪರಿಮಿತಿಗಳಿಲ್ಲ. ಭಾಷಾಂತರ ಕಲೆಯು ಜ್ಞಾನದ ಪ್ರವಾಹ ಅವ್ಯಾಹತವಾಗುವುದಕ್ಕೆ, ಸರ್ವವ್ಯಾಪಿಯಾಗುವುದಕ್ಕೆ ಸಹಾಯ ಮಾಡುತ್ತದೆ... ಭಾಷಾಂತರವು ಪ್ರಾಮಾಣಿಕವಾಗಿರಬೇಕು, ಭಾವಾಂತರವಾಗಬಾರದು. ಭಾಷಾಂತರಕಾರನಿಗೆ ಉಭಯ ಭಾಷೆಗಳ ಮತ್ತು ಕೃತಿಯ ವಸ್ತುವಿನ ಮೇಲೆ ಪ್ರಭುತ್ವವಿರಬೇಕು. ಮೇಲಿಂದ ಮೇಲೆ ಓದಿ, ಪದಕ್ಕೆ ಪದ ಜೋಡಿಸಿ, ಭಾಷಾಂತರಿಸಿದರೆ ಮೂಲದ ಅರ್ಥ ಮತ್ತು ಸತ್ವ ವಿಕಾರವಾಗುತ್ತದೆ... ಅಭ್ಯಾಸ, ತುಲನಾತ್ಮಕ ಪರಿಶೀಲನೆ, ಪರ್ಯಾಯ ಪದಗಳೊಳಗಿಂದ ಸೂಕ್ತವಾದುದನ್ನು ಆಯ್ಕೆ ಮಾಡುವ ಸಾಮರ್ಥ್ಯ, ನುಡಿಗಟ್ಟುಗಳ ಸಾರ ಕೆಡದಂತೆ ಎಚ್ಚರಿಕೆ, ಎರಡೂ ಗಮನಿಸಬೇಕು... ಎಸ್. ಆರ್. ಭಟ್ರವರ ಮರಣಾನಂತರ ಪ್ರಕಟವಾಗುತ್ತಿರುವ ಈ ಕಿರುಹೊತ್ತಿಗೆ, ಅವರ ಉತ್ತಮ ಭಾಷಾಂತರ ಕಲೆಯ ತಿರುಳನ್ನೇ ಓದುಗರ ಮುಂದೆ ತೆರೆದಿಡುತ್ತದೆ.
|
| |
|
|
|
|
|
|
|
|
|